Rashi bhavishya | ಗುರುವಾರದ ರಾಶಿ ಭವಿಷ್ಯ 03 ಏಪ್ರಿಲ್ 2025

Rashi bhavishya : ಜಾತಕ ಇಂದು ಏಪ್ರಿಲ್ 03 ಗುರುವಾರ 2025 ಜ್ಯೋತಿಷ್ಯ ಶಾಸ್ತ್ರದ (Astrology), ಪ್ರಕಾರ 12 ರಾಶಿ ಸೇರಿದಂತೆ ಹೆಚ್ಚಿನ ಮಾಹಿತಿಗೆ ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು ಸೋಮಶೇಖರ್…

Today rashi bhavishya

Rashi bhavishya : ಜಾತಕ ಇಂದು ಏಪ್ರಿಲ್ 03 ಗುರುವಾರ 2025 ಜ್ಯೋತಿಷ್ಯ ಶಾಸ್ತ್ರದ (Astrology), ಪ್ರಕಾರ 12 ರಾಶಿ ಸೇರಿದಂತೆ ಹೆಚ್ಚಿನ ಮಾಹಿತಿಗೆ ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು ಸೋಮಶೇಖರ್ ಗುರೂಜಿ (B.Sc) ನೀಡಿರುವ ಮಾಹಿತಿ ನೋಡಿ

  • ಸೂರ್ಯೋದಯ – 6:12 ಬೆ
  • ಸೂರ್ಯಾಸ್ತ – 6:26 ಸಂಜೆ
  • ಶಾಲಿವಾಹನ ಶಕೆ -1947
  • ಸಂವತ್-2081
  • ವಿಶ್ವಾವಸು ನಾಮ ಸಂವತ್ಸರ,
  • ಉತ್ತರ ಅಯಣ,
  • ಶುಕ್ಲ ಪಕ್ಷ,
  • ವಸಂತ ಋತು,
  • ಚೈತ್ರ ಮಾಸ,
  • ತಿಥಿ – ಷಷ್ಠಿ
  • ನಕ್ಷತ್ರ – ರೋಹಿಣಿ
  • ಯೋಗ – ಸೌಭಾಗ್ಯ
  • ಕರಣ – ಕೌಲವ
  • ರಾಹು ಕಾಲ – 01:30 ದಿಂದ 03:00bವರೆಗೆ
  • ಯಮಗಂಡ – 06:00 ದಿಂದ 07:30 ವರೆಗೆ
  • ಗುಳಿಕ ಕಾಲ – 09:00 ದಿಂದ 10:30 ವರೆಗೆ
  • ಬ್ರಹ್ಮ ಮುಹೂರ್ತ – 4:36 ಬೆ. ದಿಂದ 5:24 ಬೆ. ವರೆಗೆ
  • ಅಮೃತ ಕಾಲ – 9:28 ರಾ.ದಿಂದ 10:59 ರಾ. ವರೆಗೆ
  • ಅಭಿಜಿತ್ ಮುಹುರ್ತ – 11:55 ಬೆ. ದಿಂದ 12:43 ಮ. ವರೆಗೆ

ಮೇಷ ರಾಶಿ ಭವಿಷ್ಯ (Mesha rashi bhavishya)

ಗುರುಸ್ವಾಮಿ ಅನುಗ್ರಹದಿಂದ ಆದಾಯ ವೃದ್ಧಿ, ಸ್ಥಿರಾಸ್ತಿಯನ್ನು ಖರೀದಿಸುವ ಯೋಗವಿದೆ, ಸರ್ಕಾರಿ ಕೆಲಸ ಕಾರ್ಯಗಳು ನಿಧಾನವಾಗಿ ಯಶಸ್ಸು ಕಾಣುವುದು, ಉದ್ಯೋಗ ಪ್ರಯತ್ನಿಸಿದವರಿಗೆ ಉದ್ಯೋಗ ಭಾಗ್ಯ, ಶತ್ರುಗಳು ನಿಮಗೆ ಶರಣಾಗತಿಯಾಗುವವರು, ಹೈನುಗಾರಿಕೆಯಲ್ಲಿ ಭಾರಿ ಧನ ಲಾಭ ಗಳಿಸುವಿರಿ, ಸಂಗಾತಿಯಿಂದ ಧನಸಾಯ ಸಿಗಲಿದೆ, ಆಭರಣ ವ್ಯಾಪಾರಿಗಳಿಗೆ ಹೊಸ ಅಂಗಡಿ ಪ್ರಾರಂಭಿಸುವ ಚಿಂತನೆ, ಪಿತ್ರಾರ್ಜಿತ ಆಸ್ತಿ ನಿಧಾನಗತಿಯಿಂದ ಪಡೆಯಲಿದ್ದೀರಿ, ತಾಳ್ಮೆಯಿಂದ ಇರುವುದು ಉತ್ತಮ, ವೃತ್ತಿ ಕ್ಷೇತ್ರದಲ್ಲಿ ಧನ ಲಾಭವಿದೆ.

ಗ್ರಾಹಕರೋಡನೆ ಸಂಘರ್ಷ ಬೇಡ, ಅವಿವಾಹಿತರಿಗೆ ಮದುವೆ ಯೋಗ, ರೈತರ ಮಕ್ಕಳಿಗೆ ಉತ್ತಮ ಕಡೆ ಮದುವೆ ಸಂಬಂಧ, ಟೆಕ್ನಿಷಿಯನ್ ವೃತ್ತಿ ಹೊಂದಿದವರಿಗೆ ಭಾರಿ ಬೇಡಿಕೆ ಹಾಗೂ ವಿದೇಶಕ್ಕೆ ಹೋಗುವ ಅವಕಾಶ ಕೂಡ ಸಿಗಲಿದೆ, ಆರೋಗ್ಯ ಇಲಾಖೆದಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಖಾಯಂ ಆಗುವ ಅವಕಾಶ, ಉಪನ್ಯಾಸಕರಿಗೆ ಆಡಳಿತ ಮಂಡಳಿಯಿಂದ ಸಂತಸ ಸುದ್ದಿ, ಬೋಧನಾ ಪದವಿ ಹೊಂದಿದವರು ಸರ್ಕಾರ ಉದ್ಯೋಗ ಪ್ರಾಪ್ತಿ, ರಾಜಕಾರಣಿಗಳಿಗೆ ಉನ್ನತ ಸ್ಥಾನ ಸಿಗಲಿದೆ ಹಿತೈಷಿಗಳ ಬಗ್ಗೆ ಜಾಗೃತಿ ಇರಲಿ ಕಡಿವಾಣ ಹಾಕುವುದು ಉತ್ತಮ.

Vijayaprabha Mobile App free

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಪ್ರೇಮಿಗಳಲ್ಲಿ ಮನಸ್ತಾಪ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು.

ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ವೃಷಭ ರಾಶಿ ಭವಿಷ್ಯ (Vrushabha rashi bhavishya)

ಆದಾಯಕ್ಕಿಂತ ಖರ್ಚು ಹೆಚ್ಚು, ಆರೋಗ್ಯದ ಕಡೆ ತಾತ್ಸಾರ ಮಾಡಬೇಡಿ, ದಂಪತಿಗಳಿಗೆ ಸುಖ ದುಃಖಕ್ಕಿಂತ ಹೆಚ್ಚಿಗೆ ಇರುತ್ತದೆ, ವೃತ್ತಿ ಕ್ಷೇತ್ರದಲ್ಲಿ ಆರ್ಥಿಕ ಚೇತರಿಕೆ, ಷೇರು ಮಾರುಕಟ್ಟೆಗೆ ದೊಡ್ಡಮಟ್ಟದ ಹೂಡಿಕೆ ಖಂಡಿತ ಬೇಡ, ಭೂ ವ್ಯವಹಾರಗಳಿಗೆ ಹೂಡಿಕೆ ಮಾಡಬಹುದು, ಅನಿರೀಕ್ಷಿತ ಶಸ್ತ್ರ ಚಿಕಿತ್ಸೆ ಸಂಭವ, ಕಂಕಣ ಬಲ ಕೂಡಿ ಬರಲಿದೆ, ಸಂಶೋಧಕರಿಗೆ ಪ್ರಗತಿಯ ಕಾಲ, ಸಾಹಸ ಕ್ರೀಡಾಪಟುಗಳಿಗೆ ತಮ್ಮ ಪ್ರತಿಭೆ ತೋರಿಸಲು ವೇದಿಕೆ ಸಿಗಲಿದೆ, ಹೋಟೆಲ್ ಉದ್ಯಮ ಪ್ರಾರಂಭ ಮಾಡಿ ಶುಭದಾಯಕ, ಜಾಗೃತೆಯಿಂದ ವಾಹನ ಚಲಾಯಿಸಿ.

ಮೂರನೇ ವ್ಯಕ್ತಿಯಿಂದ ಸಂಸಾರದ ತೊಂದರೆಗಳಿಗೆ ಕಾರಣ, ಪತ್ನಿ ಹೊಂದಿರುವ ವ್ಯವಹಾರದಲ್ಲಿ ಸಂಪಾದನೆ ಏರಿಕೆ, ಹಿಂದೆ ಮಾಡಿರುವ ಹೂಡಿಕೆ ಈಗ ಧನ ಲಾಭ ಪಡೆಯಲಿದ್ದೀರಿ, ಆಸ್ತಿ ಕಲಹ ಅಂತ್ಯವಾಗುವ ಲಕ್ಷಣ ಕಾಣಿಸುತ್ತಿದೆ, ಕೋರ್ಟ್ ಕಚೇರಿಗಳಲ್ಲಿ ಜಯದ ಹಾದಿ ಸುಗಮ, ಕೃಷಿಕರು ಹಣ್ಣು ತರಕಾರಿಗಳನ್ನು ಬೆಳೆಯುವುದರಿಂದ ಧನ ಲಾಭ ಪಡೆಯಲಿದ್ದೀರಿ, ಕಳ್ಳಕಾಕರ ಪೀಡೆ ಹೆಚ್ಚಾಗಲಿದೆ, ನವದಂಪತಿಗಳು ಅಪನಂಬಿಕೆಯಿಂದ ಕಲಹ ಮಾಡುವರು.

ಮಿಥುನ ರಾಶಿ ಭವಿಷ್ಯ (Mithuna rashi bhavishya)

ಆದಾಯ ಉತ್ತಮ ಆದರೆ ಖರ್ಚು ಅಧಿಕ, ಮೇಲಿಂದ ಮೇಲೆ ಅನಾರೋಗ್ಯದಿಂದ ತೊಂದರೆ ಕಾಡಲಿದೆ, ಪರಸ್ಪರ ಇಷ್ಟಪಟ್ಟಿ ಮದುವೆಯಾದವರು ಸುಖಕ್ಕಿಂತ ದುಃಖ ಜಾಸ್ತಿ ಇರುತ್ತದೆ, ಆಸ್ತಿ ವಿಷಯಕ್ಕಾಗಿ ಹಿರಿಯರ ಜೊತೆ ಕಲಹ ಬೇಡ ಅದು ನಿಮಗೆ ಮಾರಕವಾಗಲಿದೆ, ಮಗು ಜನನದ ಸುದ್ದಿ ಕೇಳಿ ಸಂತೋಷ, ಕೆಲಸ ಮಾಡುವ ಜಾಗದಲ್ಲಿ ಧನ ಲಾಭವಿದೆ, ಉನ್ನತ ವ್ಯಾಸಂಗಕ್ಕಾಗಿ ವಿದೇಶ ಪ್ರಯಾಣ, ನಿಮ್ಮ ಜೇಷ್ಠತೆ ಆಧಾರ ಮೇಲೆ ತಾತ್ಕಾಲಿಕ ಉದ್ಯೋಗಿಗಳಿಗೆ ಉದ್ಯೋಗ ಖಾಯಂ ಆಗುವ ಸುವರ್ಣ ಅವಕಾಶ ಸಿಗಲಿದೆ.

ಮದುವೆ ಯೋಗ ಕೂಡಿ ಬರಲಿದೆ, ದೀರ್ಘಕಾಲದ ಕಾಯಿಲೆ ಗುಣಮುಖ ಆಗುವ ಲಕ್ಷಣ ಕಾಣಿಸುತ್ತಿದೆ, ಇಂದು ಅನಿರೀಕ್ಷಿತ ಧನ ಲಾಭ ಪಡೆಯಲಿದ್ದೀರಿ, ಉದ್ಯಮದಾರರು ಆರ್ಥಿಕ ಸಂಕಷ್ಟದಿಂದ ಪಾರು, ವಕೀಲ ವೃತ್ತಿ ಹೊಂದಿದವರು ಹೆಚ್ಚಿನ ಪ್ರಗತಿ, ಸಾಲದಿಂದ ಮುಕ್ತಿ ಹೊಂದುವ ದಿನ ಸನಿಹ, ಹೊಸ ವಾಹನ ಖರೀದಿ ಯೋಗ, ಕಟ್ಟಿರುವ ಮನೆ ಖರೀದಿಯಿಂದ ಸಂತಸ, ಗುತ್ತಿಗೆದಾರರಿಗೆ ಸರ್ಕಾರದಿಂದ ಮರುಪಾವತಿ ಹಣ ಪಡೆಯಲಿದ್ದೀರಿ, ಕಲಾವಿದರಿಗೆ ಹೆಚ್ಚಿನ ಅನುಕೂಲ, ಪ್ರೇಮಿಗಳು ಕಿರು ಪ್ರವಾಸ ಸಾಧ್ಯತೆ, ಸದ್ಯಕ್ಕೆ ದೊಡ್ಡ ಹೂಡಿಕೆ ಬೇಡ.

ಕರ್ಕಾಟಕ ರಾಶಿ ಭವಿಷ್ಯ (Karkataka rashi bhavishya)

ನಿಮ್ಮ ಆದಾಯ ಈ ರೀತಿ ಇದೆ ಹದಿನಾಲ್ಕು ರಲ್ಲಿ ವ್ಯಯ ಎಂಟು, ಆರೋಗ್ಯ ಆರರಲ್ಲಿ ಅನಾರೋಗ್ಯ ಐದು, ಸುಖ ದುಃಖ ಸಮ ಬಲ ಇದೆ, ಉದ್ಯೋಗದಲ್ಲಿ ಆರ್ಥಿಕ ಮುನ್ನಡೆ ಸಾಧಿಸುವಿರಿ, ಅತಿ ಶೀಘ್ರದಲ್ಲಿ ಸಾಲದಿಂದ ಮುಕ್ತಿ ಹೊಂದುವಿರಿ, ಭೂ ವ್ಯವಹಾರ ಮಾಡುವವರಿಗೆ ಉತ್ತಮ ಕಾಲ ಕಮಿಷನ್ ಉತ್ತಮವಾಗಿ ದೊರೆಯಲಿದೆ, ವಿದೇಶದಿಂದ ಧನಾಗಮನ ಸಿಗಲಿದೆ, ವಿದೇಶಿ ವ್ಯವಹಾರಗಳಲ್ಲಿ ಅಭಿವೃದ್ಧಿ ಕಾಣುವಿರಿ, ಮನೆಯಲ್ಲಿ ತಯಾರಿಸಿದ ಆಹಾರ ಪದಾರ್ಥಗಳ ಮಾಡುವವರಿಗೆ ಉತ್ತಮ ಕಾಲ ಹಾಗೂ ಆರ್ಥಿಕ ಚೇತರಿಕೆ ಸ್ವಾವಲಂಬನೆಯಾಗಿ ಬದುಕುವಿರಿ.

ಉದ್ಯಮಿಗಳು ಸಂಕಷ್ಟದಿಂದ ಪಾರು ಆಗಿ ಆರ್ಥಿಕ ಚೇತರಿಕೆ ಕಡೆ ಸಾಗುವಿರಿ, ನೀರು ಸರಬರಾಜು ಮಾಡುವವರಿಗೆ ಆರ್ಥಿಕ ಲಾಭ, ತಂಪು ಪಾನೀಯ ತಯಾರಿಸುವವರಿಗೆ ಆರ್ಥಿಕ ಲಾಭವಿದೆ, ನಿರೋದ್ಯೋಗಿಗಳಿಗೆ ಉದ್ಯೋಗ ಲಭ್ಯ, ಕೆಲವರು ಉದ್ಯೋಗ ಬದಲಾಯಿಸುವ ಚಿಂತನೆ, ತಂತ್ರಜ್ಞಾನ ಪದವಿ ಹೊಂದಿದವರಿಗೆ ಪ್ರತಿಷ್ಠೆಯ ಕಂಪನಿಯಲ್ಲಿ ಕೆಲಸ ಲಭ್ಯ, ಲೇವಾದೇವಿದಾರರು ಬಾಕಿ ವಸೂಲಿ ಮಾಡುವಾಗ ಕಲಹ ಸೃಷ್ಟಿ, ಹೂಡಿಕೆದಾರರು ಪ್ರಮುಖ ಒಪ್ಪಂದ ಮಾಡಿಕೊಳ್ಳುವರು, ಮಕ್ಕಳಿಂದ ಕಲಹಗಳು ಸೃಷ್ಟಿ, ಮದುವೆ ವಿಳಂಬದಿಂದ ಬೇಸರ.

ಸಿಂಹ ರಾಶಿ ಭವಿಷ್ಯ (Simha rashi bhavishya)

ಆದಾಯ ವ್ಯಯ ಸಮ ಪ್ರಮಾಣದಲ್ಲಿ ಇದೆ, ನಿಮಗೆ ಗುರುವಿನ ಅನುಗ್ರಹ ಬಹಳವಿದೆ, ಪ್ರಯತ್ನಿಸಿದ ಎಲ್ಲಾ ಕೆಲಸಗಳು ಸಫಲ ಕಾಣುವವು, ಗಂಡ ಹೆಂಡತಿಯ ವಿರಹ ಅಂತ್ಯ, ಮತ್ತೆ ಒಂದಾಗಿ ಬಾಳುವರು, ಪ್ರೇಮಿಗಳು ಮತ್ತೆ ಒಂದಾಗಿ ಸಂಧಾನದ ಮೂಲಕ ಮದುವೆ ಪ್ರಯತ್ನ ಮಾಡುವರು, ಹಣದ ಆದಾಯ ಉತ್ತಮ, ಬಂಧು ಮಿತ್ರಗಳಿಂದ ಧನಸಹಾಯ ಪಡೆಯಲಿದ್ದೀರಿ, ಜನಪ್ರತಿನಿಧಿಗಳಿಗೆ ಉತ್ತಮಕಾಲ ಉನ್ನತ ಪದವಿ ಪಡೆಯಲಿದ್ದೀರಿ, ಮನೆ ಕಟ್ಟಿದ ನಂತರ ಮದುವೆ ಯೋಗ ಕೂಡಿ ಬರಲಿದೆ, ವಾಹನ ಖರೀದಿಸುವ ಯೋಚನೆ, ನ್ಯಾಯಾಲದ ಕೆಲಸಗಳಲ್ಲಿ ಸ್ವಲ್ಪ ಅಡೆತಡೆಯಿಂದ ಹಿನ್ನಡೆ ಕಾಣುವಿರಿ.

ಹಣದ ವ್ಯವಹಾರಗಳಿಗೆ ಮಧ್ಯಸ್ಥಿಕೆ ವಹಿಸಿ ಜಾಮೀನು ನೀಡಿ ಆತಂಕ ಎದುರಿಸುವಿರಿ, ಆ ವ್ಯಕ್ತಿ ನಾಪತ್ತೆ ಇದರಿಂದ ನಿಮಗೆ ಮನಶಾಂತಿ ನಷ್ಟ, ಕರ್ತವ್ಯದಲ್ಲಿ ಅಜಾಗ್ರತೆ ಬೇಡ, ಉದ್ಯೋಗದಲ್ಲಿ ಸಹ ಉದ್ಯೋಗಿಗಳಿಂದ ಹೆಚ್ಚಿನ ಕಿರಿಕಿರಿ ಇದಕ್ಕೆ ಕಡಿವಾಣ ಹಾಕುವುದು ಉತ್ತಮ, ಹೋಟೆಲ್,ತಂಪು ಪಾನೀಯ,ಕಾಂಡಿಮೆಂಟ್ಸ್,ಬೇಕರಿ, ಸ್ವೀಟ್ ಮಾರ್ಟ್, ವ್ಯಾಪಾರಸ್ಥರಿಗೆ ಭಾರಿ ಲಾಭ, ಸಂಶೋಧಕರು ತಮ್ಮ ಶಕ್ತಿ ತೋರಿಸುವ ಕಾಲ ಉನ್ನತ ಪದವಿ ಪಡೆಯಲಿದ್ದೀರಿ, ನಿರಂತರ ಸೇವೆಯಿಂದ ಖಾಯಂ ಉದ್ಯೋಗ ಪಡೆಯಲಿದ್ದೀರಿ, ಹೊಸದಾಗಿ ರಾಜಕೀಯ ಪ್ರವೇಶ ಬಯಸಿದವರಿಗೆ ಒಳ್ಳೆಯದಾಗುತ್ತದೆ.

ಕನ್ಯಾ ರಾಶಿ ಭವಿಷ್ಯ (Kanya rashi bhavishya)

ವ್ಯಯಕ್ಕಿಂತ ಆದಾಯ ಉತ್ತಮ, ಆರೋಗ್ಯ ಮಧ್ಯಮ, ಹೆಚ್ಚಿನ ಖರ್ಚುಗಳಿಗೆ ಕಡಿವಾಣ ಹಾಕಿ, ಆರೋಗ್ಯದ ಕಡೆ ತಾತ್ಸಾರ ಮಾಡಬೇಡಿ, ಸಮಾಜದಲ್ಲಿ ನಿಮಗೆ ಅಗೌರವ ಹೆಚ್ಚು, ದಂಪತಿಗಳಿಗೆ ಸುಖ ಹೆಚ್ಚು ದುಃಖ ಕಡಿಮೆ, ಪ್ರತಿಕ್ಷೇತ್ರದಲ್ಲಿ ಒಳ್ಳೆಯ ಸಂಪಾದನೆ ಯೋಗವಿದೆ, ಹಿರಿಯರ ಕಡೆಯಿಂದ ಆಸ್ತಿ ಅನುಮೋದನೆ ಭಾಗ್ಯ, ಕೂಡಿಟ್ಟ ಹಣ ಇಂದು ಲೆಕ್ಕಾಚಾರ ಮಾಡುವಿರಿ ಅದು ಯೋಗ್ಯ ಕಾರ್ಯರೂಪಕ್ಕೆ ಬಳಸಿಕೊಳ್ಳಿ, ಉದ್ಯೋಗದಲ್ಲಿ ಹಳೆಯ ತೊಂದರೆಗಳು ನಿವಾರಣೆ, ಕೃಷಿ ಭೂಮಿ ಅಥವಾ ನಿವೇಶನ ಖರೀದಿ ಯೋಗವಿದೆ, ಉದ್ಯೋಗಕ್ಕಾಗಿ ಅಲೆದಾಟ ಮಾಡುವವರು ಉದ್ಯೋಗ ಪಡೆದು ಮುನ್ನಡೆ ಸಾಧಿಸುವಿರಿ, ವ್ಯಾಪಾರ ವ್ಯವಹಾರಗಳು ಬೇರೆಯವರ ಕೈಗೆ ಒಪ್ಪಿಸಬೇಡಿ, ಆಸ್ತಿಗೆ ಸಂಬಂಧಿಸಿದ ಕಲಹಗಳಿಂದ ಮುಕ್ತಿ, ಕನ್ನಡಕ ವ್ಯಾಪಾರಿಗಳು, ವಸ್ತ್ರದ ವ್ಯಾಪಾರಿಗಳು, ಗಾರ್ಮೆಂಟ್ಸ್ ಮಾಲಕರಿಗೆ ಹಣ ಸಂಪಾದನೆ ಉತ್ತಮವಾಗಲಿದೆ, ಪ್ರೀತಿಯಲ್ಲಿ ಮೋಸ ಸಂಭವ ಪಶ್ಚಾತಾಪ ಅರಿವು ಮೂಡಲಿದೆ,

ತುಲಾ ರಾಶಿ ಭವಿಷ್ಯ (Tula rashi bhavishya)

ನಿಮಗೆ ಆದಾಯ 11 ಆದರೆ ವ್ಯಯ ಐದು ಇರುತ್ತದೆ, ಆರೋಗ್ಯದಲ್ಲಿ ಚೇತರಿಕೆ ಇದೆ, ನಿಮಗೆ ಗುರುಬಲವಿದೆ ಮದುವೆ ಯೋಚನೆ ಮಾಡಿ, ಹೊಸ ಉದ್ಯಮ ಪ್ರಾರಂಭ ಮಾಡಲು ಉತ್ತಮ ಸಮಯ, ದೀರ್ಘಕಾಲದ ಕಾಯಿಲೆಗಳಿಂದ ಗುಣಮುಖ, ಆಸ್ತಿಪಾಲು ಮಾತನಾಡಬೇಡಿ ಕುಟುಂಬದಲ್ಲಿ ಹೊಂದಾಣಿಕೆ ಮಾಡಿಕೊಂಡು ಹೋಗಿ, ಈ ಹಿಂದೆ ತಟಸ್ಥ ಗೊಂಡಿರುವ ಕೆಲಸಗಳು ಪುನಹ ಪ್ರಾರಂಭ, ಉತ್ತಮ ಆದಾಯಗಳಿಂದ ಮನಸ್ಸು ಖುಷಿ, ವ್ಯಾಪಾರದಲ್ಲಿ ಶತ್ರುಗಳಿಗೆ ಕಡಿವಾಣ ಹಾಕುವುದು ಉತ್ತಮ, ಗುತ್ತಿಗೆದಾರರು ಹೊಸ ಹೊಸ ಯೋಜನೆಗಳನ್ನು ಕಾರ್ಯಗತ ಮಾಡಿರಿ.

ಕೃಷಿಕರು ವಾಣಿಜ್ಯ ಬೆಳೆ ಬೆಳೆಯುವುದರಿಂದ ಧನ ಲಾಭ, ಅಡಿಕೆ ತೆಂಗು ಮೆಣಸು ವ್ಯಾಪಾರಸ್ಥರಿಗೆ ಭಾರಿ ಧನ ಲಾಭವಿದೆ, ವಾಣಿಜ್ಯ ಮಳಿಗೆ ಖರೀದಿ, ಸರಕಾರಿ ಉದ್ಯೋಗ ಪಡೆಯಲಿದ್ದೀರಿ, ಏನು ಮಾಡದೆ ಸ್ತ್ರೀಯರಿಂದ ಅಪವಾದ ಬರಬಹುದು, ಸಂಸಾರದಲ್ಲಿನ ಸಣ್ಣಪುಟ್ಟ ಸಮಸ್ಯೆಗಳನ್ನು ನೀವೇ ಬಗೆಹರಿಸಿ ಬೈಲಿಗೆ ಬರೋದು ಬೇಡ, ನಿರಂತರ ಸೇವೆಯಿಂದ ರಾಜಕೀಯದಲ್ಲಿ ಉನ್ನತ ಪದವಿ ಭಾಗ್ಯ, ಕೆಲವರು ಹೊಸದಾಗಿ ರಾಜಕೀಯ ಪ್ರವೇಶದಿಂದ ಸಂತಸ, ಸಮಾಜಕ್ಕೆ ಒಳ್ಳೆಯ ಸೇವೆ ನೀಡುವ ಅವಕಾಶ, ಪಾಲುದಾರಿಕೆ ವ್ಯವಹಾರಗಳಲ್ಲಿ ಗಮನ ಇರಲಿ, ವಿದೇಶ ಯೋಗ ಇದೆ, ವಿದೇಶದಲ್ಲಿ ನೆಲೆಸಿದವರು ಉದ್ಯೋಗ ಬದಲಾಯಿಸುವ ಯೋಚನೆ.

ವೃಶ್ಚಿಕ ರಾಶಿ ಭವಿಷ್ಯ (Vrishchika rashi bhavishya)

ಆದಾಯ ಎರಡಾದರೆ ವ್ಯಯ 11 ಇದೆ, ಆರೋಗ್ಯದಲ್ಲಿ ಉತ್ತಮ, ಅವಶ್ಯಕತೆ ಇದ್ದರೆ ಮಾತ್ರ ಖರ್ಚು ಮಾಡಿ, ಜನಪ್ರತಿನಿಧಿಗಳು ಹಾಗೂ ಸಮಾಜಸೇವಕರು ಸಮಾಜದಲ್ಲಿ ಒಳ್ಳೆಯ ಗೌರವ ಲಭ್ಯ, ದಂಪತಿಗಳು ಸಮಾನವಾದ ಕಷ್ಟ ಸುಖ ಸ್ವೀಕರಿಸಬೇಕು, ಮದ್ದಸ್ತಿಕೆ ಜನರಿಂದ ಕುಟುಂಬದಲ್ಲಿ ಕಲಹ ಆಗಬಹುದು, ಉದ್ಯೋಗದಲ್ಲಿ ಕಿರಿಕಿರಿ ಮುಂದುವರೆಯಲಿದೆ ಇದಕ್ಕೆ ಕಡಿವಾಣ ಹಾಕುವುದು ಉತ್ತಮ, ವ್ಯಾಪಾರ ವಹಿವಾಟುಗಳಲ್ಲಿ ಹಣ ಹೂಡಿಕೆ ನಿಯಂತ್ರಣ ಇರಲಿ, ಗುರು ದಶ ಹೊಂದಿದವರು ಮದುವೆ ಪ್ರಾಪ್ತಿ, ಒಳ್ಳೆ ಕಡೆ ಉದ್ಯೋಗ ಪ್ರಾಪ್ತಿ, ದಂಪತಿಗಳಿಗೆ ಸಂತಾನ ಭಾಗ್ಯ, ದೀರ್ಘಕಾಲದ ಕಾಯಿಲೆ ಸಮಸ್ಯೆಯಿಂದ ಮುಕ್ತಿ, ಸಾಲದಿಂದ ಋಣಮುಕ್ತಿ.

ಪ್ರೇಮಿಗಳ ಮದುವೆ ಸಂಭವ, ಕೃಷಿ ಭೂಮಿ ಅಥವಾ ಕಟ್ಟಿಸಿದ ಮನೆ ಖರೀದಿ ಯೋಗ, ಬೆಟ್ಟಿಂಗದಲ್ಲಿ ಧನ ಆಗಮನ, ಗುತ್ತಿಗೆದಾರರು ಹೊಸ ಯೋಜನೆಗಳಿಗೆ ಚಾಲನೆ ಮಾಡುವರು, ಸರ್ಕಾರದಿಂದ ಬರುವ ಹಳೆಯ ಬಾಕಿ ಪಡೆಯಲಿದ್ದೀರಿ, ಕೃಷಿ ಯಂತ್ರೋಪಕರಣಗಳ ಮತ್ತು ವೈದ್ಯಕೀಯ ಯಂತ್ರೋಪಕರಣಗಳ ವ್ಯಾಪಾರ ಮಾಡುವವರಿಗೆ ಧನ ಲಾಭವಿದೆ, ಗೊಬ್ಬರ, ಕ್ರಿಮಿ ಕೀಟಕ ಔಷಧ ರಾಸಾಯನಿಕ ವಸ್ತುಗಳ ವ್ಯಾಪಾರಿಗಳಿಗೆ ಲಾಭ, ಲೇಖಕರಿಗೆ ಪ್ರಶಸ್ತಿ ಯೋಗ, ಕಲಾವಿದರಿಗೆ ಉತ್ತಮ ವೇದಿಕೆ ಸಿಗಲಿದೆ, ಹೊಟ್ಟೆಯ ಸಮಸ್ಯೆಯಿಂದ ನರಕ ಯಾತನೆ.

ಧನಸ್ಸು ರಾಶಿ ಭವಿಷ್ಯ (Dhanu rashi bhavishya)

ಆದಾಯ ಮತ್ತು ವ್ಯಯ ಸಮಪ್ರಮಾಣದಲ್ಲಿ ಮುಂದುವರೆಯಲಿದೆ, ಆರೋಗ್ಯ ಮಧ್ಯಮ, ಕುಟುಂಬಕ್ಕಾಗಿ ಅಧಿಕ ಖರ್ಚು, ಜನಪ್ರತಿನಿಧಿಗಳು ಸಮಾಜ ಸೇವಕರು ಹೆಚ್ಚು ಗೌರವ ಪಡೆಯಲಿದ್ದೀರಿ, ನಿಮ್ಮ ಗಣನೀಯ ಸೇವೆಗೆ ಉನ್ನತ ಪದವಿ ಭಾಗ್ಯ, ಆದರೆ ಹಿತೈಷಿಗಳಿಂದ ಎಳೆದಾಟ, ಹಿತ ಶತ್ರುಗಳಿಂದ ಜಾಗೃತ್ಯವಹಿಸಿ ಕಡಿವಾಣ ಹಾಕುವುದು ಉತ್ತಮ, ದಂಪತಿಗಳಿಗೆ ಹಳೆಯ ಕಷ್ಟಗಳು ಪರಿಹಾರವಾಗುವವು, ವ್ಯಾಪಾರಸ್ಥರಿಗೆ ಹಣಕಾಸಿನ ವಿಷಯದಲ್ಲಿ ಅಲ್ಪ ಪ್ರಗತಿ, ಕುಟುಂಬದಲ್ಲಿ ಸದಸ್ಯರ ಜೊತೆ ಹೊಂದಾಣಿಕೆ ಉತ್ತಮ.

ಒಳ್ಳೆಯ ಸಂಗಾತಿ ನಿಮಗೆ ಸಿಗುವರು, ಮಾಲಕರಿಗೆ ಕಾರ್ಮಿಕರ ಅಭಾವ, ಮಾಲಕರಿಗೆ ಪರಮನೆಂಟ್ ಕಾರ್ಮಿಕರು ಸಿಗುವ ಸಮಸ್ಯೆ, ಮಾಲಕರಿಗೂ ಮತ್ತು ಕಾರ್ಮಿಕರಿಗೆ ಸದಾ ಮನಸ್ತಾಪ, ವಸ್ತ್ರಾಭರಣ ಖರೀದಿ, ಉದ್ಯೋಗದಲ್ಲಿ ಅತಿಯಾಗಿ ಯಾರನ್ನು ನಂಬಬೇಡಿ, ಯಾರಿಗೂ ಜಾಮಿನ್ ನೀಡಬಾರದು, ಸಿದ್ದ ಉಡುಪು ವ್ಯಾಪಾರದಲ್ಲಿ ಅನುಕೂಲವಿದೆ, ಉದ್ಯೋಗರಹಿತರಿಗೆ ಉದ್ಯೋಗ ಸಿಗಲಿದೆ, ಮಕ್ಕಳಿಂದ ಹೆಚ್ಚಿನ ಸಂಪಾದನೆ ಮನೆಯ ದರಿದ್ರ ಮಾಯ, ಸಂತಾನ ಇಲ್ಲದವರಿಗೆ ಸಂತಾನ ಭಾಗ್ಯ, ಪ್ರೇಮಿಗಳಿಗೆ ಹಿರಿಯರ ಕಡೆಯಿಂದ ಮದುವೆ ಅನುಮೋದನೆ ಭಾಗ್ಯ, ತುಂಬಾ ವರ್ಷಗಳ ನಂತರ ದಂಪತಿಗಳಿಗೆ ಸಂತಾನ ಭಾಗ್ಯ ಕೇಳಿ ಹರ್ಷವೋ ಹರ್ಷ.

ಮಕರ ರಾಶಿ ಭವಿಷ್ಯ (Makara rashi bhavishya)

ಆದಾಯ ಎಂಟಾದರೆ ವ್ಯಯ 14, ಆರೋಗ್ಯದಲ್ಲಿ ಹೇಳಿಕೊಳ್ಳುವಷ್ಟು ಪ್ರಗತಿ ಇಲ್ಲ, ಶಸ್ತ್ರ ಚಿಕಿತ್ಸೆಗಾಗಿ ಹೆಚ್ಚಿನ ಖರ್ಚು, ಸಾಲಕ್ಕೆ ಅಲೆದಾಟ ಶುರು, ಉದ್ಯೋಗದಲ್ಲಿ ಅಪವಾದ ಹೆಚ್ಚು, ದಂಪತಿಗಳಿಗೆ ಸುಖ ದುಃಖಗಳ ಸಮಾನವಾಗಿ ಸ್ವೀಕರಿಸಿ, ಸಾಡೇ ಸಾತಿ ಶನಿಯಿಂದ ಮುಕ್ತಿ, ಇಷ್ಟು ದಿನದವರೆಗೆ ನರಕ ಯಾತನೆ ಅನುಭವಿಸಿದ್ದೀರಿ, ಇನ್ಮುಂದೆ ದೀರ್ಘಕಾಲಿನ ಸಮಸ್ಯೆಗಳು ಹಂತ ಹಂತವಾಗಿ ಪರಿಹಾರವಾಗುವವು, ಗುತ್ತಿಗೆದಾರರಿಗೆ ಹೊಸ ಹೊಸ ಟೆಂಡರ್ ಗಳ ಭಾಗ್ಯ, ಪತಿ ಪತ್ನಿ ಪುನರ್ ಮಿಲನ ಸಂತೋಷ, ಆಸ್ತಿ ಖರೀದಿ ಯೋಗ ಇದೆ, ಪ್ರೇಮಿಗಳಿಗೆ ಇಷ್ಟಾರ್ಥಗಳ ಪಡೆಯುವ ಸಮಯ ಬಂದಿದೆ, ನಿಮ್ಮ ಪ್ರಗತಿಕಂಡು ಶತ್ರುಗಳಲ್ಲಿ ಬೆಂಕಿ ಉರಿ, ಉದ್ಯೋಗದಲ್ಲಿ ಧನ ಲಾಭವಿದೆ.

ಆದರೆ ಸಹೋದ್ಯೋಗಿಗಳ ಬಗ್ಗೆ ಜಾಗೃತಿ ಇರಲಿ ಅವರನ್ನು ಕಡಿವಾಣ ಹಾಕುವುದು ಉತ್ತಮ, ಮುರನೇ ಸ್ಥಾನದ ಶನಿಯಿಂದ ನಿಮ್ಮ ಕೋರ್ಟ್ ಕಚೇರಿಗಳ ಜಯದ ಹಾದಿ ಸುಗಮ, ನಿಮ್ಮ ಅಜಾತ್ರಿಯಿಂದ ವ್ಯಾಪಾರದಲ್ಲಿ ಭಾರಿ ನಷ್ಟ, ಮಕ್ಕಳಿಂದ ನಿರೀಕ್ಷಿಸಿದ ಹಾಗೆ ಪ್ರಗತಿ ಇಲ್ಲ, ಗ್ಯಾರೇಜ್ ವೃತ್ತಿ ಹೊಂದಿದವರಿಗೆ ಧನ ಲಾಭವಿದೆ ಆದರೆ ಅಕ್ಕಪಕ್ಕದವರಿಂದ ತೊಂದರೆ, ಹೈನುಗಾರಿಕೆ ಉದ್ಯಮ ಉತ್ತಮ ಧನ ಲಾಭ,ಗಾರ್ಮೆಂಟ್ಸ್ ಬಟ್ಟೆ ವ್ಯಾಪಾರಸ್ಥರಿಗೆ ಲಾಭ ಅಧಿಕ ಪಡಿಯಲ್ಲಿದ್ದೀರಿ, ದಿನಸಿ ವ್ಯಾಪಾರಸ್ಥರು ಹೊಸದೊಂದು ಅಂಗಡಿ ಪ್ರಾರಂಭಿಸುವ ಯೋಚನೆ, ನಿಮ್ಮ ಪ್ರಯತ್ನಕ್ಕೆ ಉತ್ತಮ ಪ್ರತಿಕ್ರಿಯೆ ಸಿಗಲಿದೆ, ವಿಚ್ಛೆದನ ಹೊಂದಿದವರು ಮರು ಮದುವೆ ಸಾಧ್ಯತೆ.

ಕುಂಭ ರಾಶಿ ಭವಿಷ್ಯ (Kumba rashi bhavishya)

ನಿಮಗೆ ಆದಾಯ ಎಂಟಾದರೆ ವ್ಯಯ 14 ಅಧಿಕ, ಆರೋಗ್ಯ ಮಧ್ಯಮ ಫಲ ಶ್ರುತಿ, ಪದೇ ಪದೇ ಅನಾರೋಗ್ಯ ಕಾಡಬಹುದು, ಉನ್ನತ ಸ್ಥಾನದಲ್ಲಿ ಇದ್ದವರಿಗೆ ಗೌರವ ಪ್ರಾಪ್ತಿ, ದಂಪತಿಗಳಿಗೆ ಸುಖ ದುಃಖಗಳಲ್ಲಿ ಸುಖವೇ ಹೆಚ್ಚಿನ ಪ್ರಾಪ್ತಿ, ಮಾಡುವ ಕೆಲಸದಲ್ಲಿ ಯಶಸ್ಸು ನಿಮ್ಮದಾಗಲಿದೆ, ಕುಟುಂಬದ ಯಜಮಾನನಿಂದ ಆಸ್ತಿ ಪಾಲು, ರಾಜಕಾರಣಿಗಳಿಗೆ ಹಾಗೂ ಸಂಘ ಸಂಸ್ಥೆಯ ಹೊಂದಿದವರಿಗೆ ಉನ್ನತ ಪದವಿ ಭಾಗ್ಯ, ವ್ಯಾಪಾರಸ್ಥರು ಬೇರೆ ಸ್ಥಳದಲ್ಲಿ ಹೊಸ ವ್ಯಾಪಾರ ಪ್ರಾರಂಭ ಮಾಡುವ ಯೋಚನೆ ಅದು ನಿರ್ಧಾರ ಸರಿ.

ನಗರ ಪ್ರದೇಶದಲ್ಲಿ ವಾಣಿಜ್ಯ ಆಸ್ತಿ ಖರೀದಿ ಯೋಗ, ಸಾಡೇ ಸಾತಿ ಶನಿಯ ಕೊನೆಯ ಹಂತದಲ್ಲಿ ಇದ್ದೀರಿ, ತಾಳ್ಮೆಯಿಂದ ವ್ಯವಹಾರ ಮಾಡಬೇಕು, ಕೆಲಸ ಕಾರ್ಯಗಳಲ್ಲಿ ಏರುಪೇರು ಸಂಭವ, ಮದುವೆ ವಿಳಂಬ ಸಾಧ್ಯತೆ, ದಂಪತಿಗಳಿಗೆ ಗರ್ಭ ನಷ್ಟವಾಗುವುದು, ಬರಬೇಕಾದ ಹಣ ನಿಧಾನ, ಪ್ರೇಮಿಗಳಲ್ಲಿ ಕಲಹ, ಹಿರಿಯರ ಕಡೆಯಿಂದ ಮದುವೆಗೆ ವಿರೋಧ, ದೊಡ್ಡ ಬಂಡವಾಳ ಹೂಡಿಕೆ ಸದ್ಯಕ್ಕೆ ಬೇಡ, ಉದ್ಯೋಗದಲ್ಲಿ ಬಡ್ತಿ ವಿಳಂಬ, ಮೇಲಾಧಿಕಾರಿ ಕಿರುಕುಳ ಹೆಚ್ಚು, ಅರ್ಧಕ್ಕೆ ಮನೆ ಕಟ್ಟಡ ನಿಲ್ಲುವುದು, ನವದಂಪತಿಗಳಿಗೆ ಕುಟುಂಬದಲ್ಲಿ ಕಲಹ ಸಾಧ್ಯತೆ, ಆಸ್ತಿ ಮಾರಾಟ ವಿಳಂಬ.

ಮೀನ ರಾಶಿ ಭವಿಷ್ಯ (Meena rashi bhavishya)

ಆದಾಯ ಮತ್ತು ವ್ಯಯ ಸಮವೇಗದಿಂದ ನಡೆಯುವುದು, ಆರೋಗ್ಯ ಮಿಶ್ರಫಲ, ವ್ಯಾಪಾರದಲ್ಲಿ ಚೇತರಿಕೆ, ಉದ್ಯೋಗ ಬದಲಾವಣೆಯಿಂದ ಸಂತಸ, ಗೃಹ ಕಟ್ಟಡದ ಸಾಮಗ್ರಿಗಳ ವ್ಯಾಪಾರದಲ್ಲಿ ಅಭಿವೃದ್ಧಿ, ಗಾರ್ಮೆಂಟ್ಸ್ ಉದ್ಯಮ ವ್ಯಾಪಾರದಲ್ಲಿ ಅಭಿವೃದ್ಧಿ, ಕೃಷಿ ಭೂಮಿ ನಿವೇಶನ ಖರೀದಿ ಯೋಗ ಇದೆ, ಕುಟುಂಬದ ಜವಾಬ್ದಾರಿಗಳು ನಿಮ್ಮ ಹೆಗಲ ಮೇಲೆ ಇದೆ, ಧಾರ್ಮಿಕ ಸೇವೆ ಮಾಡುವವರಿಗೆ ಅಪಮಾನ, ಶನಿ ಗುರುಗಳ ಪ್ರಭಾವದಿಂದ ಆರೋಗ್ಯದಲ್ಲಿ ಶಸ್ತ್ರ ಚಿಕಿತ್ಸೆ ಸಂಭವ, ಅನಾವಶ್ಯಕವಾದ ಖರ್ಚು, ಯಾರೆಂದಿಗೂ ವಾದ ವಿವಾದ ಬೇಡ ಅದು ನಿಮಗೆ ಮುಳ್ಳಾಗಲಿದೆ.

ಕೋರ್ಟ್ ಕಚೇರಿ ಕೆಲಸಗಳು ವಿಳಂಬ ಸಾಧ್ಯತೆ, ಆಸ್ತಿ ಮಾರಾಟ ಕಾನೂನು ತೊಡಕು, ಮದ್ಯಸ್ತಿಕೆ ಜನರಿಂದ ದಂಪತಿಗಳಿಗೆ ತೊಂದರೆ, ಸಂತಾನ ವಿಳಂಬ, ವಯಸ್ಸು ಮೀರುತಿದೆ ಮದುವೆ ವಿಳಂಬ ಸಾಧ್ಯತೆ ಪರಿಹರಿಸುವುದು ಉತ್ತಮ, ವಿದೇಶ ಪ್ರವಾಸ ಕನಸು ನನಸಾಗುವ ದಿನ ತಪ್ಪಿತು, ಸದ್ಯಕ್ಕೆ ಉದ್ಯೋಗ ಬದಲಾಯಿಸುವುದು ಬೇಡ, ಬಂಡವಾಳ ಹೂಡಿಕೆ ಬೇಡ, ಉದ್ಯೋಗ ಕ್ಷೇತ್ರದಲ್ಲಿ ಕಿರಿಕಿರಿ ಮುಂದುವರೆಯಲಿದೆ, ಮಹಿಳೆಯರಿಗೆ ಉದ್ಯೋಗದಲ್ಲಿ ಅಧಿಕ ಕಿರಿಕಿರಿ, ಇಷ್ಟಪಟ್ಟವರು ನಿಮ್ಮಿಂದ ದೂರವಾಗುವ ಸಾಧ್ಯತೆ.

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಪ್ರೇಮಿಗಳಲ್ಲಿ ಮನಸ್ತಾಪ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು.

ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.