Chaitra masa : ಚೈತ್ರ ಮಾಸವು ಹಿಂದೂ ಕ್ಯಾಲೆಂಡರ್ ಮೊದಲ ಮಾಸ. 2025ರ ಚೈತ್ರ ಮಾಸವು ಇದಾಗಲೇ ಆರಂಭವಾಗಿದ್ದು, ಈ ಮಾಸದಲ್ಲಿ ಎಲ್ಲಾ ದೇವರುಗಳನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. ಈ ಪೂಜೆಗಳ ಪೂಜಿಸುವುದರ ಫಲ ಸಿಗಬೇಕಾದರೆ ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಚೈತ್ರಮಾಸದಲ್ಲಿ ಏನು ಮಾಡಬೇಕು ಮತ್ತು ಏನು ಮಾಡಬಾರದು ಎ೦ಬುದನ್ನು ಇಲ್ಲಿ ತಿಳಿದುಕೊಳ್ಳಿ.
ಆಹಾರ ಹೀಗಿರಲಿ
ಚೈತ್ರ ಮಾಸದಲ್ಲಿ ಆಹಾರದಲ್ಲಿ ಧಾನ್ಯಗಳ ಬಳಕೆಯನ್ನು ಕಡಿಮೆ ಮಾಡಬೇಕು. ಹಣ್ಣುಗಳನ್ನು ಹೆಚ್ಚಾಗಿ ಬಳಸಬೇಕು. ಹೆಚ್ಚು ನೀರು ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಹಳೆಯ ಆಹಾರವನ್ನು ಅಥವಾ ಅತಿಯಾಗಿ ಹುರಿದ ಮತ್ತು ಮಸಾಲೆಯುಕ್ತ ಆಹಾರವನ್ನು ಸೇವಿಸುವುದನ್ನು ತಪ್ಪಿಸಬೇಕು. ಈ ಮಾಸದಲ್ಲಿ ಬೆಲ್ಲ ತಿನ್ನುವುದನ್ನು ಸಹ ನಿಷೇಧಿಸಲಾಗಿದೆ.
ಅಭ್ಯಾಸಗಳು ಹೀಗಿರಲಿ
ಚೈತ್ರ ಮಾಸದಲ್ಲಿ ತಡವಾಗಿ ಮಲಗುವ ಮತ್ತು ತಡವಾಗಿ ಏಳುವ ತಪ್ಪನ್ನು ಮಾಡಬಾರದು. ಚೈತ್ರ ಮಾಸದಲ್ಲಿ ನಾವು ಸೂರ್ಯೋದಯಕ್ಕೂ ಮುನ್ನ ಎದ್ದು ಸೂರ್ಯ ದೇವನನ್ನು ಪೂಜಿಸಬೇಕು.
ಧ್ಯಾನ ಮತ್ತು ಯೋಗ ಮಾಡುವುದು ಒಳಿತು ಅದು ಒತ್ತಡವನ್ನು ದೂರವಿಡುತ್ತದೆ. ಚೈತ್ರ ಮಾಸದ ಸೋಮವಾರದ ದಿನ ಶಿವನಿಗೆ ಜಲಾಭಿಷೇಕವನ್ನು ಮಾಡುವುದು ಅತ್ಯಂತ ಶುಭ.
ಚೈತ್ರ ನವರಾತ್ರಿ
ಈ ಮಾಸದಲ್ಲಿ ಉತ್ತರ ಭಾರತದವರು 9 ದಿನಗಳ ಚೈತ್ರ ನವರಾತ್ರಿಯನ್ನು ಆಚರಿಸುತ್ತಾರೆ. ಚೈತ್ರ ಮಾಸದಲ್ಲಿ ದುರ್ಗಾ ದೇವಿಯನ್ನು ಪೂಜಿಸುವಾಗ ದೇವಿಗೆ ಕೆಂಪು ಬಣ್ಣದ ದಾಸವಾಳ, ಕೆಂಪು ಬಣ್ಣದ ಬಟ್ಟೆ, ಕೆಂಪು ಬಳೆ, ಕೆಂಪು ಬಣ್ಣದ ಸೀರೆ ಇತ್ಯಾದಿ ವಸ್ತುಗಳನ್ನು ಅರ್ಪಿಸಬೇಕು. ಇದರಿಂದ ದೇವಿಯು ನಿಮ್ಮೆಲ್ಲಾ ಇಷ್ಟಾರ್ಥಗಳನ್ನು ಈಡೇರಿಸುತ್ತಾಳೆ.
ಇವುಗಳ ಪಠಣೆ
ಚೈತ್ರ ಮಾಸದ ಸಮಯದಲ್ಲಿ, ದೇವಿ ಪುರಾಣ ಮತ್ತು ಭಾಗವತ ಕಥೆಯನ್ನು ಕೇಳುವುದು ಮಂಗಳಕರವಾಗಿದೆ. ಚೈತ್ರ ಮಾಸದಲ್ಲಿ ನೀವು ಮನೆಯಲ್ಲಿ ಭಗವದ್ಗೀತೆ ಸುಂದರಕಾಂಡ, ರಾಮಚರಿತಮಾನಸಗಳನ್ನು ಪಠಿಸುವುದು ಉತ್ತಮ. ಇದು ನಿಮ್ಮಲ್ಲಿ ದೇವರ ಮೇಲಿನ ಭಕ್ತಿಯನ್ನು ಹೆಚ್ಚಿಸಿ, ಮನೆಯಲ್ಲಿ ಸಕರಾತ್ಮಕ ವಾತವರಣ ನಿರ್ಮಿಸಿ, ನಿಮ್ಮ ಜೀವನವನ್ನು ಉತ್ತಮಗೊಳಿಸುತ್ತದೆ.