Ram Navami Mantra : ರಾಮನವಮಿ ಶ್ರೀ ರಾಮಚಂದ್ರನ ಜನ್ಮದಿನವಾಗಿದ್ದು ಚೈತ್ರ ಶುಕ್ಲ ನವಮಿಯ೦ದು ಆಚರಿಸಲಾಗುತ್ತದೆ. ಇದು ಸತ್ಯ, ಧರ್ಮ, ಶಾಂತಿ ಮತ್ತು ಸಹನೆಗೆ ಪ್ರತಿಕವಾಗಿರುವ ಹಬ್ಬವಾಗಿದೆ. ಇಂತಹ ವಿಶೇಷ ದಿನದಲ್ಲಿ ರಾಮನಾವನ್ನು ಪಠಿಸುವುದರಿ೦ದ ಮನಸ್ಸನ್ನು ಶುದ್ಧಿಯಾಗಿ ದೇವರ ಅನುಗ್ರಹ ದೊರಕುತ್ತದೆ. ಇಲ್ಲಿ ಅಂತಹ ಅನೇಕ ಸುಲಭ ಮತ್ತು ಶಕ್ತಿಯುತವಾದ ಮಂತ್ರಗಳನ್ನು ನೀಡಲಾಗಿದೆ. ನೆನಪಿರಲಿ ಇವುಗಳನ್ನು ಶುದ್ಧ ಮನಸ್ಸಿನಿಂದ & ಶ್ರದ್ಧೆಯಿ೦ದ ಪಠಿಸಬೇಕು.
ತಾರಕ ಮಂತ್ರ
|| ಶ್ರೀ ರಾಮ ಜಯ ರಾಮ ಜಯ ಜಯ ರಾಮ ||
ಇದು ರಾಮನನ್ನು ಸ್ಮರಿಸುವ ಅತ್ಯಂತ ಶಕ್ತಿಯುತ ನಾಮಮಂತ್ರ. ಈ ಮಂತ್ರವು ನಿಮ್ಮನ್ನು ಸಂಕಷ್ಟಗಳಿಂದ ದೂರವಿಡುತ್ತದೆ ಹಾಗೂ ಧೈರ್ಯವನ್ನು ನೀಡುತ್ತದೆ. ನಿತ್ಯ 108 ಬಾರಿ ಪಠಿಸಿದರೆ ಮನಸ್ಸಿಗೆ ಶಾಂತಿ ಲಭಿಸುತ್ತದೆ. ಯಾವುದೇ ಜಪದ ಆರಂಭಕ್ಕೂ ಇದು ಶ್ರೇಷ್ಠವಾದ ಮಂತ್ರವಾಗಿದ್ದು ರಾಮನವಮಿಯಂದು ಪಠಿಸಿದರೆ ವಿಶೇಷ ಫಲ ದೊರೆಯುತ್ತದೆ.
ರಾಮ ಬೀಜ ಮಂತ್ರ
|| ಓಂ ಶ್ರೀ ರಾಮಾಯ ನಮಃ ||
ಈ ಮಂತ್ರ ಪಠಿಸಿದರೆ ರಾಮನಿಗೆ ಶರಣಾಗತಿಯ ಭಾವ ವ್ಯಕ್ತವಾಗುವತ್ತದೆ. ಇದನ್ನು ಪಠಿಸಿದರೆ ಭಕ್ತಿ, ಏಕಾಗ್ರತೆ ಹಾಗೂ ಶಕ್ತಿಯು ಬೆಳೆಯುತ್ತದೆ. ದಿನನಿತ್ಯ ಧ್ಯಾನಕ್ಕೆ ಅಥವಾ ಪೂಜೆಗೆ ಸರಳವಾಗಿ ಬಳಸಬಹುದು. ಹಾಗಾಗಿ ರಾಮನವಮಿಯಂದು ಪಠಿಸಿದರೆ ಅನಂತ ಪುಣ್ಯವನ್ನು ಕರುಣಿಸಬಲ್ಲ ಶ್ರೀ ರಾಮನ ವಿಶೇಷ ಅನುಗ್ರಹ ಲಭಿಸುತ್ತದೆ.
ರಾಮ ಗಾಯತ್ರಿ ಮಂತ್ರ
|| ಓಂ ದಶರಥಾಯ ವಿದ್ಮಹೇ ಸೀತಾವಲ್ಲಭಾಯ ಧೀಮಹಿ ತನ್ನೋ ರಾಮಃ ಪ್ರಚೋದಯಾತ್||
ರಾಮನ ಜ್ಞಾನ, ಧೈರ್ಯ ಮತ್ತು ಶ್ರದ್ಧೆಗೆ ಈ ಗಾಯತ್ರಿ ಮಂತ್ರ ಸಮರ್ಪಿತವಾಗಿದೆ. ಈ ಮಂತ್ರವನ್ನು ರಾಮನವಮಿಯ೦ದು ಪಠಿಸಿದರೆ ಜ್ಞಾನ ವೃದ್ಧಿಯಾಗುತ್ತದೆ. ಮನಸ್ಸಿನ ಏಕಾಗ್ರತೆಯ ಶಕ್ತಿ ಹೆಚ್ಚುತ್ತದೆ. ಅದರಲ್ಲಿಯೂ ವಿದ್ಯಾರ್ಥಿಗಳು, ಅಧ್ಯಯನಶೀಲರಿಗೆ ಈ ಮಂತ್ರದ ಪಠಣೆ ಶ್ರೇಷ್ಠ ಫಲಗಳನ್ನು ನೀಡುತ್ತದೆ.
ರಾಮ ರಕ್ಷಾ ಧ್ಯಾನ ಶ್ಲೋಕ
ಧ್ಯಾಯೇದಾಜಾನುಬಾಹುಂ ಧೃತಶರಧನುಷಂ ಬದ್ಧಪದ್ಮಾಸನಸ್ಥಂ। ಪೀತಂ ವಾಸೋ ವಸಾನಂ ನವಕಮಲದಲಸ್ಪರ್ಧಿನೇತ್ರಂ ಪ್ರಸನ್ನಂ ರಾಮನ ದಿವ್ಯ ಧ್ಯಾನವನ್ನು ಬಿಂಬಿಸುವ ಸುಂದರ ಶ್ಲೋಕ ಇದಾಗಿದೆ. ರಾಮನವಮಿಯ೦ದು ಶರಧನುಷ್ಠಾರಿ, ಕಮಲದ ಕಣ್ಣುಗಳುಳ್ಳ ರಾಮನ ಸ್ಮರಣೆ ಮಾಡುವುದರಿಂದ ಧೈರ್ಯ, ನೆಮ್ಮದಿ ಹಾಗೂ ಆತ್ಮಶುದ್ಧಿ ದೊರೆಯುತ್ತದೆ. ಇದರೊಂದಿಗೆ ಸಾಧ್ಯವಾದರೆ ರಾಮ ರಕ್ಷಾ ಸ್ತೋತ್ರವನ್ನು ಸಂಪೂರ್ಣವಾಗಿ ಪಠಿಸಬಹುದು.
ಶ್ರೀ ರಾಮಚಂದ್ರ ಭಜನ್
ಶ್ರೀರಾಮಚಂದ್ರ ಕೃಪಾಲು ಭಜು ಮನ ಹರಣ ಭವ ಭಯ ದಾರುಣಂ! ನವಕಂಜ ಲೋಚನ ಕಂಜ ಮುಖ ಕರಕಂಜ ಪದಕಂಜಾರುಣಂII
ತುಳಸಿದಾಸರು ರಚಿಸಿದ ರಾಮನ ಸ್ತೋತ್ರ ಶ್ಲೋಕ ಇದಾಗಿದ್ದು ಮೇಲೆ ನೀಡಿರುವ ಸಾಲುಗಳಿಂದ ಆರಂಭವಾಗಿ ಅನೇಕ ಸಾಲುಗಳಿವೆ. ಶ್ರೀ ರಾಮನ ಕೃಪೆ ಭವಭಯವನ್ನು ದೂರ ಮಾಡುತ್ತದೆ. ಈ ಶ್ಲೋಕವನ್ನು ರಾಮನವಮಿಯ೦ದು ಪಠಿಸಿದರೆ ದೇವರು ಸಂತುಷ್ಟನಾಗಿ ಜೀವನದಲ್ಲಿ ಶುಭವನ್ನು ಕರುಣಿಸುತ್ತಾನೆ.