ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಅವರ ಮುದ್ದು ಮಗ ಯಥರ್ವ್ ಯಶ್ ಹೊಸ ವಿಡಿಯೋವೊಂದು ವೈರಲ್ ಆಗಿದ್ದು, ಅಪ್ಪ – ಮಗನ ಸಂಭಾಷಣೆ ಅಭಿಮಾನಿಗಳಿಗೆ ಮನರಂಜನೆ ನೀಡಿದೆ.
ಆದರೆ ಮಗ ರಾಕಿಂಗ್ ಸ್ಟಾರ್ ಯಶ್ ಮೇಲೆ ಆರೋಪ ಮಾಡಿದ್ದು, ಫ್ಯಾನ್ಸ್ ತರ ತರಹದ ಕಾಮೆಂಟ್ ಮಾಡುತ್ತಿದ್ದಾರೆ. ಹೌದು, ಯಥರ್ವ್ ಯಶ್ ಸಪ್ಪೆ ಮುಖ ಮಾಡಿಕೊಂಡು ಅಮ್ಮನ ಬಳಿ ಕುಳಿತಿರುತ್ತಾನೆ. ಆಗ ಯಶ್ ಮಗನಿಗೆ ಅಪ್ಪ ಗುಡ್ ಬಾಯ್ ಅಲ್ವ ಎಂದು ಕೇಳುತ್ತಾರೆ, ಆದರೆ ಮಗ ಇಲ್ಲ ಅಪ್ಪ ಬ್ಯಾಡ್ ಬಾಯ್, ಅಮ್ಮ ಗುಡ್ ಗರ್ಲ್ಸ್ ಎನ್ನುತ್ತಾನೆ.
ಪದೇ ಪದೇ ಯಶ್ ಅದೇ ಪ್ರಶ್ನೆ ಕೇಳುತ್ತಾರೆ, ಅದಕ್ಕೆ ಮಗ ಯಥರ್ವ್ ಕೂಡ ಅಪ್ಪ ಬ್ಯಾಡ್ ಬಾಯ್ ಎಂದು ಹೇಳುತ್ತಾನೆ. ಯಶ್ ಅದೆಷ್ಟೇ ಪ್ರಯತ್ನ ಪಟ್ಟರೂ ಸಹ ಮಗನ ಬಾಯಲ್ಲಿ ಗುಡ್ ಬಾಯ್ ಎಂದು ಹೇಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಸದ್ಯ ಈ ವಿಡಿಯೋ ಫುಲ್ ವೈರಲ್ ಆಗುತ್ತಿದೆ.