ಬೆಂಗಳೂರು: ಅಂಬಿ ನಿಂಗ್ ವಯಸಾಯ್ತೋ ನಿರ್ದೇಶಕ ಗುರುದಥ್ ಗಾಣಿಗ ಅವರು ನಟ ಪ್ರಜ್ವಲ್ ದೇವರಾಜ್ ಅವರೊಂದಿಗೆ ಆಕ್ಷನ್ ಥ್ರಿಲ್ಲರ್ ನಿರ್ದೇಶಿಸಲು ಸಜ್ಜಾಗಿದ್ದು, ಇದು ಈಗ ಪ್ರಿ-ಪ್ರೊಡಕ್ಷನ್ ಹಂತದಲ್ಲಿದೆ. ಜನವರಿ ಮಧ್ಯದೊಳಗೆ ಅಧಿಕೃತ ಘೋಷಣೆ ಮಾಡಲು ಯೋಜಿಸುತ್ತಿರುವ ತಯಾರಕರು ಶೀರ್ಷಿಕೆ, ಪಾತ್ರವರ್ಗ ಮತ್ತು ತಾಂತ್ರಿಕ ಸಿಬ್ಬಂದಿಯನ್ನು ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿದ್ದಾರೆ.
ಇತ್ತೀಚಿನ ಮಾಹಿತಿ ಪ್ರಕಾರ ನಾಯಕಿಯ ಹುಡುಕಾಟದಲ್ಲಿದ್ದ ಪ್ರೊಡಕ್ಷನ್ ಹೌಸ್, ಆಶಿಕಾ ರಂಗನಾಥ್ ಮತ್ತು ಅದಿತಿ ಪ್ರಭುದೇವರನ್ನು ಇಬ್ಬರನ್ನು ಈ ಪಾತ್ರಕ್ಕಾಗಿ ಸಂಪರ್ಕಿಸಿದ್ದು ಶೀಘ್ರದಲ್ಲೇ ಅವರಲ್ಲಿ ಒಬ್ಬರನ್ನು ಅಂತಿಮಗೊಳಿಸಲಿದ್ದಾರೆ. ನಟಿ ಆಶಿಕಾ ರಂಗನಾಥ್ ಪ್ರಸ್ತುತ ರೇಮೋ ಮತ್ತು ಮದಗಜ ಸಿನಿಮಾದಲ್ಲಿ ನಟಿಸುತ್ತಿದ್ದು, ನಟಿ ಅದಿತಿ ಪ್ರಭುದೇವ ಅವರು ಟ್ರಿಬಲ್ ರೈಡಿಂಗ್ ಮತ್ತು ಭಗವಾನ್ ಶ್ರೀ ಕೃಷ್ಣ ಪರಮಾತ್ಮ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಮಾನವ ಕಳ್ಳಸಾಗಣೆ ಬಗ್ಗೆ ಇನ್ನೂ ಹೆಸರಿಡದ ಥ್ರಿಲ್ಲರ್ ಸಿನಿಮಾದಲ್ಲಿ ನಟ ಪ್ರಜ್ವಲ್ ದೇವರಾಜ್ ಅವರ ತಂದೆ ದೇವರಾಜ್ ಪ್ರಮುಖ ಪಾತ್ರ ವಹಿಸಲಿದ್ದು, ಅಭಿಮನ್ಯು ಸದಾನಂದನ್ ಅವರ ಛಾಯಾಗ್ರಹಣವಿದೆ. ಬೆಂಗಳೂರು ಕುಮಾರ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾದ ಈ ಸಿನಿಮಾ ನಟ ಪ್ರಜ್ವಾಲ್ ದೇವರಾಜ್ ಅವರ ವೀರಂ ಚಿತ್ರದ ಶೂಟಿಂಗ್ ಮುಗಿದ ನಂತರ ಚಿತ್ರೀಕರಣ ನಡೆಸಲು ಸಜ್ಜಾಗಿದ್ದಾರೆ.