UI Movie collection : ರಿಯಲ್ ಸ್ಟಾರ್ ಉಪೇಂದ್ರ (Upendra) ನಿರ್ದೇಶಿಸಿ, ನಟಿಸಿರುವ ‘UI’ ಸಿನಿಮಾ (UI Movie) ಅದ್ಧೂರಿಯಾಗಿ ಬಿಡುಗಡೆಯಾಗಿದ್ದು, ರಿಲೀಸ್ ಆದ ಮೊದಲ ದಿನವೇ ರಾಜ್ಯದಲ್ಲಿ ‘UI’ ಸಿನಿಮಾ ₹9 ಕೋಟಿ ಕಲೆಕ್ಷನ್ (UI Movie collection) ಮೂಲಕ ದಾಖಲೆ ಬರೆದಿದೆ.
ಹೌದು, ಕರ್ನಾಟಕ ಸೇರಿದಂತೆ ಆಂಧ್ರ ಪ್ರದೇಶ, ತೆಲಂಗಾಣದಲ್ಲೂ ಹೌಸ್‌ಫುಲ್ ಪ್ರದರ್ಶನ ಕಂಡಿದೆ. ಸಿನಿಮಾ ನೋಡಿ ಪ್ರೇಕ್ಷಕರು ಕೊಂಡಾಡಿದ್ದು, ಚಿತ್ರದ ಕಥೆಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.
UI Movie : ಫುಲ್ ಮಾರ್ಕ್ಸ್ ಕೊಟ್ಟ ಪ್ರೇಕ್ಷಕರು
ರಿಯಲ್ ಸ್ಟಾರ್ ಉಪೇಂದ್ರ ನಟಿಸಿ, ನಿರ್ದೇಶಿಸಿರುವ ‘ಯುಐ’ ಸಿನಿಮಾ ಬಹುಭಾಷೆಯಲ್ಲಿ ಡಿ.20 ರಂದು ಅದ್ಧೂರಿಯಾಗಿ ತೆರೆಕಂಡಿದ್ದು, ತೆರೆಕಂಡ ಮೊದಲ ದಿನವೇ ಅಭಿಮಾನಿಗಳ ಮನಗೆಲ್ಲುವಲ್ಲಿ ಚಿತ್ರ ತಂಡ ಯಶಸ್ವಿಯಾಗಿದೆ.
ಇದನ್ನೂ ಓದಿ: UI Movie Review | ಬಹು ನಿರೀಕ್ಷಿತ ಉಪೇಂದ್ರ ನಿರ್ದೇಶನದ UI ಸಿನಿಮಾ ಹೇಗಿದೆ?
ಚಿತ್ರಕಥೆಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ಮತ್ತೊಮ್ಮೆ ಸಿನಿಮಾ ನೋಡಿದ್ರೆ ಮಾತ್ರ ಅರ್ಥವಾಗೋದು ಎಂದು ಹೆಚ್ಚಿನ ಪ್ರೇಕ್ಷಕರು ತಿಳಿಸಿದ್ದು, ಕಾಯಕವೇ ಕೈಲಾಸ, ಜೀವನದ ಬಗ್ಗೆ ಫೋಕಸ್ ಮಾಡಿ ಎನ್ನುವ ಸಂದೇಶವಿದ್ದು, ಉಪೇಂದ್ರ ನಟನೆ ಮತ್ತು ನಿರ್ದೇಶನಕ್ಕೆ ಫ್ಯಾನ್ಸ್ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ.
ಇನ್ನೂ 2040 ಭವಿಷ್ಯದ ಅಸಲಿ ಕಥೆಯೊಂದಿಗೆ ‘UI’ ಸಿನಿಮಾ ಮೂಲಕ ಉಪೇಂದ್ರ ಅಬ್ಬರಿಸಿದ್ದು, ಚಿತ್ರದಲ್ಲಿ ಉಪೇಂದ್ರಗೆ ಕೊಡಗಿನ ಕುವರಿ ರೀಷ್ಮಾ ನಾಣಯ್ಯ ಜೋಡಿಯಾಗಿದ್ದಾರೆ. ಲಹರಿ ಫಿಲಂಸ್ & ವೀನಸ್ ಎಂಟರ್‌ಟೈನರ್ಸ್ ಮೂಲಕ ಮನೋಹರ್ ನಾಯ್ಡು, KP ಶ್ರೀಕಾಂತ್ ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಾರೆ.
UI Movie collection : ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಟಾಪ್ ಆರಂಭಿಕ ದಿನದ ಕನ್ನಡ ಸಿನಿಮಾಗಳು
- ಕೆಜಿಎಫ್ 2: 134.5 ಕೋಟಿ ಒಟ್ಟು
- ವಿಕ್ರಾಂತ್ ರೋಣ: ಒಟ್ಟು 35.35 ಕೋಟಿ
- ಜೇಮ್ಸ್: ಒಟ್ಟು 28 ಕೋಟಿ
- ಕೆಜಿಎಫ್ ಅಧ್ಯಾಯ 1: ಒಟ್ಟು 25 ಕೋಟಿ
- ರಾಬರ್ಟ್: ಒಟ್ಟು 17.8 ಕೋಟಿ
- ಗಾಳಿಪಟ 2: 15 ಕೋಟಿ ಗಳಿಕೆ
- ಕಬ್ಜಾ: ಒಟ್ಟು 13.55 ಕೋಟಿ
- ಕ್ರಾಂತಿ : ಒಟ್ಟು 12.75 ಕೋಟಿ
- ಕಾಟೇರ: ಒಟ್ಟು 11 ಕೋಟಿ
- ಮಾರ್ಟಿನ್: ಒಟ್ಟು 9 ಕೋಟಿ
- UI: ಒಟ್ಟು 9 ಕೋಟಿ
- ಯುವ: 5 ಕೋಟಿ
- ಭೀಮಾ: ಒಟ್ಟು 5 ಕೋಟಿ
- 777 ಚಾರ್ಲಿ: 5 ಕೋಟಿ
- ಸಪ್ತ ಸಾಗರದಾಚೆ ಎಲ್ಲೋ ಸೈಡ್ ಆಗ್ರೋಸ್ (ಪೂರ್ವವೀಕ್ಷಣೆ ಸೇರಿದಂತೆ): 4.1 ಕೋಟಿ
- ಘೋಸ್ಟ್ : ಒಟ್ಟು 4 ಕೋಟಿ
- ಕಾಂತಾರ: ಒಟ್ಟು 3.75 ಕೋಟಿ
- ವೇಧಾ: 2.75 ಕೋಟಿ ರೂ