ಬೆಂಗಳೂರು: ಕ್ಯಾನ್ಸರ್ ಗೆ ಸಂಬಂಧಿಸಿದ ಆಪರೇಷನ್ ಗಾಗಿ ಅಮೆರಿಕಕ್ಕೆ ತೆರಳಿದ್ದ ಶಿವರಾಜಕುಮಾರ್ ರವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಈ ಹಿನ್ನಲೆ ವಿಡಿಯೋ ಒಂದನ್ನು ರಿಲೀಸ್ ಮಾಡಿರುವ ಶಿವಣ್ಣ ದಂಪತಿ ಈ ಬಗ್ಗೆ ಖುದ್ದು ಮಾಹಿತಿಯನ್ನು ನೀಡಿದ್ದಾರೆ.
ತಮ್ಮ ಅಧಿಕೃತ ಟ್ವಿಟ್ಟರ್ ಅಕೌಂಟ್ ನಲ್ಲಿ ಮಾತನಾಡಿರುವ ಶಿವಣ್ಣ ಕ್ಯಾನ್ಸರ್ ಗುಣವಾಗಿದೆ. ಬ್ಲಾಡರ್ ಬದಲಾಯಿಸಿದ್ದು, ಈ ಸಂಬಂಧ ಆಪರೇಷನ್ ನಡೆಸಲಾಗಿದೆ. ನಡೆದಿದ್ದು ಕಿಡ್ನಿ ಟ್ರಾನ್ಸ್‌ಪ್ಲೆಂಟ್ ಅಲ್ಲ. ಈ ಬಗ್ಗೆ ಗೊಂದಲ ಬೇಡ ಎಂದಿದ್ದಾರೆ.
ಮೊದಲು ಆಪರೇಷನ್‌ಗೆ ಬರುವಾಗ ಆತಂಕವಿದ್ದು, ಭಾವುಕನಾಗಿದ್ದೆ. ಆದರೆ ಇಲ್ಲಿಗೆ ಬಂದ ಮೇಲೆ ಸಾಕಷ್ಟು ಜನ ಸ್ನೇಹಿತರು, ಸಹೋದ್ಯೋಗಿಗಳು, ಹಿತೈಷಿಗಳು ಮುಖ್ಯವಾಗಿ ಅಭಿಮಾನಿ ದೇವರುಗಳು ಸಾಕಷ್ಟು ಧೈರ್ಯ ನೀಡಿ, ಬೆಂಬಲ ತೋರಿಸಿದ್ದೀರಿ, ಇದಕ್ಕೆ ನಾನು ಚಿರಋಣಿ ಎಂದು ಭಾವುಕವಾಗಿ ಮಾತನಾಡಿದ್ದಾರೆ. ಅಲ್ಲದೇ ಮಧು ಬಂಗಾರಪ್ಪ ಸೇರಿದಂತೆ ಹಲವರ ಗುಣಗಾನ ಮಾಡಿದ್ದಾರೆ. ಹಾಗೂ ನಾನು ಶೀಘ್ರದಲ್ಲೇ ವಾಪಸ್ ಬರುತ್ತಿದ್ದೇನೆ ಎಂದು ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ.