Sandalwood actors : ಇನ್ನೇನು 2024 ವರ್ಷಕ್ಕೆ ಗುಡ್ ಬೈ ಹೇಳೋಕೆ ಕೌಂಟ್ ಡೌನ್ ಶುರುವಾಗಿದ್ದು, ಪ್ರತಿ ವರ್ಷದಂತೆ ಈ ಬಾರಿಯೂ ಕನ್ನಡಲ್ಲಿ ಸಿನಿರಂಗದಲ್ಲಿ ಕೆಲವು ಸ್ಟಾರ್ ನಟರಾದ ದುನಿಯಾ ನಿಜಯ್, ಗಣೇಶ್, ಶಿವಣ್ಣ, ಉಪೇಂದ್ರ, ಶ್ರೀಮುರಳಿ ಸೇರಿದಂತೆ ಕೆಲವು ನಟರ ಸಿನಿಮಾಗಳು ತೆರೆಕಂಡಿವೆ. ಆದರೆ, 2024 ರಲ್ಲಿ ಸಿನಿಮಾ ಮಾಡದ ಸ್ಯಾಂಡಲ್‌ವುಡ್ ಸೂಪರ್‌ಸ್ಟಾರ್‌ಗಳು (Sandalwood actors) ಇದ್ದಾರೆ. ಅವರು ಯಾರು ನೋಡೋಣ
1. 2024 ರಲ್ಲಿ ಸಿನಿಮಾ ಮಾಡದ ನಟ ಯಶ್ (Sandalwood actors Yash)
ರಾಕಿಂಗ್ ಸ್ಟಾರ್ ಯಶ್ (Actors Yash) ಅಭಿನಯದ ‘ಕೆಜಿಎಫ್ 2’ ಸಿನಿಮಾ ಬಂದು ಎರಡು ವರ್ಷ ಕಳೆದಿದ್ದು, ಸದ್ಯ ರಾಕಿಂಗ್ ಭಾಯ್ ಟಾಕ್ಸಿಕ್ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಟಾಕ್ಸಿಕ್ ಸಿನಿಮಾ 2025 ರ ಏಪ್ರಿಲ್ 10 ರಂದು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿದ್ದು, ಹೀಗಾಗಿ ಈ ವರ್ಷ ಯಶ್ ಅಭಿನಯದ ಚಿತ್ರ ತೆರೆಗೆ ಬಂದಿಲ್ಲ.
ಇದನ್ನೂ ಓದಿ: UI Movie collection | ‘ಯುಐ’ ಸಿನಿಮಾದ ಎರಡನೆ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್ ಎಷ್ಟು?
2. ದರ್ಶನ್ (Sandalwood actors Darshan)
ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) 2023 ರಲ್ಲಿ ಎರಡು ಸಿನಿಮಾಗಳನ್ನು ಮಾಡಿದ್ದರು. ಈ ಪೈಕಿ ‘ಕಾಟೇರ’ ಸೂಪರ್ ಹಿಟ್ ಚಿತ್ರವಾಗಿತ್ತು. ಈ ವರ್ಷ ದರ್ಶನ್ ಹಾಗೂ ಮಿಲನಾ ಪ್ರಕಾಶ್ ಕಾಂಬಿನೇಷನ್‌ನ ‘ಡೆವಿಲ್’ ಸಿನೆಮಾವನ್ನು 2024ರ ಕ್ರಿಸ್‌ಮಸ್‌ಗೆ ರಿಲೀಸ್ ಮಾಡುವುದಾಗಿ ಚಿತ್ರತಂಡ ಘೋಷಣೆ ಮಾಡಿತ್ತು. ಆದರೆ, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಅರೆಸ್ಟ್ ಆದರು. ಹೀಗಾಗಿ, ಡೆವಿಲ್ ಚಿತ್ರದ ಚಿತ್ರೀಕರಣ ಅರ್ಧಕ್ಕೆ ನಿಂತು ಹೋಗಿದೆ.
3. ರಿಷಬ್ ಶೆಟ್ಟಿ
ರಿಷಬ್ ಶೆಟ್ಟಿ (Rishab Shetty) ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾ 2022ರ ಸೆಪ್ಟೆಂಬರ್ 30 ರಂದು ಬಿಡುಗಡೆಯಾಗಿ ಎಲ್ಲರ ಮನಗೆದ್ದಿತ್ತು. ಬಳಿಕ ರಿಷಬ್ ಅಭಿನಯದ ಯಾವ ಸಿನಿಮಾನೂ ತೆರೆಗೆ ಬಂದಿಲ್ಲ. ಸದ್ಯ ರಿಷಬ್ ಕಾಂತಾರ ಪ್ರಿಕ್ಟೇಲ್‌ನಲ್ಲಿ ಬ್ಯುಸಿಯಾಗಿದ್ದು, ಈ ಚಿತ್ರ ಮುಂದಿನ ವರ್ಷ ಅಕ್ಟೋಬರ್ 02 ರಂದು ತೆರೆಗೆ ಬರುವುದಾಗಿ ಚಿತ್ರತಂಡ ಘೋಷಿಸಿದ್ದು, ಇದರ ಜೊತೆಗೆ ದಿ ಪ್ರೈಡ್ ಆಫ್ ಛತ್ರಪತಿ ಶಿವಾಜಿ ಮಹಾರಾಜ್, ಅಂಟಗೋನಿ ಶೆಟ್ಟಿ, ಬೆಲ್ ಬಾಟಮ್ 2 ಸಿನಿಮಾಗಳು ಸಾಲಿನಲ್ಲಿವೆ.
ಇದನ್ನೂ ಓದಿ: Vanitha vijayakumar | 43ನೇ ವಯಸ್ಸಿನಲ್ಲಿ ನಾಲ್ಕನೇ ಮದುವೆಯಾದ ತಮಿಳಿನ ಖ್ಯಾತ ನಟಿ
4. ರಕ್ಷಿತ್ ಶೆಟ್ಟಿ
2023ರಲ್ಲಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ (Rakshit Shetty) ಅವರ ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ ಮತ್ತು ಸೈಡ್ ಬಿ ಚಿತ್ರಗಳು ಬಿಡುಗಡೆಯಾಗಿ ಸೂಪರ್ ಹಿಟ್ ಆಗಿದ್ದು, ಇದಾದ ಬಳಿಕ ರಕ್ಷಿತ್ ನಟನೆಯ ಯಾವ ಚಿತ್ರಗಳು ತೆರೆಗೆ ಬಂದಿಲ್ಲ. ಸದ್ಯ, ರಕ್ಷಿತ್ ಶೆಟ್ಟಿ ತಾವೇ ನಿರ್ದೇಶಿಸಿ, ನಟಿಸುತ್ತಿರುವ ರಿಚರ್ಡ್ ಆಂಟಿನಿ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.
5. ಡಾರ್ಲಿಂಗ್ ಕೃಷ್ಣ
ಇನ್ನು, 2023ರಲ್ಲಿ ಲವ್ ಬರ್ಡ್ಸ್, ಕೌಸಲ್ಯ ಸುಪ್ರಜಾ ರಾಮ, ಶುಗರ್ ಫ್ಯಾಕ್ಟರಿ, ಮಿ.ಬ್ಯಾಚುಲರ್ ಸಿನಿಮಾಗಳಲ್ಲಿ ನಟಿಸಿದ್ದ ಡಾರ್ಲಿಂಗ್ ಕೃಷ್ಣ(Darling Krishna) ಈ ವರ್ಷ ಅವರ ನಟನೆಯ ಯಾವ ಸಿನಿಮಾಗಳು ತೆರೆಗೆ ಬಂದಿಲ್ಲ. ಸದ್ಯ ಅವರು ಫಾದರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.