ಕೆಜಿಎಫ್-2 ಚಿತ್ರದಲ್ಲಿ ಬಂದೂಕಿನಿಂದ ಸಿಗರೇಟ್ ಹಚ್ಚುವ ದೃಶ್ಯ ತೆಗೆಯುವಂತೆ ರಾಕಿಂಗ್ ಸ್ಟಾರ್ ಯಶ್‌ಗೆ ನೋಟಿಸ್

ಬೆಂಗಳೂರು: ನಟ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಆರೋಗ್ಯ ಇಲಾಖೆ ನೋಟಿಸ್ ನೀಡಿದೆ. ಇತ್ತೀಚಿಗೆ ನಟ ರಾಕಿಂಗ್ ಸ್ಟಾರ್ ಯಶ್ ಅವರ ಅಭಿನಯದ ಬಹು ನಿರೀಕ್ಷಿತ ಕೆಜಿಎಫ್ ಚಾಪ್ಟರ್- 2 ಚಿತ್ರದ ಟೀಸರ್ ಬಿಡುಗಡೆ…

Actor yash kgf 2 movie vijayaprabha

ಬೆಂಗಳೂರು: ನಟ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಆರೋಗ್ಯ ಇಲಾಖೆ ನೋಟಿಸ್ ನೀಡಿದೆ. ಇತ್ತೀಚಿಗೆ ನಟ ರಾಕಿಂಗ್ ಸ್ಟಾರ್ ಯಶ್ ಅವರ ಅಭಿನಯದ ಬಹು ನಿರೀಕ್ಷಿತ ಕೆಜಿಎಫ್ ಚಾಪ್ಟರ್- 2 ಚಿತ್ರದ ಟೀಸರ್ ಬಿಡುಗಡೆ ಆಗಿತ್ತು. ಈ ಟೀಸರ್ ನಲ್ಲಿ ನಟ ಯಶ್ ಅವರು ಬಂದೂಕಿನಿಂದ ಸಿಗರೇಟ್ ಹಚ್ಚುವ ದೃಶ್ಯ ಎಲ್ಲರನ್ನು ಮನಸೆಳೆದಿತ್ತು.

ಈ ದೃಶ್ಯ ಯುವ ಸಮುದಾಯವನ್ನು ಸಿಗರೇಟ್ ಸೇದುವಂತೆ ಪ್ರಚೋದಿಸುತ್ತದೆ. ಹಾಗಾಗಿ ಈ ಸೀನ್ ಅನ್ನು ತೆಗೆಯುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಅಷ್ಟೇ ಅಲ್ಲದೇ ಟೀಸರ್​ನಲ್ಲಿರುವ ಸಿಗರೇಟ್ ಸೇದುವ ದೃಶ್ಯವನ್ನು ಕೂಡ ತೆಗೆಯುವಂತೆ ಹೇಳಿದೆ.

ಇತ್ತೀಚಿಗೆ ನಟ ರಾಕಿಂಗ್ ಅಭಿನಯದ ಕೆಜಿಎಫ್ ಚಾಪ್ಟರ್- 2 ಟೀಸರ್ ಬಿಡುಗಡೆಯಾದಾಗಿನಿಂದ ಯೂಟ್ಯೂಬ್ ನಲ್ಲಿ 142  ಮಿಲಿಯನ್ ವೀಕ್ಷಣೆ ಮತ್ತು 7 ಮಿಲಿಯನ್ ಮೆಚ್ಚುಗೆ ಪಡೆದುಕೊಂಡು ದಾಖಲೆ ನಿರ್ಮಿಸಿದೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.