ಬೆಂಗಳೂರು: ಚಂದನವನದ ಸ್ಫುರದ್ರೂಪಿ ನಟ, ನಿರ್ದೇಶಕ, ರಮೇಶ್ ಅರವಿಂದ ಅವರ ಪುತ್ರಿಯ ಆರತಕ್ಷತೆ ಕಾರ್ಯಕ್ರಮದಕ್ಕೆ ಸ್ಯಾಂಡಲ್ ವುಡ್ ನಟ ನಟಿಯರು ಆಗಮಿಸಿ ನವದಂಪತಿಗಳಿಗೆ ಶುಭ ಹಾರೈಸಿದರು.
ಸ್ಫುರದ್ರೂಪಿ ನಟ ರಮೇಶ್ ಅರವಿಂದ ಅವರ ಪುತ್ರಿ ನಿಹಾರಿಕಾ ಮತ್ತು ಅಕ್ಷಯ್ ಡಿಸೆಂಬರ್ ೨೮ ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಈ ವೇಳೆ ನಿನ್ನೆ ರಾತ್ರಿ ಆರತಕ್ಷತೆ ಸಮಾರಂಭವನ್ನು ಆಯೋಜಿಸಲಾಗಿತ್ತು, ಈ ಸಂದರ್ಭದಲ್ಲಿ ಸ್ಯಾಂಡಲ್ ವುಡ್ ನಟ, ನಟಿಯರ ಡ್ಯಾನ್ಸ್ ಮಾಡಿದ್ದೂ ಎಲ್ಲರ ಗಮನ ಸೆಳೆಯಿತು.
ಅದರಲ್ಲೂ ಕಿಚ್ಚ ಸುದೀಪ್ ಮತ್ತು ರಾಕಿಂಗ್ ಸ್ಟಾರ್ ಯಶ್ ಸಕತ್ ಡ್ಯಾನ್ಸ್ ನೋಡಿ ಸಮಾರಂಭಕ್ಕೆ ಆಗಮಿಸಿದ್ದವರು ಫುಲ್ ಫಿದಾ ಆದರು. ಇನ್ನು ನಟರ ಪತ್ನಿಯರಾದ ರಾಧಿಕಾ ಪಂಡಿತ್, ಶಿಲ್ಪ ಗಣೇಶ್ ಸೇರಿದಂತೆ ನಟಿಯರಾದ ಹರ್ಷಿಕಾ ಪೂಣಚ್ಚ, ಅಮೂಲ್ಯ ಹಾಗು ಸಂಗೀತ ನಿರ್ದೇಶಕ ಗುರುಕಿರಣ್ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಅಷ್ಟೇ ಅಲ್ಲದೆ ರಮೇಶ್ ಅರವಿಂದ ಅವರ ಪುತ್ರಿಯ ಆರತಕ್ಷತೆ ಕಾರ್ಯಕ್ರಮದಕ್ಕೆ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ, ಸನ್ಮಾನ್ಯ ಉಪಮುಖ್ಯಮಂತ್ರಿಗಳಾದ ಡಾ.ಸಿ.ಎನ್.ಅಶ್ವಥ್ ನಾರಾಯಣ್, ಸಂಸದರಾದ ತೇಜಸ್ವಿ ಸೂರ್ಯ, ಶಾಸಕ ಭೈರತಿ ಸುರೇಶ್, ಮುನಿರತ್ನ, ಸಂಸದ ತೇಜಸ್ವಿ ಸೂರ್ಯ, ಸುಮಲತಾ ಅಂಬರೀಷ್, ನಾದಬ್ರಹ್ಮ ಹಂಸಲೇಖ ಸೇರಿದಂತೆ ಗಣ್ಯರು ಆಗಮಿಸಿ ನವದಂಪತಿಗಳಿಗೆ ಶುಭ ಹಾರೈಸಿದರು.