Kantara Chapter 1 : ಕನ್ನಡಿಗ ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಚಾಪ್ಟರ್ 1 ಬಾಕ್ಸ್ ಆಫೀಸ್ ಸ್ಮ್ಯಾಶ್ ಆಗಿ ಮುಂದುವರೆದಿದೆ. ಈ ಚಿತ್ರವು ಗಳಿಕೆಯಲ್ಲಿ ಬಾಹುಬಲಿ ಮತ್ತು ಸಲಾರ್ ಚಿತ್ರಗಳನ್ನು ಹಿಂದಿಕ್ಕಿದೆ.
ಹೌದು, ಕಾಂತಾರ ಭಾರತದ ಬಾಕ್ಸ್ ಆಫೀಸ್‌ನಲ್ಲಿ ₹437.65 ಕೋಟಿ ಗಳಿಸಿದ್ದರೆ, ವಿಶ್ವಾದ್ಯಂತ ₹600 ಕೋಟಿ ದಾಟಿದೆ. ಜೀವಮಾನದ ಕಲೆಕ್ಷನ್‌ನಲ್ಲಿ ಈ ಚಿತ್ರವು ಅಮೀರ್ ಖಾನ್ ಅವರ ದಂಗಲ್, ರಜನಿಕಾಂತ್ ಅವರ ʻಜೈಲರ್ʼ ಮತ್ತು ರಣವೀರ್ ಕಪೂರ್ ಅವರ ʻಸಂಜುʼವನ್ನು ಮೀರಿಸಿದೆ ಎಂದು ವರದಿಯಾಗಿದೆ.
ಕಾಂತಾರ 1: 11 ದಿನಗಳಲ್ಲಿ ದಾಖಲೆ ಕಲೆಕ್ಷನ್, ರಿಷಬ್ ಶೆಟ್ಟಿ ಶ್ರಮಕ್ಕೆ ಫಲ

ಕಾಂತಾರ: ಚಾಪ್ಟರ್ 1 ಸಿನಿಮಾ ಬಿಡುಗಡೆಯಾದ 11 ದಿನಗಳಲ್ಲಿ ದಾಖಲೆ ಮೊತ್ತ ಗಳಿಸಿದೆ. ಸಿನಿಮಾಕ್ಕಾಗಿ ರಿಷಬ್ ಶೆಟ್ಟಿ ವರ್ಷಗಳ ಕಾಲ ಶ್ರಮಿಸಿದ್ದಾರೆ.
ಕ್ಲೈಮ್ಯಾಕ್ಸ್ ಚಿತ್ರೀಕರಣದ ವೇಳೆ ಕಾಲುಗಳು ಊದಿಕೊಂಡು, ದೇಹ ನಿತ್ರಾಣಗೊಂಡಿದ್ದರೂ ಚಿತ್ರೀಕರಣ ಮುಂದುವರಿಸಿದ್ದರು. ಅರಣ್ಯ ಪ್ರದೇಶದಲ್ಲಿ ವಿಷಮ ಪರಿಸ್ಥಿತಿಗಳಲ್ಲಿ, ಮೇಕಪ್ ಧರಿಸಿ ಗಂಟೆಗಟ್ಟಲೆ ನಡೆದು ಶೂಟಿಂಗ್ ಸ್ಥಳ ಸೇರಬೇಕಿತ್ತು. ಈ ಕಷ್ಟಗಳ ನಡುವೆಯೂ ಸಿನಿಮಾ ಯಶಸ್ವಿಯಾಗಿರುವುದು ಶಕ್ತಿಗಳ ಆಶೀರ್ವಾದದಿಂದ ಸಾಧ್ಯ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.




