Parineeti Chopra – Raghav Chadha: ಬಾಲಿವುಡ್ ನಟಿ ಪರಿಣಿತಿ ಚೋಪ್ರಾ (Parineeti Chopra) ಮತ್ತು ಆಪ್ ಸಂಸದ ರಾಘವ್ ಚಡ್ಡಾ (Raghav Chadha) ಅವರ ಡೇಟಿಂಗ್ ಸುದ್ದಿ ಬಹಳ ದಿನಗಳಿಂದ ಚಾಲ್ತಿಯಲ್ಲಿದೆ. ಈಗ ಒಂದು ವರದಿ ಪ್ರಕಾರ ಪರಿಣಿತಿ ಮತ್ತು ರಾಘವ್ ಇದೇ ತಿಂಗಳು ನಿಶ್ಚಿತಾರ್ಥ (Engagement) ಮಾಡಿಕೊಳ್ಳಲಿದ್ದಾರೆ. ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ ಅವರು ಮೇ 13 ರಂದು ನವದೆಹಲಿಯಲ್ಲಿ ಪರಸ್ಪರ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಆದರೆ, ಇದುವರೆಗೂ ಪರಿಣಿತಿ ಅಥವಾ ರಾಘವ್ ಅವರ ನಿಶ್ಚಿತಾರ್ಥದ (Parineeti Chopra and Raghav Chadha engagement) ಈ ಸುದ್ದಿಗಳ ಬಗ್ಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.
ಇದನ್ನು ಓದಿ: ಆಧಾರ್ ನಿಂದ ಹೊಸ ಫೀಚರ್, ನಿಮ್ಮ OTP ಯಾವ ನಂಬರ್‌ಗೆ ಹೋಗುತ್ತದೆ ಎಂದು ಸುಲಭವಾಗಿ ತಿಳಿಯಿರಿ!

ಆದರೆ, ಮಾರ್ಚ್ ನಲ್ಲಿ ಡಿನ್ನರ್ ಡೇಟ್ ಗೆ ಹೋದಾಗ ಇಬ್ಬರೂ ರಿಲೇಶನ್ ಶಿಪ್ ನಲ್ಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿತ್ತು. ಈ ಸುದ್ದಿ ಕೆಲವೇ ಕ್ಷಣಗಳಲ್ಲಿ ಬಾಲಿವುಡ್‌ನಲ್ಲಿ ವೈರಲ್ ಆಗಿದೆ. ಆದರೆ ಸಿನಿಮಾ ವಲಯದಲ್ಲಿ ಕೇಳಿಬರುತ್ತಿರುವ ಇತ್ತೀಚಿನ ಮಾಹಿತಿಯ ಪ್ರಕಾರ ರಾಘವ್ ಚಡ್ಡಾ ಮತ್ತು ಪರಿಣಿತಿ ಚೋಪ್ರಾ ಅವರ ನಿಶ್ಚಿತಾರ್ಥ ಮೇ 13 ರಂದು ನಡೆಯಲಿದೆ. ಅವರ ನಿಶ್ಚಿತಾರ್ಥಕ್ಕೆ ನವದೆಹಲಿ ವೇದಿಕೆಯಾಗಲಿದೆ.
ಇದನ್ನು ಓದಿ: ಮದುವೆಯಾಗದೆ ಗರ್ಭಿಣಿಯಾದ ಖ್ಯಾತ ನಟಿ ಇಲಿಯಾನ; ಮಗುವಿನ ತಂದೆ ಯಾರು..!?

ಪಂಜಾಬಿ ಸಂಪ್ರದಾಯದಂತೆ ನಿಶ್ಚಿತಾರ್ಥ ಮುಂದು ನಡೆಯುವ ರೋಖಾ ಕಾರ್ಯವೂ ಮುಗಿದಿದೆ ಎಂಬ ಮಾತು ಕೂಡ ಕೇಳಿಬರುತ್ತಿದೆ. ಇದೀಗ ಮೇ 13 ರಂದು ನಿಶ್ಚಿತಾರ್ಥ ನಡೆಯಲಿದ್ದು, ಮದುವೆ ಯಾವಾಗ ನಡೆಯಲಿದೆ ಎಂಬ ಸುದ್ದಿಯೂ ಹೊರಬಿದ್ದಿದೆ. ಈ ವರ್ಷ ಅಕ್ಟೋಬರ್‌ನಲ್ಲಿ ರಾಘವ್ ಮತ್ತು ಪರಿಣಿತಿ ವಿವಾಹವಾಗಲಿದ್ದಾರೆ. ರಾಘವ್ ಚಡ್ಡಾ ಮತ್ತು ಪರಿಣಿತಿ ಚೋಪ್ರಾ ಭೇಟಿಯಾಗಿದ್ದು ಹೇಗೆ? ಅದು ಹೇಗೆ ಪ್ರೇಮಕ್ಕೆ ತಿರುಗಿತು ಎಂಬುದು ಇನ್ನೂ ಹಲವರಿಗೆ ಒಂದು ಒಗಟು. ಆದರೆ ಇಬ್ಬರೂ ಒಟ್ಟಿಗೇ ಓದಿದ್ದು, ಕಾಮನ್ ಫ್ರೆಂಡ್ಸ್ ಮೂಲಕ ಏರ್ಪಟ್ಟ ಪರಿಚಯ ಇದೀಗ ಪ್ರೇಮಕ್ಕೆ ದಾರಿ ಮಾಡಿದೆ ಎಂಬ ಮಾತು ಕೇಳಿಬರುತ್ತಿದೆ.
ಪರಿಣಿತಿ ಚೋಪ್ರಾ ಒಂದು ಕಡೆ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಮತ್ತೊಂದೆಡೆ, ರಾಘವ್ ಚಡ್ಡಾ ರಾಜಕೀಯದಲ್ಲಿ ಬ್ಯುಸಿಯಾಗಿದ್ದಾರೆ. ಅದಕ್ಕಾಗಿಯೇ ಅವರು ಮದುವೆಯಾಗಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಅದಕ್ಕಾಗಿಯೇ ಅವರು ಅಕ್ಟೋಬರ್‌ನಲ್ಲಿ ಮದುವೆಯನ್ನು ಫಿಕ್ಸ್ ಮಾಡಲು ಬಯಸಿದ್ದು, ತಮ್ಮ ಪ್ಲಾನ್‌ನಂತೆ ಅಕ್ಟೋಬರ್‌ನಲ್ಲಿ ಮದುವೆಯಾಗಲಿದ್ದಾರೆ ಎನ್ನಲಾಗಿದೆ.
ಇದನ್ನು ಓದಿ: 3 ವಿವಾಹಿತ ನಟರು, ವಿವಾಹಿತ ಕ್ರಿಕೆಟಿಗ, ಆದರೂ 48 ನೇ ವಯಸ್ಸಿನಲ್ಲಿ ನಗ್ಮಾ ಏಕಾಂಗಿ!