ಮದ್ವೆಯಾಗಿ ಒಂದು ಮಗುವಿರುವ ವಿವಾಹಿತನೊಂದಿಗೆ ಸಂಬಂಧ ಹೊಂದಿದ್ದ ಜಯಶ್ರೀ ಆರಾಧ್ಯ!

ಬಿಗ್​ ಬಾಸ್​ ಒಟಿಟಿ ಕನ್ನಡ’ದ ಮೊದಲ ಸೀಸನ್​ ನಲ್ಲಿ ಕಂಟೆಸ್ಟೆಂಟ್ ನಲ್ಲಿ ಜಯಶ್ರೀ ಆರಾಧ್ಯ ಕೂಡ ಒಬ್ಬರಾಗಿದ್ದು, ಈ ವೇಧಿಕೆಯಲ್ಲಿ ಹಲವರು ತಮ್ಮ ಸಿಹಿ ಮತ್ತು ಕಹಿ ಘಟನೆಗಳನ್ನು ಹಂಚಿಕೊಂಡಿದ್ದಾರೆ. ಇನ್ನು ಜಯಶ್ರೀ ಆರಾಧ್ಯ…

Jayashree Aradhya

ಬಿಗ್​ ಬಾಸ್​ ಒಟಿಟಿ ಕನ್ನಡ’ದ ಮೊದಲ ಸೀಸನ್​ ನಲ್ಲಿ ಕಂಟೆಸ್ಟೆಂಟ್ ನಲ್ಲಿ ಜಯಶ್ರೀ ಆರಾಧ್ಯ ಕೂಡ ಒಬ್ಬರಾಗಿದ್ದು, ಈ ವೇಧಿಕೆಯಲ್ಲಿ ಹಲವರು ತಮ್ಮ ಸಿಹಿ ಮತ್ತು ಕಹಿ ಘಟನೆಗಳನ್ನು ಹಂಚಿಕೊಂಡಿದ್ದಾರೆ. ಇನ್ನು ಜಯಶ್ರೀ ಆರಾಧ್ಯ ಕೂಡ ತಮ್ಮ ಜೀವನದ ಅನುಭವಗಳನ್ನು ಹಂಚಿಕೊಂಡಿದ್ದು ವಿವಾಹಿತ ಪುರುಷನೊಂದಿಗೆ ಸಂಬಂಧ ಇಟ್ಟುಕೊಂಟಿದ್ದಾಗಿ ಹೇಳಿಕೊಂಡಿದ್ದಾರೆ.

ಹೌದು, ಮದುವೆಯಾಗಿ ಒಂದು ಮಗು ಇದ್ದ ವ್ಯಕ್ತಿಯ ಜೊತೆ ಡೇಟಿಂಗ್​ ಮಾಡಿದ್ದೆ. ಯಾವ ರೀತಿ ಜೂಜಾಡಬೇಕು ಎಂಬುದನ್ನು ಕಲಿತಿದ್ದು, ಸುಮಾರು ಒಂದೂವರೆ ವರ್ಷಗಳವರೆಗೆ ನಾನು ಜೂಜಾಟದಲ್ಲಿ ಮುಳುಗಿದ್ದೆ. ಆದರೆ, ಜೂಜು ನನ್ನನ್ನು ನಾನೇ ಅಹಸ್ಯಪಟ್ಟುಕೊಳ್ಳುವಂತೆ ಮಾಡಿದ್ದರಿಂದ, ನಾನದನ್ನು ತೊರೆದೆ ಎಂದು ಜಯಶ್ರೀ ಆರಾಧ್ಯ ಹೇಳಿದ್ದಾರೆ.

ಇನ್ನು, ವಿವಾಹಿತನೊಂದಿಗೆ ಸಂಬಂಧ ಬೆಳೆಸಲು ಕಾರಣ ಹೇಳಿದ ಜಯಶ್ರೀ ಆರಾಧ್ಯ, ಆ ಸಮಯದಲ್ಲಿ ನಮ್ಮಿಬ್ಬರಿಗೂ ಒಂದು ಬೆಂಬಲ ಬೇಕಿತ್ತು. ಹೀಗಾಗಿ ನಾವಿಬ್ಬರು ಪರಸ್ಪರ ಜೊತೆಯಾದೆವು. ಇದೇ ಸಂದರ್ಭದಲ್ಲಿ ತನ್ನ ಮಾಜಿ ಪ್ರೇಮಿಗೆ ಕ್ಯಾನ್ಸರ್ ಇರುವುದನ್ನು ಬಿಚ್ಚಿಟ್ಟ ಜಯಶ್ರೀ, ದೀರ್ಘಕಾಲದ ಕಾಯಿಲೆಯಿಂದ ಅವನು ತುಂಬಾ ಬಳಲುತ್ತಿದ್ದರಿಂದ ನಾನು ಆತನನ್ನು ಬಿಡಲಾಗಲಿಲ್ಲ. ಇನ್ನು ನನ್ನ ಕುಟುಂಬದ ಸದಸ್ಯರು ನನ್ನನ್ನು ಆಗಾಗ ಹೀಯಾಳಿಸುತ್ತಿದ್ದು, ಅದನ್ನು ಸಹಿಸಲಾರದೇ ನಾನು ಮನೆ ಬಿಟ್ಟು ಹೋಗುವ ನಿರ್ಧಾರ ಮಾಡಿದ್ದೆ. ಮನೆ ಬಿಟ್ಟು ಹೋಗಿ ಏನಾದರೂ ಸಾಧನೆ ಮಾಡಬೇಕೆಂದುಕೊಂಡಿದ್ದೆ. ಆದರೆ, ನಂತರದ ದಿನಗಳಲ್ಲಿ ನನ್ನ ನಿರ್ಧಾರವೇ ನನಗೆ ಮುಳುವಾಯಿತು ಎಂದು ಹೇಳಿಕೊಂಡಿದ್ದಾರೆ.

Vijayaprabha Mobile App free

ಅಷ್ಟೇ ಅಲ್ಲ, ನಾನು ಜೂಜಾಟಕ್ಕೆ ದಾಸಳಾದ್ದರಿಂದ ಎಲ್ಲವನ್ನು ಕಳೆದುಕೊಂಡೆ. ಆದರೆ, ಕೆಟ್ಟ ದಿನಗಳ ಕರಗಿ ಹೋಗಿ ಒಳ್ಳೆಯ ದಿನಗಳು ಸಹ ನನ್ನ ಬಾಳಲ್ಲಿ ಬಂದಿತು ಜಯಶ್ರೀ ಹೇಳಿದ್ದು, ಸಮಯ ಕಳೆದಂತೆ ಉದ್ಯಮಿಯಾಗಿ ಬದಲಾದೆ ಮತ್ತು ಪ್ರಸ್ತುತ ತನ್ನ ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದೇನೆ ಎಂದು ಹೇಳಿದರು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.