ಮುಂಬೈ: ಸಮಾಜದ ಮೇಲೆ ಸಿನಿಮಾಗಳ ಪ್ರಭಾವ ಗಟ್ಟಿಯಾಗಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಹೀರೋ ಹೇರ್ ಸ್ಟೈಲ್, ನಟಿಯ ವೇಷಭೂಷಣ, ಅವರ ನಡುವೆ ಲವ್ ಟ್ರ್ಯಾಕ್, ಸಿನಿಮಾದಲ್ಲಿ ಅವರು ಮಾಡುವ ಪಾತ್ರಗಳು ಸೇರಿದಂತೆ ಇನ್ನು ಹಲವು ವಿಚಾರಗಳ ಬಗ್ಗೆ ಯುವಕರು ಅನುಸರಿಸುತ್ತಿರುತ್ತಾರೆ.
ಇನ್ನು ಬಾಲಿವುಡ್ ನಲ್ಲಿ ಹಾಟ್ ಅಂಡ್ ಬೋಲ್ಡ್ ಪಾತ್ರಗಳಿಗೆ ಹೆಸರಾದ ಹಾಟ್ ಬ್ಯುಟಿ ನಟಿ ಮಲ್ಲಿಕಾ ಶೆರಾವತ್ ಅವರು ಮರ್ಡರ್, ಹಿಸ್ ಸಿನಿಮಾ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ತನ್ನ ದೇಹದ ಮೈಮಾಟ ಮತ್ತು ಮಾದಕ ನಟನೆಯಿಂದ ಯುವಕರ ಹಾಟ್ ಫೆವರೇಟ್ ಆಗಿದ್ದಾರೆ.
ಇತ್ತೀಚಿಗೆ ಉತ್ತರ ಪ್ರದೇಶದ ಹತ್ರಾಸ್ ಅತ್ಯಾಚಾರ ದುರಂತದ ಬಗ್ಗೆ ಬಾಲಿವುಡ್ ನಟಿ ಮಲ್ಲಿಕಾ ಶೆರಾವತ್ ಆಘಾತಕ್ಕೊಳಗಾಗಿದ್ದು ಟ್ವೀಟ್ ಮಾಡಿ ಪ್ರತಿಕ್ರಿಯಿಸಿದ್ದಾರೆ. ” ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ, ಅಂತಹ ಮನಸ್ಥಿತಿಯನ್ನು ತಡೆಯಲು, ದೇಶದಲ್ಲಿ ಸುಧಾರಣೆಯನ್ನು ತರುವರೆಗೂ ಸಾದ್ಯವಾಗುವುದಿಲ್ಲ” ಎಂದು ಮಲ್ಲಿಕಾ ಶೆರಾವತ್ ಹೇಳಿದ್ದಾರೆ.
ನಟಿ ಮಲ್ಲಿಕಾ ಈ ಟ್ವೀಟ್ ಗೆ ನೆಟ್ಟಿಗರು ಪ್ರತಿಕ್ರಿಯಿಸಿದ್ದು, “ನೀವು ಹೇಳುವ ಮಾತುಗಳು ಬಾಲಿವುಡ್‌ನಲ್ಲಿ ನೀವು ನಿರ್ವಹಿಸುವ ಪಾತ್ರಗಳಿಗೆ ಸಂಪೂರ್ಣವಾಗಿ ವಿರುದ್ಧವಾಗಿವೆ. ಅಂತಹ ಸಂದೇಶಗಳನ್ನು ಮುಖ್ಯವಾಗಿ ಸಿನಿಮಾಗಳ ಮೂಲಕವೂ ತಿಳಿಸಬಹುದೆಂದು ನಿಮಗೆ ತಿಳಿದಿದೆಯೇ? ಎಂದು ಪ್ರಶ್ನಿಸಿದ್ದು, ನೈತಿಕ ವಾಕ್ಯಗಳನ್ನು ಹೇಳುವ ಮೊದಲು ಅವುಗಳನ್ನು ಅನುಸರಿಸಿ ನಂತರ ಉಳಿದವರಿಗೆ ಹೇಳಿ” ಎಂದು ಹೇಳಿದ್ದಾರೆ.
ಇದಕ್ಕೆ ನಟಿ ಮಲ್ಲಿಕಾ ಶೆರಾವತ್ ಪ್ರತಿಕ್ರಿಯಿಸಿದ್ದು ” ಅಂದರೆ ನಿಮ್ಮ ಪ್ರಕಾರ, ನಾನು ನಟಿಸಿದ ಸಿನಿಮಾಗಳು ಅತ್ಯಾಚಾರವನ್ನು ಪ್ರಚೋದಿಸುತ್ತವೆಯೇ? ನಿಮ್ಮಂತಹವರ ಮನಸ್ಥಿತಿಯಿಂದಲೇ ಭಾರತೀಯ ಸಮಾಜದಲ್ಲಿ ಮಹಿಳೆಯರಿಗೆ ನೋವುಂಟಾಗುವುದು. ನನ್ನ ಸಿನಿಮಾಗಳ ಕಾರಣದಿಂದಾಗಿ ನಿನಗೆ ಸಮಸ್ಯೆಯಾಗಿದ್ದರೆ, ನನ್ನ ಸಿನಿಮಾವನ್ನು ನೋಡುವುದನ್ನು ನಿಲ್ಲಿಸಿ” ಎಂದು ನಟಿ ಮಲ್ಲಿಕಾ ಹೇಳಿದ್ದಾಳೆ.
ಇದನ್ನು ಓದಿ: ಅರೆನಗ್ನ ಫೋಟೋ ಪೋಸ್ಟ್ ಮಾಡಿ ತನ್ನ ದೇಹದ ಭಾಗಗಳನ್ನು ವರ್ಣಿಸಿ ಸಂಚಲನ ಮೂಡಿಸಿದ ಹಾಟ್ ಬ್ಯುಟಿ ಇಲಿಯಾನ…?
So the movies I act in are an invitation for rape!!! It’s mentality like yours that make Indian society regressive for women! If you hv a problem wt my movies then Don’t see them #nocountryforwomen https://t.co/I5XdN7zAA6
— Mallika Sherawat (@mallikasherawat) October 7, 2020