Actress Nayanthara : ಲೇಡಿ ಸೂಪರ್ ಸ್ಟಾರ್ ನಟಿ ನಯನತಾರಾ (Nayanthara) ಮತ್ತು ನಟ ಧನುಷ್ (Dhanush) ನಡುವಿನ ಕಾಪಿರೈಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಯನತಾರಾಗೆ ಮದ್ರಾಸ್ ಹೈಕೋರ್ಟ್ ನಲ್ಲಿ ಹಿನ್ನಡೆಯಾಗಿದೆ.
ಹೌದು, ಈ ಹಿಂದೆ ನೆಟ್‌ಫ್ಲಿಕ್ಸ್ ನಲ್ಲಿ ಪ್ರಸಾರವಾದ ನಯನತಾರಾ ಜೀವನದ ಕುರಿತ ಸಾಕ್ಷ್ಯಚಿತ್ರ ‘ನಯನತಾರಾ ಬಿಯಾಂಡ್ ದಿ ಫೇರಿ ಟೇಲ್’ ನಲ್ಲಿ ಧನುಷ್ ನಿರ್ಮಾಣದ ‘ನಾನುಮ್ ರೌಡಿ ದಾನ್’ ಚಿತ್ರದ ಕ್ಲಿಪ್ ಗಳನ್ನು ನಿರ್ಮಾಣ ಸಂಸ್ಥೆಯ ಅನುಮತಿ ಇಲ್ಲದೇ ಬಳಸಿಕೊಳ್ಳಲಾಗಿತ್ತು.ಇದರ ವಿರುದ್ಧ ನಟ ಧನುಷ್ ಕಾನೂನು ಸಮರ ಸಾರಿದ್ದರು. ಇದೀಗ ಪ್ರಕರಣದಲ್ಲಿ ನೆಟ್ ಫ್ಲಿಕ್ಸ್ ಸಂಸ್ಥೆ ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿದೆ.
ಇದನ್ನೂ ಓದಿ: Hanumantha Lamani | ಬಿಗ್ ಬಾಸ್ ನಲ್ಲಿ ಗೆದ್ದ ಹಣವನ್ನು ಯಾವ ಕೆಲಸಕ್ಕೆ ಬಳಸುತ್ತಾರಂತೆ ಗೊತ್ತಾ ಹನುಮಂತು?