ಕನ್ನಡದ ಕಿಸ್ ಮತ್ತು ಭರಾಟೆ ಚಿತ್ರದಲ್ಲಿ ನಟಿಸಿದ್ದ ಖ್ಯಾತ ನಟಿ ಶ್ರೀಲೀಲಾ ತಾಯಿ ಸ್ವರ್ಣಲತಾ ವಿರುದ್ಧ FIR ದಾಖಲಾಗಿದೆ. ಬೆಂಗಳೂರಿನ ಅಲಯನ್ಸ್ ಯೂನಿವರ್ಸಿಟಿ ಕಾಲೇಜಿನ ಆಡಳಿತ ಗದ್ದುಗೆಗಾಗಿ ಕೆಲ ವರ್ಷಗಳಿಂದ ಸಹೋದರರ ನಡುವೆ ಗಲಾಟೆ ನಡೆಯುತ್ತಿದ್ದು, ಸ್ವರ್ಣಲತಾ ಕೂಡಾ ಮಾರಾಕಾಸ್ತ್ರಗಳೊಂದಿಗೆ ಕಾಲೇಜಿಗೆ ನುಗ್ಗಿ ಗಲಾಟೆ ಮಾಡಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ನಟಿ ಶ್ರೀಲೀಲಾ ತಾಯಿ ಸ್ವರ್ಣಲತಾ ವಿರುದ್ಧ FIR ದಾಖಲಾಗಿದ್ದು, ಸ್ವರ್ಣಲತಾ ರಾಜ್ಯ ತೊರೆದು ಕೇರಳದಲ್ಲಿ ಅಡಗಿದ್ದಾರೆ ಎನ್ನಲಾಗಿದ್ದು, ಅವರು ಮೊಬೈಲ್ ಸ್ವಿಚ್ ಆಫ್ ಮಾಡಿ, ಮನೆಬಾಗಿಲು ಹಾಕಿ ತಲೆಮರೆಸಿಕೊಂಡಿದ್ದಾರೆ. ಹುಡುಕಾಟ ತೀವ್ರಗೊಂಡಿದೆ. ಸದ್ಯ ಈ ಪ್ರಕರಣ ಸಂಬಂಧ 7 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ಇದನ್ನು ಓದಿ: ಕನ್ನಡದ ಖ್ಯಾತ ನಟಿ ತಾಯಿಗೆ ಬಂಧನದ ಭೀತಿ!




