ಅರುಂಧತಿ, ಭಾಗಮತಿ, ಬಾಹುಬಲಿ ಅಂತಾ ಸೂಪರ್ ಡೂಪರ್ ಸಿನಿಮಾಗಳನ್ನ ಕೊಟ್ಟಿರುವ ಕನ್ನಡತಿ, ಬಹುಭಾಷಾ ನಟಿ ಅನುಷ್ಕಾ ಶೆಟ್ಟಿಗೆ ಕೊನೆಗೂ ಕಂಕಣ ಭಾಗ್ಯ ಕೂಡಿಬಂದಿದೆ. ಹೌದು, ಈ ಸ್ಟಾರ್ ನಟಿಯ ಮದುವೆ ಯಾವಾಗ ಮತ್ತು ಯಾರ ಜೊತೆಗೆ ಎನ್ನುವುದು ಬಹುವರ್ಷಗಳ ಪ್ರಶ್ನೆಯಾಗಿತ್ತು.
ಸದ್ಯ ನಟಿ ಅನುಷ್ಕಾ ಶೆಟ್ಟಿ ಮದುವೆ ವಿಚಾರ ಮತ್ತೆ ಮುನ್ನಲೆಗೆ ಬಂದಿದ್ದು, ಗುರುಹಿರಿಯರು ನಿಶ್ಚಯಿಸಿದ
ತೆಲಂಗಾಣದ ಉದ್ಯಮಿಯೊಬ್ಬರನ್ನು ಮದುವೆಯಾಗಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ. ಈ ಬಗ್ಗೆ ನಟಿ ಅನುಷ್ಕಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಆದರೆ,`ಬಾಹುಬಲಿ’ ನಟಿ ಅನುಷ್ಕಾ ಸದ್ಯದಲ್ಲೇ ಹಸೆಮಣೆ ಏರೋದು ಪಕ್ಕಾ ಎನ್ನಲಾಗುತ್ತಿದೆ. ತಮ್ಮ ಕುಟುಂಬ ನೋಡಿರುವ ವರನೊಂದಿಗೆ ಸ್ವೀಟಿ ಅನುಷ್ಕಾ ಸದ್ಯದಲ್ಲೇ ಹಸೆಮಣೆ ಏರಲಿದ್ದಾರೆ. ಈ ಕುರಿತ ಗುಡ್ ನ್ಯೂಸ್ ಸದ್ಯದಲ್ಲೇ ಅಧಿಕೃತವಾಗಿ ತಿಳಿಸಲಿದ್ದಾರೆ ಎನ್ನಲಾಗಿದೆ.
ಈ ಹಿಂದೆ ಟಾಲಿವುಡ್ ನಟ ಪ್ರಭಾಸ್ ಮತ್ತು ಅನುಷ್ಕಾ ಮದುವೆ ಅಗಲಿದ್ದಾರೆ ಎಂಬ ವದಂತಿ ಹಬ್ಬಿತ್ತು.