ಸ್ಟಾರ್ ಕ್ರಿಕೆಟಿಗ KL ರಾಹುಲ್ ಮತ್ತು ಬಾಲಿವುಡ್ ನಟ ಸುನಿಲ್ ಶೆಟ್ಟಿ ಅವರ ಮಗಳು ನಟಿ ಆಥಿಯಾ ಶೆಟ್ಟಿ ಮುಂದಿನ 3 ತಿಂಗಳೊಳಗೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನಲಾಗಿದೆ.
ಹೌದು, ತಮ್ಮ ಬಹುಕಾಲದ ಗೆಳತಿ ಆತಿಯಾ ಶೆಟ್ಟಿ ಜೊತೆ ಮದುವೆಗೆ ಸಜ್ಜಾಗಿದ್ದಾರೆ ಎನ್ನಲಾಗಿದ್ದು, ಇನ್ನು ಮೂರು ತಿಂಗಳೊಳಗಾಗಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ಧವಾಗಿದೆ ಎಂದು ಮೂಲಗಳು ತಿಳಿಸಿವೆ. ಅಥಿಯಾ ಮತ್ತು ರಾಹುಲ್ ಮುಂಬೈನಲ್ಲಿ ಏಳು ಅಂತಸ್ತುಗಳ ಮನೆ ಕೊಂಡುಕೊಂಡಿದ್ದಾರೆ. ಅಥಿಯಾ ಅವರೇ ಮದುವೆ ಸಿದ್ಧತೆಗಳನ್ನು ನಿರ್ವಹಿಸುತ್ತಿದ್ದಾರೆ.
ಇತ್ತೀಚೆಗೆ ಜರ್ಮನಿಯಲ್ಲಿ ರಾಹುಲ್ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಾಗಲೂ ಅಥಿಯಾ ಜೊತೆಗಿದ್ದರು. ಸದ್ಯ ರಾಹುಲ್ ಜರ್ಮನಿಯಲ್ಲಿದ್ದು, ಗಾಯದ ಸಮಸ್ಯೆಯಿಂದ ಗುಣಮುಖರಾದ ಬಳಿಕ ಭಾರತಕ್ಕೆ ಮರಳಲಿದ್ದಾರೆ. ಅವರು ಗುಣಮುಖರಾಗುವ ತನಕ ಆತಿಯಾ ಕೂಡಾ ಜರ್ಮನಿಯಲ್ಲೇ ಉಳಿಯಲಿದ್ದಾರೆ. ಸದ್ಯ ವಿರಾಮದಲ್ಲಿರುವ ರಾಹುಲ್ ಟಿ20 ವಿಶ್ವಕಪ್‌ಗೆ ಮುನ್ನ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನಲಾಗಿದೆ.