Bhairathi Ranagal: ಕತಾರ್ ಕನ್ನಡಿಗರಿಂದ “ಭೈರತಿ ರಣಗಲ್”ಗೆ  ಅಭೂತಪೂರ್ವ ಮೆಚ್ಚುಗೆ

ಕತಾರ್: ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ಅಭಿನಯದ ಬ್ಲಾಕ್ ಬಸ್ಟರ್ ಸಿನಿಮಾ ಭೈರತಿ ರಣಗಲ್ ರಿಲೀಸ್ ಆದ ಮೊದಲ ದಿನವೇ ಯಶಸ್ವಿ ಪ್ರದರ್ಶನ ಕಂಡು ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಕತಾರ್‌ನಲ್ಲಿ ನೆಲೆಸಿರುವ ಕನ್ನಡ…

ಕತಾರ್: ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ಅಭಿನಯದ ಬ್ಲಾಕ್ ಬಸ್ಟರ್ ಸಿನಿಮಾ ಭೈರತಿ ರಣಗಲ್ ರಿಲೀಸ್ ಆದ ಮೊದಲ ದಿನವೇ ಯಶಸ್ವಿ ಪ್ರದರ್ಶನ ಕಂಡು ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಕತಾರ್‌ನಲ್ಲಿ ನೆಲೆಸಿರುವ ಕನ್ನಡ ಚಿತ್ರಪ್ರೇಮಿಗಳು ಹಾಗೂ ಶಿವಣ್ಣನ ಅಭಿಮಾನಿಗಳು ಸೇರಿ ಕತಾರ್‌ನಲ್ಲಿ ಚಿತ್ರದ ಗ್ರಾಂಡ್ ಓಪನಿಂಗ್‌ಗೆ ಸಾಕ್ಷಿಯಾದರು.

ಈ ಸಂದರ್ಭದಲ್ಲಿ ,ಇಂಡಿಯನ್ ಕಲ್ಚರಲ್ ಸೆಂಟರ್ ನ ವೈಸ್ ಪ್ರೆಸಿಡೆಂಟ್ ಆದ ಸುಬ್ರಮಣ್ಯ ಹೆಬ್ಬಾಗಿಲು, ಐಸಿಬಿಫ್ ವೈಸ್ ಪ್ರೆಸಿಡೆಂಟ್ ನ ದೀಪಕ್ ಶೆಟ್ಟಿ, ಕರ್ನಾಟಕ ಸಂಘ ಕತಾರ್ ನ ಮಾಜಿ ಅಧ್ಯಕ್ಷರು ಆದ ಮಹೇಶ್ ಗೌಡ, ಪ್ರಸ್ತುತ KSQ ನ ಉಪಾಧ್ಯಕ್ಷರು ರಮೇಶ್ ಗೌಡ, 

ಮಾಜಿ ಉಪಾಧ್ಯಕ್ಷರು ಸಂದೀಪ್ ರೆಡ್ಡಿ, ಕತಾರ್‌ನ ಕನ್ನಡ ಸಿನಿಮಾ ಪ್ರಮೋಟರ್ ಪ್ರಭುರಾಜು ಜಗಳೂರು ಹಾಗೂ ಅವರ ತಂಡ ಮತ್ತು ಅಪಾರ ಕನ್ನಡ ಸಿನಿಮಾ ಪ್ರಿಯರು ಸೇರಿ ಒಟ್ಟಿಗೆ ಸೇರಿ ಭೈರತಿ ರಣಗಲ್ ವೀಕ್ಷಣೆ ಮಾಡಿ ಪ್ರೋತ್ಸಾಹಿಸಿ ಸಂಭ್ರಮಿಸಿದರು.

Vijayaprabha Mobile App free

ಸಿನಿಮಾ ಪೋಸ್ಟರ್‌ನ ಕೇಕ್ ಮಾಡಿಸಿ ಕಟ್ ಮಾಡುವ ಮೂಲಕ ಕತಾರ್‌ನಲ್ಲಿ ಸಿನಿಮಾ ಬಿಡುಗಡೆಗೆ ಚಾಲನೆ ಕೊಡಲಾಯಿತು. 200 ಸೆಂ.ಮೀ ಉದ್ದದ ಶಿವಣ್ಣನ ಕಟೌಟ್ ಜೊತೆಗೆ ಸಿನಿಮಾ ವೀಕ್ಷಿಸಲು ಬಂದ ಎಲ್ಲಾ ಅಭಿಮಾನಿಗಳು ಕಪ್ಪು ಬಣ್ಣದ ಉಡುಗೆ ಧರಿಸಿ ಫೋಟೋ ಕ್ಲಿಕಿಸಿದ್ದು ವಿಶೇಷ ಗಮನ ಸೆಳೆಯುತ್ತಿತ್ತು.

ಗಲ್ಫ್ ದೇಶಗಳಲ್ಲಿ ತೆರೆಕಂಡ ಮೊದಲ ದಿನವೇ ಕತಾರ್ ದೇಶದಲ್ಲಿ ಭೈರತಿ ರಣಗಲ್ ಚಿತ್ರಕ್ಕೆ ಅದ್ದೂರಿ ಓಪನಿಂಗ್ ಸಿಕ್ಕಿದೆ. ಅದ್ಭುತ ನಟನೆ, ಅಚ್ಚುಕಟ್ಟಾದ ನಿರ್ದೇಶನ ಮತ್ತು ಕಥೆಗೆ ಪೂರಕವಾದ ಪೋಷಕ ಪಾತ್ರಗಳು ಜೊತೆ ಬ್ಯಾಗ್ರೌಂಡ್ ಮ್ಯೂಸಿಕ್ ಚಿತ್ರದ ಹೈಲೈಟ್ಸ್ ಎಂದು ಮೆಚ್ಚುಗೆ ವ್ಯಕ್ತವಾಗಿದೆ.

ಕತಾರ್ ನಲ್ಲಿ ಭೈರತಿ ರಣಗಲ್ ವಿಜೃಂಭಣೆಯಿಂದ ತೆರೆಕಾಣಲು ಕಾರಣೀಭೂತರಾದ ಗಲ್ಫ್ ಕನ್ನಡ ಮೂವೀಸ್ ನ ಮುಖ್ಯಸ್ಥ ಸುಬ್ರಮಣ್ಯ ಹೆಬ್ಬಾಗಿಲು, ಕಳೆದ 12 ವರ್ಷಗಳಿಂದ ಹಗಲಿರುಳು ಶ್ರಮಿಸಿ ಕನ್ನಡ ಸಿನಿಮಾಗಳನ್ನು ಕತಾರ್‌ನಲ್ಲಿ ರಿಲೀಸ್ ಮಾಡಿಸಿ ಪ್ರೋತ್ಸಾಹಿಸುತ್ತಿದ್ದಾರೆ. ಹಾಗೂ ದರ್ಶನ ಸೋಮಶೇಖರ್, ಬೆಂಗಳೂರು, ದೀಪಕ್ ಸೋಮಶೇಖರ್, ದುಬೈ  ಇವರುಗಳು ಶ್ರಮವೂ ಗಮನಾರ್ಹ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.