ಶೀಘ್ರವೇ ಒಟಿಟಿಗೆ Bhairathi Ranagal; ಯಾವಾಗ ಗೊತ್ತಾ?

Bhairathi Ranagal : ನಟ ಹ್ಯಾಟ್ರಿಕ್ ಹೀರೊ ಶಿವರಾಜಕುಮಾ‌ರ್ ಅವರ ‘ಭೈರತಿ ರಣಗಲ್’ (Bhairati Ranagal) ಚಿತ್ರ ಸೂಪರ್ ಹಿಟ್ ಆಗಿದ್ದು, ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದೆ. ಕರ್ನಾಟಕದಲ್ಲಿ ಮಾತ್ರವಲ್ಲದೆ ತಮಿಳುನಾಡಿನಲ್ಲೂ ಶಿವಣ್ಣನ ಸಿನಿಮಾಗೆ ಉತ್ತಮ…

Bhairathi ranagal

Bhairathi Ranagal : ನಟ ಹ್ಯಾಟ್ರಿಕ್ ಹೀರೊ ಶಿವರಾಜಕುಮಾ‌ರ್ ಅವರ ‘ಭೈರತಿ ರಣಗಲ್’ (Bhairati Ranagal) ಚಿತ್ರ ಸೂಪರ್ ಹಿಟ್ ಆಗಿದ್ದು, ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದೆ.

ಕರ್ನಾಟಕದಲ್ಲಿ ಮಾತ್ರವಲ್ಲದೆ ತಮಿಳುನಾಡಿನಲ್ಲೂ ಶಿವಣ್ಣನ ಸಿನಿಮಾಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಇದೀಗ ಬಾಲಿವುಡ್ ನಿಂದಲೂ ಸಿನಿಮಾ ರೈಟ್ಸ್ ಖರೀದಿಗೆ ಬೇಡಿಕೆ ಹೆಚ್ಚಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: Telugu Lyricist: ಪ್ರಸಿದ್ಧ ಟಾಲಿವುಡ್‌ನ ಗೀತ ರಚನೆಕಾರ ಕುಲಶೇಖರ್ ನಿಧನ

Vijayaprabha Mobile App free

Bhairathi Ranagal ಸಿನಿಮಾದಲ್ಲಿ ದೊಡ್ಡ ತಾರಾಗಣ

Bhairathi ranagal

ನರ್ತನ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು, ನಿರ್ಮಾಪಕಿ ಗೀತಾ ಶಿವರಾಜಕುಮಾ‌ರ್ ಗೀತಾ ಪಿಕ್ಚರ್ಸ್ ಬ್ಯಾನ‌ರ್ ಅಡಿಯಲ್ಲಿ ಸಿನಿಮಾ ನಿರ್ಮಾಣ ಮಾಡಿದ್ದು, ರಾಹುಲ್‌ ಬೋಸ್, ರುಕ್ಕಿಣಿ ವಸಂತ್, ಛಾಯಾ ಸಿಂಗ್, ದೇವರಾಜ್, ವಸಿಷ್ಟ ಸಿಂಹ, ಮಧು ಗುರುಸ್ವಾಮಿ, ಶಬೀರ್ ಕಲ್ಲರಕ್ಕಲ್ ಮತ್ತು ಬಾಬು ಹಿರಣ್ಣಯ್ಯ ಸೇರಿದಂತೆ ಅನೇಕರು ಚಿತ್ರದಲ್ಲಿ ನಟಿಸಿದ್ದಾರೆ

Bhairathi Ranagal ಶೀಘ್ರವೇ ಒಟಿಟಿಗೆ

ಭೈರತಿ ರಣಗಲ್ ಸಿನಿಮಾ ಇನ್ನೂ ಚಿತ್ರಮಂದಿರದಲ್ಲಿ ಭರ್ಜರಿಯಾಗಿ ಓಡುತ್ತಿರುವಾಗಲೇ ಒಟಿಟಿ ಬಗ್ಗೆ ಸಾಕಷ್ಟು ಚರ್ಚೆಗಳು ಆಗುತ್ತಿದ್ದು, ಸಿನಿಮಾ ಬಿಡುಗಡೆಯಾಗಿ ತಿಂಗಳ ಬಳಿಕವೇ ಒಟಿಟಿಗೆ ಎಂಟ್ರಿ ಕೊಡುವುದು ಈಗಿನ ಟ್ರೆಂಡ್ ಆಗಿದೆ. ಆದರೆ ಭೈರತಿ ರಣಗಲ್‌ ಇಂದಿಗೂ ಚಿತ್ರಮಂದಿರದಲ್ಲಿ ಭರ್ಜರಿಯಾಗಿ ಓಡುತ್ತಿದೆ.

ಇದನ್ನೂ ಓದಿ: ದೀಪಾವಳಿಗೆ ಬಿಡುಗಡೆಯಾದ ಚಿತ್ರಗಳು ಈ ವಾರಾಂತ್ಯ OTTನಲ್ಲಿ!

ಜೀ-5 ಸಂಸ್ಥೆಯಿಂದ ಖರೀದಿ

ಮುಂದಿನ ವಾರ ತೆಲುಗು, ತಮಿಳಿಗ ಡಬ್ ಆಗಿ ಸಿನಿಮಾ ತೆರೆಗೆ ಬರಲಿದ್ದು, ಇನ್ನು 50 ದಿನ ಪೂರೈಸುವವರೆಗೆ ‘ಭೈರತಿ ರಣಗಲ್‌’ ಸಿನಿಮಾ ಓಟಿಟಿಗೆ ಬರುವುದಿಲ್ಲ ಎನ್ನಲಾಗುತ್ತದೆ. ಹಾಗಾಗಿ ಡಿಸೆಂಬರ್ ಕೊನೆ ಅಥವಾ ಜನವರಿ ಮೊದಲ ವಾರ ಓಟಿಟಿಗೆ ಬರಬಹುದು ಎಂದು ನಿರೀಕ್ಷಿಸಲಾಗುತ್ತಿದೆ. ಜೀ-5 ಸಂಸ್ಥೆ ಈ ಸಿನಿಮಾವನ್ನುಭಾರೀ ಮೊತ್ತಕ್ಕೆ ರೈಟ್ಸ್ ಕೊ೦ಡುಕೊ೦ಡಿದೆ.

ಸಾಕಷ್ಟು ನಿರೀಕ್ಷೆ

ದೊಡ್ಡ ದೊಡ್ಡ ಸಿನಿಮಾಗಳು 20 ದಿನಕ್ಕೆ ಓಟಿಟಿಗೆ ಬರುತ್ತಿವೆ. ಈ ವಾರ ಕನ್ನಡದ ‘ಮಾರ್ಟಿನ್’ ಹಾಗೂ ‘ಬಘೀರ’ ಸಿನಿಮಾಗಳು ಸ್ಮಾಲ್‌ ಸ್ಟೀನ್‌ಗೆ ಎಂಟ್ರಿ ಕೊಟ್ಟಿವೆ. ಶ್ರೀಮುರಳಿ ನಟನೆಯ ‘ಬಘೀರ’ ಸಿನಿಮಾ ಇಷ್ಟು ಬೇಗ ಓಟಿಟಿಗೆ ಬ೦ದಿದ್ದು ಅಚ್ಚರಿ ಮೂಡಿಸಿದೆ.

ಇದನ್ನೂ ಓದಿ: Rashmika Vijay: ರೆಸ್ಟೋರೆಂಟ್‌ನಲ್ಲಿ ರಶ್ಮಿಕಾ ವಿಜಯ್ ಜೋಡಿ: ಫೋಟೋ ನೋಡಿ ಕ್ಯೂಟ್ ಜೋಡಿ ಅಂದ್ರು ಫ್ಯಾನ್ಸ್!

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.