Pavithra Gowda : ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy murder case) ಜೈಲು ಸೇರಿದ್ದ ಎ1 ಆರೋಪಿ ಪವಿತ್ರ ಗೌಡ (Pavithra Gowda) ಇಂದು ಜೈಲಿನಿಂದ ರಿಲೀಸ್ ಆಗಿದ್ದಾರೆ.
ಹೌದು, 6 ತಿಂಗಳ ಹಿಂದೆ ಜೈಲು ಸೇರಿದ್ದ ಪವಿತ್ರಾ ಗೌಡ ಮತ್ತು ಇತರರಿಗೆ ಶುಕ್ರವಾರ ಹೈಕೋರ್ಟ್‌ನ ನ್ಯಾ ಎಸ್ ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯ ಪೀಠ ಜಾಮೀನು ಮಂಜೂರು ಮಾಡಿತ್ತು.
ಇದನ್ನೂ ಓದಿ: Darshan: ಬೇಲ್ ಮೇಲೆ ಹೊರಬಂದ ದರ್ಶನ್‌ಗೆ ಶಾಕ್ ನೀಡಲು ಪೊಲೀಸ್ ಇಲಾಖೆ ಸಜ್ಜು!
ಜಾಮೀನಿಗೆ ಸಂಬಂಧಿಸಿದ ಕೆಲಸಗಳು ಪೂರ್ಣಗೊಳ್ಳುವುದು ವಿಳಂಬ ಆದ ಕಾರಣ ಸೋಮವಾರ ಪವಿತ್ರಾ ಬಿಡುಗಡೆಯಾಗಿರಲಿಲ್ಲ. ಆದರೆ, ಬೇಲ್ ಸಿಕ್ಕ ಮೂರು ದಿನಗಳ ಬಳಿಕ ಪವಿತ್ರಾ ನಗುಮುಖದಿಂದಲೇ ಹೊರಬಂದಿದ್ದಾರೆ. ಪವಿತ್ರಾ ಗೌಡ ಜೊತೆ ಮತ್ತೊಬ್ಬ ಆರೋಪಿ ಪ್ರದೂಶ್ ಬಿಡುಗಡೆಯಾಗಿದ್ದಾನೆ.
ಪವಿತ್ರಾ ಗೌಡಗೆ ರೇಣುಕಾಸ್ವಾಮಿ ಅಶ್ಲೀಲ ಸಂದೇಶ ಕಳಿಸಿದ್ದನು ಎಂಬ ಕಾರಣಕ್ಕೆ ಆತನನ್ನು ಕೊಲೆಗೈದ ಆರೋಪ ನಟ ದರ್ಶನ್ ಸೇರಿ 17 ಮಂದಿ ಮೇಲಿದೆ.