BBK 11: ಲಾಯರ್ ಜಗದೀಶ್ ಮೇಲೆ ಜಗಳ ಮಾಡಿಕೊಂಡು ಬಿಗ್‌ಬಾಸ್‌ನಿಂದ ಹೊರಗೆ ಬಂದಿರುವ ಸ್ಪರ್ಧಿ ರಂಜಿತ್ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಬಿಗ್ಬಾಸ್ ಮನೆಯಲ್ಲಿ ಜಗದೀಶ್ ಮಾಡಿದ ಕುಕೃತ್ಯ ಬಿಚ್ಚಿಟ್ಟಿದ್ದಾರೆ.
ಹೌದು, ಈ ಕುರಿತು ಆರೋಪ ಮಾಡಿರುವ ರಂಜಿತ್, ಅವನ್ನು ಟಿ.ವಿಯಲ್ಲಿ ತೋರಿಸಲು, ಪ್ರಸಾರ ಮಾಡಲು ಆಗಲ್ಲ. ಹೆಣ್ಣು ಮಕ್ಕಳು ಸ್ನಾನ ಮಾಡಲು ಬಳಸುತ್ತಿದ್ದ ಬ್ರಶ್ ತೆಗೆದುಕೊಂಡು ಅದರಲ್ಲಿ ಟಾಯ್ಲೆಟ್ ಕ್ಲೀನ್ ಮಾಡುತ್ತಿದ್ದ, ಹಲ್ಲು ಉಜ್ಜುವ ಬ್ರಶ್ ತೆಗೆದುಕೊಂಡು ಟಾಯ್ಲೆಟ್ ತೊಳೆಯುತ್ತಿದ್ದ. ಸೊಂಟದ ಕೆಳಗಿನ ಭಾಷೆ ಬಳಸುತ್ತಿದ್ದ ಎಂದಿದ್ದಾರೆ.
ಇದನ್ನೂ ಓದಿ: BBK 11: ಮತ್ತೆ ಬಿಗ್‌ಬಾಸ್‌ಗೆ ಲಾಯರ್ ಜಗದೀಶ್ ಎಂಟ್ರಿ ಅಸಾಧ್ಯ
ಅಷ್ಟೇ ಅಲ್ಲ, ‘ಜಗದೀಶ್ ಎಂಟರ್ಟೈನರ್, ಹೀರೋ ಎಂದೆಲ್ಲ ಹೊರಗಿನ ಜನ ಹೇಳ್ತಾರೆ. ಪಾಪ ಅವರಿಗೆ ಗೊತ್ತಿಲ್ಲ. ಜಗದೀಶ್ ಯಾರ್ಯಾರ ಮೇಲೆ ಏನೇನು ಮಾತನಾಡಿದ್ದ ಎಂದು. ಅವನು ಮಾಡಿದ್ದನ್ನು ತೋರಿಸಿದರೆ ವಿಲನ್ ಆಗ್ತಾನೆ. ಬೇಕೆಂದೇ ಬಂದು ಟಾಸ್ಕ್‌ಗಳನ್ನು ಫೇಲ್ ಮಾಡುತ್ತಿದ್ದ ಎಂದು ಹೇಳಿದ್ದಾರೆ.
ಇನ್ನು,ಜಗದೀಶ್ ನನಗೆ ಸಿಗದೇ ಇರುವುದು, ನಿಮಗ್ಯಾರಿಗೂ ಸಿಗಬಾರದು ಎಂದು ಓಪನ್ ಆಗಿ ಹೇಳುತ್ತಿದ್ದ. ರಾತ್ರಿ ಇದ್ದಕ್ಕಿದ್ದಂತೆ ಎದ್ದು ಓಡಾಡುತ್ತಿದ್ದ. ಉದ್ದೇಶಪೂರ್ವಕವಾಗಿ ಇನ್ನೊಬ್ಬರಿಗೆ ತೊಂದರೆ ಕೊಡುತ್ತಿದ್ದ ಎಂದು ಲಾಯರ್ ಜಗದೀಶ್ ವಿರುದ್ಧ ರಂಜಿತ್ ಆರೋಪ ಮಾಡಿದ್ದಾರೆ.