Divorce | ಮುರಿದುಬಿದ್ದ AR ರೆಹಮಾನ್‌ ದಾಂಪತ್ಯ; ವಿಚ್ಛೇದನ ಘೋಷಿಸಿದ ಪತ್ನಿ!

AR Rahman wife Saira Banu divorce: ಆಸ್ಕರ್ ಪ್ರಶಸ್ತಿ ವಿಜೇತ, ಬಾಲಿವುಡ್ ಖ್ಯಾತ ಸಂಗೀತ ನಿರ್ದೇಶಕ ಎಆರ್ ರೆಹಮಾನ್ ದಾಂಪತ್ಯದಲ್ಲಿ ಬಿರುಕು ಮೂಡಿದ್ದು ಪತ್ನಿ ಸೈರಾ ಬಾನು ಪತಿಯಿಂದ ವಿಚ್ಛೇದನ (divorce) ಪಡೆದು…

AR Rahman wife Saira Banu divorce

AR Rahman wife Saira Banu divorce: ಆಸ್ಕರ್ ಪ್ರಶಸ್ತಿ ವಿಜೇತ, ಬಾಲಿವುಡ್ ಖ್ಯಾತ ಸಂಗೀತ ನಿರ್ದೇಶಕ ಎಆರ್ ರೆಹಮಾನ್ ದಾಂಪತ್ಯದಲ್ಲಿ ಬಿರುಕು ಮೂಡಿದ್ದು ಪತ್ನಿ ಸೈರಾ ಬಾನು ಪತಿಯಿಂದ ವಿಚ್ಛೇದನ (divorce) ಪಡೆದು ಬೇರ್ಪಡುವುದಾಗಿ ಘೋಷಿಸಿದ್ದಾರೆ.

ಹೌದು, ಸಂಗೀತ ಮಾಂತ್ರಿಕ, ಆಸ್ಕರ್ ವಿಜೇತ AR ರೆಹಮಾನ್ ಪತ್ನಿ ಸಾಯಿರಾ ಪತಿಯಿಂದ ಬೇರ್ಪಡುವುದಾಗಿ ಘೋಷಿಸಿದ್ದಾರೆ ಎಂದು ಸಾಯಿರಾ ಅವರ ವಕೀಲರು ತಿಳಿಸಿದ್ದಾರೆ. ಮದುವೆಯಾಗಿ 29 ವರ್ಷಗಳ ಬಳಿಕ, ಸೈರಾ ಬಾನು ತಮ್ಮ ಪತಿ ಎಆರ್ ರೆಹಮಾನ್‌ನಿಂದ ಬೇರ್ಪಡುವ ಕಠಿಣ ನಿರ್ಧಾರ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ: Actor Thandavaram | ಸಿನಿಮಾ ಅರ್ಧಕ್ಕೆ ನಿಂತಿದ್ದಕ್ಕೆ ನಿರ್ದೇಶನ ಮೇಲೆ ಫೈರ್ ಮಾಡಿದ ನಾಯಕ ನಟ ಅರೆಸ್ಟ್..!

Vijayaprabha Mobile App free

ಒತ್ತಡ, ತೊಂದರೆಗಳು ತಮ್ಮ ನಡುವೆ ಸರಿಪಡಿಸಲಾಗದ ಅಂತರ ಸೃಷ್ಟಿಸಿವೆ. ಈ ಸವಾಲಿನ ಸಮಯದಲ್ಲಿ ಗೌಪ್ಯತೆ ಮತ್ತು ನಿರ್ಧಾರ ಗೌರವಿಸಲು ಮನವಿ ಮಾಡುವುದಾಗಿ ಸೈರಾ ತಿಳಿಸಿದ್ದಾರೆ. ಈ ನೋವಿನ ಸಮಯದಲ್ಲಿ ‘ಜನರು ತಮ್ಮ ಖಾಸಗಿತನವನ್ನು ಗೌರವಿಸುವಂತೆ ಸೈರಾ ಬಾನು ಕೇಳಿಕೊಂಡಿದ್ದಾರೆ’ ಎಂದು ವಕೀಲರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

AR ರೆಹಮಾನ್ ಅವರು 1995ರಲ್ಲಿ ಸೈರಾ ಬಾನು ಅವರನ್ನು ವಿವಾಹವಾಗಿದ್ದರು. ಈ ದಂಪತಿಗೆ ಮೂವರು ಮಕ್ಕಳಿದ್ದಾರೆ.

ಇದನ್ನೂ ಓದಿ: Actress Siri Prahlad married | ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಸಿರಿ ಪ್ರಹ್ಲಾದ್

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.