ಚೆನ್ನೈ : ಬಾಲಿವುಡ್ ಸೂಪರ್ ಹಿಟ್ ಥ್ರಿಲ್ಲರ್ ‘ಅಂಧಾಧೂನ್’ ಚಿತ್ರದ ತಮಿಳು ರಿಮೇಕ್ನಲ್ಲಿ ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಬಚ್ಚನ್ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಬಾಲಿವುಡ್‌ನಲ್ಲಿ ನಟ ಆಯುಷ್ಮಾನ್ ಖುರಾನಾ ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಚಿತ್ರವನ್ನು ತಮಿಳು ಭಾಷೆಯಲ್ಲಿ ರಿಮೇಕ್ ಮಾಡಲಾಗುತ್ತಿದ್ದು, ತಮಿಳು ಪ್ರಶಾಂತ್ ಅವರ ತಂದೆ, ನಿರ್ಮಾಪಕ ತ್ಯಾಗರಾಜನ್ ಅವರು ಹೇಳಿದ್ದಾರೆ.
ಈ ರಿಮೇಕ್‌ನಲ್ಲಿ ಸಿನಿಮಾದಲ್ಲಿ ನಟ ಪ್ರಶಾಂತ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಅವರು ಬಹಿರಂಗಪಡಿಸಿದ್ದಾರೆ ಎನ್ನಲಾಗಿದೆ. ಬಾಲಿವುಡ್‌ನ ನಲ್ಲಿ ಸೂಪರ್ ಹಿಟ್ ಆಗಿದ್ದ ‘ಅಂಧಧೂನ್’ ಚಿತ್ರದಲ್ಲಿ ಖ್ಯಾತ ನಟಿ ತಬು ನಟಿಸಿದ್ದರು. ತಮಿಳು ರಿಮೇಕ್‌ನಲ್ಲಿ ನಟಿ ತಬು ಅವರ ಪಾತ್ರಕ್ಕಾಗಿ ಐಶ್ವರ್ಯಾ ರೈ ಅವರನ್ನು ಸಂಪರ್ಕಿಸಲಾಗಿದೆ ಎಂದು ನಿರ್ಮಾಪಕ ತ್ಯಾಗರಾಜನ್ ಅವರು ರಾಷ್ಟ್ರೀಯ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ ಎನ್ನಲಾಗಿದೆ.
ಈ ಚಿತ್ರದಲ್ಲಿ ತಬು ಪಾತ್ರಕ್ಕಾಗಿ ಖ್ಯಾತ ನಟಿ ಐಶ್ವರ್ಯಾ ರೈ ಅವರೊಂದಿಗೆ ಮಾತುಕತೆ ನಡೆಸಿರುವುದಾಗಿ ಹೇಳಿದ್ದು, ಆದರೆ ಇಲ್ಲಿಯವರೆಗೆ ಅವರಿಂದ ಯಾವುದೇ ಉತ್ತರ ಬಂದಿಲ್ಲ ಎನ್ನಲಾಗಿದೆ. ನಟಿ ಐಶ್ವರ್ಯ ರೈ ಅವರು ತಬು ಪಾತ್ರಕ್ಕೆ ಒಪ್ಪಿಕೊಂಡರೆ ಸುಮಾರು 22 ವರ್ಷಗಳ ನಂತರ ಪ್ರಶಾಂತ್ ಮತ್ತು ಐಶ್ವರ್ಯಾ ರೈ ಮತ್ತೆ ಒಟ್ಟಿಗೆ ನಟಿಸಿದಂತಾಗುತ್ತದೆ.
ತಮಿಳಿನ ಖ್ಯಾತ ನಿರ್ದೇಶಕ ಶಂಕರ್ ನಿರ್ದೇಶನದ 1998 ರಲ್ಲಿ ಬಿಡುಗಡೆಯಾದ ‘ಜೀನ್ಸ್’ ಚಿತ್ರದಲ್ಲಿ ನಟ ಪ್ರಶಾಂತ್ ಮತ್ತು ಐಶ್ವರ್ಯಾ ರೈ ಜೊತೆಯಾಗಿ ನಟಿಸಿದ್ದರು. ಈ ಚಿತ್ರ ಸೂಪರ್ ಹಿಟ್ ಆಗಿ ಹೊರಹೊಮ್ಮಿತು. ಇತ್ತೀಚೆಗೆ ತೆಲುಗಿನ ನಟ ರಾಮ್ ಚರಣ್ ಅಭಿನಯದ ‘ವಿನಯ ವಿಧೇಯ ರಾಮ’ ಚಿತ್ರದಲ್ಲಿ ನಟ ಪ್ರಶಾಂತ್ ಅವರು ರಾಮ್ ಚರಣ್ ಅಣ್ಣನ ಪಾತ್ರದಲ್ಲಿ ನಟಿಸಿದ್ದರು.
ಇನ್ನು ‘ಅಂಧಾಧೂನ್’ ಚಿತ್ರದ ತಮಿಳು ರಿಮೇಕ್‌ನಲ್ಲಿ ನಟ ಕಾರ್ತಿಕ್ ಮತ್ತು ಹಾಸ್ಯನಟ ಯೋಗಿ ಬಾಬು ಪ್ರಮುಖ ಪಾತ್ರದಲ್ಲಿ ನಟಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಇದನ್ನು ಓದಿ: ಖ್ಯಾತ ನಟಿ ಸೌಂದರ್ಯ ‘ಬಯೋಪಿಕ್’ ನಲ್ಲಿ ಪ್ರೇಮಂ, ಫಿದಾ ಖ್ಯಾತಿಯ ಸಾಯಿ ಪಲ್ಲವಿ..?