ಬೇಸಿಗೆಯಲ್ಲಿ:
* ಒಂದು ಟೀ ಚಮಚ ಅರಿಷಿಣ, ಅಷ್ಟೇ ಹಾಲಿನ ಕೆನೆ, ಅಷ್ಟೇ ಪ್ರಮಾಣದ ಶ್ರೀಗಂಧದ ಪುಡಿಯನ್ನು ಗುಲಾಬಿ ನೀರಿನಲ್ಲಿ ಚೆನ್ನಾಗಿ ಅರೆದು ಮೈಗೆಲ್ಲಾ ಲೇಪಿಸಿಕೊಳ್ಳಬೇಕು. ತಾಸೊತ್ತು ಕಳೆದ ಮೇಲೆ ಉಗುರು ಬೆಚ್ಚಗಿನ ನೀರಿನಿಂದ ಚೆನ್ನಾಗಿ ತೊಳೆಯಲು ಚರ್ಮ ಕಾಂತಿಯುಕ್ತವಾಗುತ್ತದೆ.
* ರಕ್ತಚಂದನ, ಮಂಜಿಷ್ಟ, ಕುಷ್ಠ ಲೋದ್ರ ಪ್ರಿಯಂಗು, ಆಲದ ಮರದ ಚಿಗುರು ಚೆನ್ನಾಗಿ ನೆನೆಸಿದ ಹೆಸರು ಬೇಳೆ, ಇದೆಲ್ಲವನ್ನೂ ಸಮಭಾಗದಲ್ಲಿ ತೆಗೆದುಕೊಂಡು ಮೇಲೆ ಹೇಳಿದ ವಸ್ತುಗಳನ್ನು ಒಣಗಿಸಿ ಚೆನ್ನಾಗಿ ಪುಡಿಮಾಡಿ ಒಂದು ಚಮಚ ಪುಡಿಗೆ ಒಂದು ಚಮಚ ಹೆಸರುಬೇಳೆ ಸೇರಿಸಿ ಚೆನ್ನಾಗಿ ಅರೆದು ರಾತ್ರಿ ಮುಖಕ್ಕೆ ಹಚ್ಚಿಕೊಳ್ಳಬೇಕು. ಇದು ಸಂಪೂರ್ಣ ಒಣಗಿದ ಮೇಲೆ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ ಹಾಗೇ ಮೃದುವಾದ ಟಾವೆಲ್‌ನಿಂದ ಒತ್ತಿರಿ.
ಛಳಿಗಾಲದಲ್ಲಿ :
* ಮುಳ್ಳುಗೀರ ಅಥವಾ ರಾಜಗೀರ ಸೊಪ್ಪಿಗೆ ಅರಿಷಿಣವನ್ನು ಸೇರಿಸಿ ಚೆನ್ನಾಗಿ ಮುಖಕ್ಕೆ ಲೇಪಿಸಿಕೊಂಡು ಒಂದು ತಾಸು ಕಳೆದ ನಂತರ ಬೆಚ್ಚಗಿನ ನೀರಿನಿಂದ ತೊಳೆಯಿರಿ.
* ಚನ್ನಾಗಿ ಮಾಗಿದ ಒಂದು ಪಚ್ಚಬಾಳೇಹಣ್ಣನ್ನು ತೆಗೆದುಕೊಂಡು ಅದಕ್ಕೆ 1 ಚಮಚ ಗುಲಾಬಿ ನೀರು, 1 ಚಮಚ ಗ್ಲಿಸರಿನ್‌ನ್ನು ಕೂಡಿಸಿ ಚನ್ನಾಗಿ ಬೆರೆಸಿ ರಾತ್ರಿ ಮಲಗುವ ಮುನ್ನ ಕೈಕಾಲುಗಳಿಗೆ ಚೆನ್ನಾಗಿ ಲೇಪಿಸಿಕೊಂಡು ತಾಸು ಕಳೆದು ಬೆಚ್ಚಗಿನ ನೀರಿನಿಂದ ತೊಳೆಯುವುದರಿಂದ ದೇಹದ ಚರ್ಮ ಕೋಮಲವಾಗಿ ಹೊಳಪಾಗುತ್ತದೆ.
* ಎಳೆನೀರಿನಲ್ಲಿ ಅಳಲೇಕಾಯಿ, ಬೆಟ್ಟದ ನೆಲ್ಲಿಕಾಯಿ, ಲೋದ್ರ ಹಾಗೂ ಮಂಜಿಷ್ಟ ವನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಅರೆಯಬೇಕು. ಅದನ್ನು ದೇಹಕ್ಕೆ ಲೇಪಿಸಿಕೊಂಡು ಒಣಗಿದ ಮೇಲೆ ಬಿಸಿ ನೀರಿನಿಂದ ತೊಳೆಯಲು ಮುಖ, ಮೈ ಕೈ ಗಳ ಚರ್ಮ ಕೋಮಲವಾಗಿ ಕಾಂತಿಯುಕ್ತವಾಗುತ್ತದೆ.
* ಈ ಮೇಲೆ ತಿಳಿಸಿದ ಸೌಂದರ್ಯೋಪಕರಣಗಳನ್ನು ಆಯಾ ಕಾಲಮಾನಕ್ಕೆ ತಕ್ಕಂತೆ ಬಳಸಬೇಕು. ಛಳಿಗಾಲದಲ್ಲಿ ವಿಶೇಷವಾಗಿ ಬಿಸಿ ನೀರು ಸ್ನಾನಕ್ಕೆ ಹಾಗೂ ಕೈಕಾಲು ಮುಖ ತೊಳೆಯಲು ಯೋಗ್ಯ ವೆನಿಸುತ್ತದೆ.




