ದಕ್ಷಿಣ ಭಾರತದ ನಟಿ ಸಮಂತಾ ಮತ್ತು ನಾಗ ಚೈತನ್ಯ ಹಲವು ವರ್ಷಗಳ ಕಾಲ ಪ್ರೀತಿಸಿ ಮದುವೆ ಆಗಿದ್ದು, 2021ರಲ್ಲಿ ಈ ಜೋಡಿ ದೂರವಾಗಿತ್ತು. 2017ರಲ್ಲಿ ಸಪ್ತಪದಿ ತುಳಿದಿದ್ದ ತೆಲುಗು ನಟ ನಾಗ ಚೈತನ್ಯ ಮತ್ತು ನಟಿ ಸಮಂತಾ ರುತ್ ಪ್ರಭು ಅವರು ಕಳೆದ ವರ್ಷ ವಿಚ್ಛೇದನ ಪಡೆದುಕೊಂಡು, ಇಬ್ಬರು ಪರಸ್ಪರ ಒಪ್ಪಿಗೆ ಮೇರೆಗೆ ದೂರವಾಗಿದ್ದರು.
ಇನ್ನು, ಈ ಡಿವೋರ್ಸ್ ಬಗ್ಗೆ ಸಾಕಷ್ಟು ಅಂತೆ ಕಂತೆಗಳು ಹುಟ್ಟಿಕೊಂಡಿದ್ದು, ಲೆಕ್ಕವಿಲ್ಲದಷ್ಟು ವದಂತಿಗಳು ಕೇಳಿಬಂದವು. ಈಗ ನಟಿ ಸಮಂತ ತನ್ನ ಮಾಜಿ ಪತಿ ನಾಗ ಚೈತನ್ಯ ಅವರೊಂದಿಗೆ ಬೇರ್ಪಡುವ ಮೊದಲು ವಾಸಿಸುತ್ತಿದ್ದ ಅದೇ ಮನೆಯನ್ನು ಖರೀದಿಸಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ‘ದಿ ಫ್ಯಾಮಿಲಿ ಮ್ಯಾನ್ 2’ ಮನೆಯ ಮಾಲೀಕರಿಗೆ ಹೆಚ್ಚುವರಿ ಮೊತ್ತವನ್ನು ಕೊಟ್ಟು ಖರೀದಿಸಿದ್ದಾರೆ ಎಂದು ಮಾತು ಕೇಳಿ ಬರುತ್ತಿವೆ.
ನಟಿ ಸಮಂತಾ ಈ ನಡೆಯನ್ನು ಅಭಿಮಾನಿಗಳು ಶ್ಲಾಘಿಸುತ್ತಿದ್ದರೆ, ತೆಲುಗು ಹಿರಿಯ ನಟ ಮುರಳಿ ಮೋಹನ್ ಅವರ ವೀಡಿಯೊ ವೈರಲ್ ಆಗುತ್ತಿದೆ. ಮುರಳಿ ಮೋಹನ್ ಅವರು ಮದುವೆಯ ಸಮಯದಲ್ಲಿ ತನ್ನ ಮಾಜಿ ಪತಿಯೊಂದಿಗೆ ವಾಸಿಸುತ್ತಿದ್ದ ಅದೇ ಮನೆಯನ್ನು ಸಮಂತಾ ಖರೀದಿಸಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ. ಆ ಮನೆಯ ವೆಚ್ಚ ಸುಮಾರು 100 ಕೋಟಿ ಆಗಿದ್ದು, ಸಮಂತಾ ಅದನ್ನು ತನಗಾಗಿಯೇ ಖರೀದಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.