ಸುರತ್ಕಲ್ ನಲ್ಲಿ ನಡೆದ ಫಾಜಿಲ್ ಕೊಲೆ ಪ್ರಕರಣ ಕೋಮು ದ್ವೇಷದಿಂದಲ್ಲ ಬದಲಿಗೆ ಪ್ರೀತಿ-ಪ್ರೇಮ ವಿಚಾರದಲ್ಲಿ ಉಂಟಾದ ಸಂಘರ್ಷದ ಕೊಲೆ ಎಂಬ ವಿಚಾರ ಸದ್ಯ ಚರ್ಚೆಯಾಗುತ್ತಿದೆ.
ಹೌದು, ನಗರದ ಹೊರವಲಯದ ಸುರತ್ಕಲ್ ನಲ್ಲಿ ಫಾಜಿಲ್ ಎಂಬ ಯುವಕನನ್ನು ತಡರಾತ್ರಿ ದುಷ್ಕರ್ಮಿಗಳು ಬರ್ಬವಾಗಿ ಹತ್ಯೆ ಮಾಡಿದ್ದರು. ಆದರೆ, ಇದು ಪ್ರವೀಣ್ ನೆಟ್ಟಾರು ಹತ್ಯೆ ಬೆನ್ನಲ್ಲೇ ಫಾಜಿಲ್ ಕೊಲೆ ನಡೆದ ಕಾರಣ ಇದೊಂದು ಪ್ರತೀಕಾರದ ಕೊಲೆ ಎಂದೇ ಬಿಂಬಿತವಾಗುತ್ತಿದೆ.
ಆದ್ರೆ ಈ ನಡುವೆ ಇದು ಹುಡುಗಿ ವಿಚಾರವಾಗಿ ನಡೆದಿರುವ ಹತ್ಯೆ ಅಂತಲೂ ಮಾತುಗಳು ಕೇಳಿಬರುತ್ತಿದ್ದು, ಕೊಲೆಗೆ ಯಾವುದೇ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಇನ್ನು, ಈ ಘಟನೆ ಸಂಬಂಧ ಯಾರೊಬ್ಬರ ಬಂಧನವಾಗಿಲ್ಲ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.