ಹೈದರಾಬಾದ್: ಗ್ಲಾಮರಸ್ ಪಾತ್ರಗಳಿಂದಲೇ ಗಮನಸೆಳೆದಿದ್ದ ಹಾಟ್ ನಟಿ ನಮಿತಾ 2002ರಲ್ಲಿ ತೆಲುಗು ಚಿತ್ರರಂಗದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು.
ನಟಿ ನಮಿತಾ 2017 ರಲ್ಲಿ ವೀರೇಂದ್ರ ಚೌದರಿ ಎಂಬುವರನ್ನು ಮದುವೆಯಾಗಿ ಚಿತ್ರರಂಗದಿಂದ ದೂರ ಉಳಿದಿದ್ದರು. ಈಗ ಮತ್ತೆ ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದೂ, ತೆಲಗು ಸಿನಿಮಾದಲ್ಲಿ ಎಂಎಲ್ಎ ಪಾತ್ರ ನಿರ್ವಹಿಸಲಿದ್ದಾರೆ.
ಹೌದು ನಮಿತಾರನ್ನು ಎಂಎಲ್ಎ ಪಾತ್ರಕ್ಕೆ ಆಯ್ಕೆ ಮಾಡಲಾಗಿದ್ದು, 2010 ತೆರೆಕಂಡ ಬೋಯಾಪಾಟಿ ಸೀನು ನಿರ್ದೇಶನದ ಸಿಂಹ ಚಿತ್ರದಲ್ಲಿ ನಟ ಸಿಂಹ ಬಾಲಕೃಷ್ಣ ಅವರ ಜೊತೆಗೆ ನಮಿತಾ ನಟಿಸಿದ್ದರು.ಆ ಸಿನಿಮಾ ದೊಡ್ಡ ಹಿಟ್ ಕೂಡ ಆಗಿತ್ತು.
ಈಗ ಮತ್ತೊಮ್ಮೆ ನಟಿ ನಮಿತಾ ಅವರು ಬಾಲಕೃಷ್ಣ ಅವರ ಜೊತೆ ನಟಿಸುವ ಅವಕಾಶ ದೊರೆತಿದ್ದು, ಸಿಂಹ ಚಿತ್ರದ ನಂತರ ಮತ್ತೆ ಈ ಜೋಡಿ ಒಂದಾಗಲಿದೆ. ಇನ್ನು ಈ ಚಿತ್ರದಲ್ಲಿ ನಟಿ ಪ್ರಗ್ಯಾ ಜೆಸ್ವಾಲ್ ಸಹ ನಟಿಸಲಿದ್ದಾರೆ.
ಕನ್ನಡ ಚಿತ್ರರಂಗಕ್ಕೆ ಸಹ ಪರಿಚಿತರಾಗಿರುವ ನಟಿ ನಮಿತಾ ಅವರು ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ನೀಲಕಂಠ ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಪ್ರವೇಶ ಮಾಡಿದ್ದರು, ನಂತರ ದರ್ಶನ್ ಅಭಿನಯದ ಇಂದ್ರ, ಹೂ, ಹಾಗು ಬೆಂಕಿ ಬಿರುಗಾಳಿ ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ಸಹ ಮಿಂಚಿದ್ದರು.