ಪಡ್ಡೆ ಹುಡುಗರ ಹಾಟ್ ಫೇವರಿಟ್ ಬಾಲಿವುಡ್ ನಟಿ ಮಲೈಕಾ ಅರೋರಾ (Malaika arora) ಹಾಗೂ ಸಲ್ಮಾನ್ ಖಾನ್ ಸಹೋದರ, ಅರ್ಬಾಜ್ ಖಾನ್ (Arbaaz Khan)ಅವರನ್ನು ಮದುವೆಯಾಗಿದ್ದರು. ಇಬ್ಬರು ವಿಚ್ಛೇದನ ಪಡೆದು ಅನೇಕ ವರ್ಷಗಳೇ ಆಗಿವೆ.
ಆದರೂ ಅವರ ವಿಚ್ಛೇದನ ಸುದ್ದಿ ಆಗಾಗ ಸದ್ದು ಮಾಡುತ್ತಲೆ ಇರುತ್ತದೆ. ಅರ್ಬಾಜ್ ಖಾನ್ ಅವರನ್ನು ಮದುವೆಯಾಗಿದ್ದ ನಟಿ ಮಲೈಕಾ 18 ವರ್ಷಗಳ ಕಾಲ ಜೊತೆಯಲ್ಲಿ ಸಂಸಾರ ನಡೆಸಿ, 2017ರಲ್ಲಿ ವಿಚ್ಛೇದನ ಪಡೆದು ಇಬ್ಬರೂ ಬೇರೆ ಬೇರೆಯಾಗುವ ಮೂಲಕ ಶಾಕ್ ನೀಡಿದರು.
ಇದನ್ನು ಓದಿ: ಖ್ಯಾತ ನಟಿ ಪವಿತ್ರಾ ಲೋಕೇಶ್ ಎಷ್ಟು ಮದುವೆಯಾಗಿದ್ದಾರೆ? 1500 ಕೋಟಿ ಆಸ್ತಿ ಕಬಳಿಸಲು ಈ ಮದುವೆಯಾದ್ರಾ ಪವಿತ್ರಾ..!
ಆದರೆ, ವಿಚ್ಛೇದನದ ಬಳಿಕ ಎದುರುಸಿದ ಸಮಸ್ಯೆಗಳ ಬಗ್ಗೆ ನಟಿ ಮಲೈಕಾ ಆರೋರ ಇತ್ತೀಚಿಗಷ್ಟೆ ಸಂದರ್ಶನವೊಂದರಲ್ಲಿ ಬಹಿರಂಗ ಪಡಿಸಿದ್ದು, ನಟ ಅರ್ಬಾಜ್ ಖಾನ್ ಅವರಿಂದ ದೂರ ಆದ ಬಳಿಕ ಖಾನ್ ಸರ್‌ನೇಮ್ ನಿಂದ ಎಷ್ಟು ಸಮಸ್ಯೆ ಎದುರಿಸಿದರು ಎನ್ನುವುದನ್ನು ಬಹಿರಂಗ ಪಡಿಸಿದ್ದಾರೆ.
ತನ್ನ ಹೆಸರಿನಲ್ಲಿದ್ದ ಖಾನ್ ಸರ್‌ನೇಮ್ ತೆಗೆದುಹಾಕದಂತೆ ಅನೇಕ ಜನರಿಂದ ಬೆದರಿಕೆ ಕೂಡ ಬಂದಿತ್ತು. ನಿಮ್ಮ ಹೆಸರಿನಲ್ಲಿರುವ ಖಾನ್ ಎಂಬ ಹೆಸರಿಗೆ ತೂಕವಿದ್ದು ಅದನ್ನು ತೆಗೆಯಬಾರದು, ತೆಗೆದು ದೊಡ್ಡ ತಪ್ಪು ಮಾಡುತ್ತಿದ್ದೀಯ ಎಂದು ಅನೇಕ ಜನರು ಹೇಳಿದ್ದರು ಎಂದು ಸಂದರ್ಶನದಲ್ಲಿ ಮಾತನಾಡಿದ ಮಲೈಕಾ ಖಾನ್ ಸರ್ ತೆಗೆದು ಹಾಕಿದ ಬಗ್ಗೆ ಹಂಚಿಕೊಂಡಿದ್ದಾರೆ.
ಇದನ್ನು ಓದಿ: ಎರಡೇ ದಿನದಲ್ಲಿ 100 ಕೋಟಿ ಕ್ಲಬ್ ಸೇರಿದ ಕಬ್ಜ ಸಿನಿಮಾ, ಹಳೇ ದಾಖಲೆಗಳು ಧೂಳಿಪಟ
ಇನ್ನು, ಅರ್ಬಾಜ್ ಖಾನ್ ಕುಟುಂಬದ ಬಗ್ಗೆ ಪ್ರೀತಿಯಿಂದ ಮಾತನಾಡಿದ ಮಲೈಕಾ, ಅರ್ಬಾಜ್ ತಾಯಿಯನ್ನು ತುಂಬಾ ಗೌರವಿಸುತ್ತೇನೆ. ಅವರು ನನಗೆ ತುಂಬಾ ಪ್ರೀತಿ ನೀಡಿದ್ದಾರೆ ಎಂದಿದ್ದಾರೆ. ಮಗ ಇರುವುದರಿಂದ ತಾನು ಕೂಡ ಆ ಕುಟುಂಬದ ಭಾಗವಾಗಿದ್ದೀನಿ ಎಂದು ಹೇಳಿಕೊಂಡಿದ್ದಾರೆ.
ಇದನ್ನು ಓದಿ: ಮಾರ್ಚ್ 31 ಡೆಡ್ ಲೈನ್: SMS ಮೂಲಕ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಲಿಂಕ್ ಮಾಡುವುದು ಹೇಗೆ?