ಬಾಲ್ಯದಲ್ಲಿ ಅಂದರೆ ಕೇವಲ 8 ವರ್ಷ ವಯಸ್ಸಿನಲ್ಲಿ ತಂದೆಯಿಂದಲೇ ಲೈಂಗಿಕ ದೌರ್ಜನ್ಯಕ್ಕೀಡಾಗಿದ್ದೆ ಎಂದು ಖ್ಯಾತ ನಟಿ, ರಾಜಕಾರಣಿ ಖುಷ್ಬು ಸುಂದರ್ ಆಘಾತಕಾರಿ ಹೇಳಿಕೆ ನೀಡಿದ್ದಾರೆ.
ಹೌದು, ಎಂಟು ವರ್ಷ ಇದ್ದಾಗಲೇ ನನ್ನ ತಂದೆ ಲೈಂಗಿಕ ದೌರ್ಜನ್ಯ ಎಸಗಿದ್ದರು. ಆಗ ನನಗೇನೂ ತಿಳಿಯುತ್ತಿರಲಿಲ್ಲ. ನನಗೆ 15 ವರ್ಷ ತುಂಬಿದ ಬಳಿಕವೇ ತಂದೆಯ ವಿರುದ್ಧ ಮಾತನಾಡಲು ಧೈರ್ಯ ಬಂತು. ನನ್ನ ತಾಯಿಯ ಮೇಲೆಯೂ ತಂದೆ ದೌರ್ಜನ್ಯ ಎಸಗುತ್ತಿದ್ದರು. ನನ್ನ ಪತಿಯೇ ದೈವ ಎಂಬುದಾಗಿ ನನ್ನ ತಾಯಿ ತಿಳಿದುಕೊಂಡಿದ್ದರು. ಅವರ ಸುತ್ತಲೂ ಅಂಥಹ ವಾತಾವರಣ ಇತ್ತು ಎಂದಿದ್ದಾರೆ.
ಇನ್ನು, ಮಗುವಿನ ಮೇಲೆ ದೌರ್ಜನ್ಯ ಆದರೆ ಆ ಗಾಯ ಜೀವನ ಪರ್ಯಂತ ಹಾಗೆಯೇ ಇರುತ್ತದೆ. ನನ್ನ ತಾಯಿ ಸಾಕಷ್ಟು ನಿಂದನೆಗೆ ಒಳಗಾಗುತ್ತಿದ್ದರು. ಏಕೈಕ ಮಗಳಿಗೆ ಲೈಂಗಿಕ ಕಿರುಕುಳ ನೀಡುವುದು ಜನ್ಮಸಿದ್ಧ ಹಕ್ಕು ಎಂದು ಆ ವ್ಯಕ್ತಿ (ತಂದೆ) ಭಾವಿಸಿದ್ದ ಎಂದು ಹೇಳಿದ್ದಾರೆ.
ಖ್ಯಾತ ನಟಿ, ರಾಜಕಾರಣಿಯಾಗಿರುವ ಖುಷ್ಬು ಸುಂದರ್ ಅವರು ಕನ್ನಡದ ನಟ ರವೀಂದ್ರನ್ ಅಭಿನಯದ ರಣಧೀರ, ಯುಗಪುರುಷ, ವಿಷ್ಣುವರ್ಧನ್ ಅಭಿನಯದ ಜೀವನದಿ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ.