200 ಕೋಟಿ ರೂಗಿಂತಲೂ ಅಧಿಕ ಹಣಕಾಸು ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಪಾಲಾಗಿರುವ ವಂಚಕ ಸುಕೇಶ್ ಚಂದ್ರಶೇಖರ್ ಪ್ರಕರಣದಲ್ಲಿ ನಟಿ, ಡ್ಯಾನ್ಸರ್ ನೋರಾ ಫತೇಹಿ ಅವರನ್ನು ದೆಹಲಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಹೌದು, ಕರ್ನಾಟಕ ಮೂಲದ ಸುಕೇಶ್ 200 ಕೋಟಿ ರೂ.ಗಳಿಗೂ ಹೆಚ್ಚಿನ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಬಂಧಿಸಲ್ಪಟ್ಟಿದ್ದಾರೆ. ದೆಹಲಿ ಪೊಲೀಸರ ಆರ್ಥಿಕ ಅಪರಾಧ ವಿಭಾಗ ನಟಿಯನ್ನು ವಿಚಾರಣೆ ಮಾಡಿಕೊಂಡಿದೆ.
ಸುಕೇಶ್ ಜೊತೆ ನಟಿಯರಾದ ಜಾಕ್ವೆಲಿನ್ ಫರ್ನಾಂಡೀಸ್ ಮತ್ತು ನೋರಾ ಫತೇಹಿ ಸಂಪರ್ಕ ಹೊಂದಿರುವ ಬಗ್ಗೆ ವರದಿಯಾಗಿದ್ದವು. ವಿಚಾರಣೆಯ ವೇಳೆ ನೋರಾಗೆ ದುಬಾರಿ ಗಿಫ್ಟ್ ನೀಡಿರುವುದಾಗಿ ಸುಕೇಶ್ ಒಪ್ಪಿಕೊಂಡಿದ್ದ. ಈ ಹಿಂದೆಯೂ ಇಡಿ ಅಧಿಕಾರಿಗಳು ನೋರಾ ವಿಚಾರಣೆ ನಡೆಸಿದ್ದರು.