ನನ್ನ ಡೈರಿಯಲ್ಲಿ ಆ ಪದವೇ ಇಲ್ಲ; ಮದುವೆ ಬಗ್ಗೆ ಬಿಂದಾಸ್ ಬೆಡಗಿ ಹನ್ಸಿಕಾ ಪ್ರತಿಕ್ರಿಯೆ

Hansika Motwani vijayaprabha Hansika Motwani vijayaprabha

ಚೆನ್ನೈ : ಅವಕಾಶಗಳು ಬರುತ್ತಿರುವಾಗ ಸಾಲು ಸಾಲು ಸಿನಿಮಾಗಳನ್ನು ಮಾಡಬೇಕು. ಕೆರಿಯರ್ ಡೌನ್ ಆಗುತ್ತಿರುವ ಸಮಯದಲ್ಲಿ ಒಳ್ಳೆಯ ಹುಡುಗ ನೋಡಿ ಮದುವೆಯಾಗಿ ಸೆಟ್ಲ್ ಆಗಬೇಕು. ಪ್ರಸ್ತುತ ಎಲ್ಲಾ ನಟಿಯರು ಅನುಸರಿಸುತ್ತಿರುವ ಪ್ರವೃತ್ತಿ ಇದು. ಆದರೆ, ತಾನು ಮಾತ್ರ ಈ ಪ್ರವೃತ್ತಿಯನ್ನು ಅನುಸರಿಸುತ್ತಿಲ್ಲ ಎಂದು ಬಿಂದಾಸ್ ಬೆಡಗಿ ನಟಿ ಹನ್ಸಿಕಾ ಮೋಟ್ವಾನಿ ಹೇಳುತ್ತಾರೆ.

ಕನ್ನಡದಲ್ಲಿ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆ ಬಿಂದಾಸ್ ಸಿನಿಮಾದಲ್ಲಿ ನಟಿಸಿದ್ದ ನಟಿ ಹನ್ಸಿಕಾ ಮೋಟ್ವಾನಿ ತೆಲುಗು, ತೆಲುಗು ಹಾಗು ಮಲಯಾಳಂ ನಲ್ಲಿ ಸಾಲು ಸಾಲು ಯಶಸ್ವಿ ಸಿನಿಮಾಗಳಲ್ಲಿ ನಟಿಸಿ ಧಕ್ಷಿಣ ಭಾರತ ಸಿನಿಮಾ ರಂಗದ ಅಗ್ರ ಶ್ರೇಯಾಂಕಿತ ನಾಯಕಿಯರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದರು.

ಆದರೆ, ಇತ್ತೀಚಿನ ದಿನಗಳಲ್ಲಿ ಹನ್ಸಿಕಾ ಅವರ ಸಿನಿಮಾ ವೃತ್ತಿಜೀವನ ಡೌನ್ ಆಗಿದ್ದು, ಹೊಸ ನಟಿಯರ ಆಗಮನದೊಂದಿಗೆ ಅವರಿಗೆ ಆಫ಼ರ್ ಗಳು ಕಡಿಮೆಯಾಗಿವೆ ಎನ್ನಲಾಗಿದೆ. ಇದರೊಂದಿಗೆ ಹನ್ಸಿಕಾ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಈ ಸುದ್ದಿಯಿಂದ ನೊಂದ ಹನ್ಸಿಕಾ, ತನಗೆ ಈಗಲೇ ಮದುವೆಯಾಗುವ ಯಾವುದೇ ಆಲೋಚನೆ ಇಲ್ಲ ಎಂದು ಹೇಳಿದ್ದಾರೆ.

Advertisement

‘ನನ್ನ ಡೈರಿಯಲ್ಲಿ ಮದುವೆ ಎಂಬ ಪದಕ್ಕೆ ಈಗಲೇ ಸ್ಥಾನವಿಲ್ಲ. ನನ್ನ ಸಿನಿಮಾ ಕೆರಿಯರ್ ಸ್ಲೋ ಆದರೆ, ಬೇಗ ಮದುವೆಯಾಗಬೇಕೇ? ‘ ಎಂದು ನಟಿ ಹನ್ಸಿಕಾ ಮೋಟ್ವಾನಿ ಪ್ರಶ್ನಿಸಿದ್ದಾರೆ. ಇತ್ತೀಚಿನ ಹೇಳಿಕೆಯಿಂದ ನಟಿ ಹನ್ಸಿಕಾಗೆ ಈಗಲೇ ಮದುವೆಯಾಗುವ ಆಲೋಚನೆ ಇಲ್ಲ ಎಂದು ತೋರುತ್ತದೆ. ಈ ಹಿಂದೆ ಸ್ವಲ್ಪ ದಪ್ಪ ಇದ್ದ ಹನ್ಸಿಕಾ, ಲಾಕ್‌ಡೌನ್ ಸಮಯದಲ್ಲಿ ವರ್ಕೌಟ್ ಮಾಡಿ ಸ್ಲಿಮ್ ಆಗಿ ತೆಳ್ಳಗೆ ಕಾಣಿಸುತ್ತಿದ್ದಾಳೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment

Leave a Reply

Your email address will not be published. Required fields are marked *

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement