Pushpa-2 : ತೆಲುಗಿನ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ನಟನೆಯ ‘ಪುಷ್ಪ 2’ ಸಿನಿಮಾ ಮೊದಲ ದಿನ ಬಾಕ್ಸ್ ಆಫೀಸ್ನಲ್ಲಿ ಹಂಗಾಮ ಸೃಷ್ಟಿ ಮಾಡಿದ್ದು, ಈ ಚಿತ್ರದ ಗಳಿಕೆ ಅಬ್ಬರಕ್ಕೆ ಹಲವು ಚಿತ್ರಗಳ ದಾಖಲೆಗಳು ಉಡೀಸ್ ಆಗಿವೆ.
ಹೌದು, ಪುಷ್ಪ-2 ಚಿತ್ರಕ್ಕೆ ಪ್ರೀಮೀಯರ್ ಶೋಗಳಿಂದ 10 ಕೋಟಿ ರೂಪಾಯಿ ಹರಿದು ಬಂದಿದೆ. ಡಿ.5ರಂದು ಚಿತ್ರಕ್ಕೆ 165 ಕೋಟಿ ರೂಪಾಯಿ ಕಲೆಕ್ಷನ್ ಆಗಿದ್ದು, ಸಿನಿಮಾದ ಒಟ್ಟಾರೆ ಗಳಿಕೆ 175 ಕೋಟಿ ರೂಪಾಯಿ ಆಗಿದೆ. ವಿಶ್ವ ಬಾಕ್ಸ್ ಆಫೀಸ್ ಲೆಕ್ಕ ಸೇರಿದರೆ ಸಿನಿಮಾದ ಕಲೆಕ್ಷನ್ 250 ಕೋಟಿ ರೂಪಾಯಿ ಸಮೀಪಿಸಲಿದ್ದು, ಕನ್ನಡದಲ್ಲೂ ಹಲವು ಶೋಗಳು ಚಿತ್ರಕ್ಕೆ ಸಿಕ್ಕಿದೆ.
ಇದನ್ನೂ ಓದಿ: Pushpa-2 ಪ್ರದರ್ಶನ ವೇಳೆ ಕಾಲ್ತುಳಿತ: ಮಹಿಳೆ ಸಾವು, ಬಾಲಕ ಗಂಭೀರ
Pushpa-2 : ಹಿಂದಿಯಲ್ಲಿ ಇತಿಹಾಸ ನಿರ್ಮಿಸಿದ ಪುಷ್ಪ-2 ಚಿತ್ರ!
ಇನ್ನು, ಪುಷ್ಪ-2 ಚಿತ್ರ ಹಿಂದಿಯಲ್ಲಿ ಇತಿಹಾಸ ಸೃಷ್ಟಿಸಿದ್ದು,ಬಾಲಿವುಡ್ ಚಲನಚಿತ್ರ ವಿಶ್ಲೇಷಕರು ಇದು ಮೊದಲ ದಿನವೇ 65-67 ಕೋಟಿ ರೂ.ಗಳ ಕಲೆಕ್ಷನ್ ಗಳಿಸಿದ ಮೊದಲ ಚಿತ್ರವಾಗಿದೆ ಎಂದು ಬಹಿರಂಗಪಡಿಸಿದ್ದಾರೆ.
ಈ ಚಿತ್ರ ನಿನ್ನೆ ಗುರುವಾರ ಬಿಡುಗಡೆಯಾಗಿದ್ದು, 70 ಕೋಟಿ ಗಡಿ ದಾಟಬಹುದು ಎಂದು ಅಂದಾಜಿಸಲಾಗಿದೆ. ಟಾಲಿವುಡ್ ಚಿತ್ರವು ಹಿಂದಿಯಲ್ಲಿ ಜನಪ್ರಿಯವಾಗಿರುವುದು ಅಚ್ಚರಿ ಮೂಡಿಸಿದೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ತೆಲುಗು ಚಿತ್ರವೊಂದು ಬಾಲಿವುಡ್‌ನ್ನು ಆಳುತ್ತಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ನಾಳೆ ವಿಶ್ವದಾದ್ಯಂತ ತೆರೆ ಮೇಲೆ ‘Pushpa-2: The Rule’ ಬಿಡುಗಡೆ