ಬೆಂಗಳೂರು: ಕರೋನ 2ನೇ ಅಲೆ ಸಾಧ್ಯತೆಯಿರುವ ಹಿನ್ನಲೆ ರಾಜ್ಯದಲ್ಲಿ ಎಲ್ಲಾ ಚಿತ್ರಮಂದಿರಗಳು ತಮ್ಮ ಒಟ್ಟು ಸೀಟಿನ ಪೈಕಿ ಶೇ.50ರಷ್ಟರಲ್ಲಿ ಮಾತ್ರವೇ ಕುಳಿತು ಸಿನಿಮಾ ನೋಡಲು ಪ್ರೇಕ್ಷಕರಿಗೆ ಅವಕಾಶ ನೀಡಬೇಕೆಂದು ಆದೇಶಿಸಿರುವ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ನಟ ಧ್ರುವ ಸರ್ಜಾ ಅಸಮಾಧಾನ ಹೊರಹಾಕಿದ್ದಾರೆ.
ಇದರಿಂದ ಸ್ಯಾಂಡಲ್ ವುಡ್ ಗೆ ದೊಡ್ಡ ಆಘಾತ ಉಂಟಾಗಿದ್ದು, ಈ ನಟ ದ್ರುವ ಸರ್ಜಾ ಟ್ವೀಟ್ ಮಾಡಿದ್ದೂ, ‘ಮಾರ್ಕೆಟ್ ನಲ್ಲಿ ಗಿಜಿಗಿಜಿ ಜನ, ಬಸ್ ನಲ್ಲೂ ಫುಲ್ ರಶ್.. ಆದರೆ ಚಿತ್ರಮಂದಿರಕ್ಕೆ ಮಾತ್ರ ಏಕೆ 50% ನಿರ್ಬಂಧ’ ಎಂದು ಪ್ರಶ್ನಿಸಿದ್ದಾರೆ. ಇನ್ನು ನಟ ಧ್ರುವ ಸರ್ಜಾ ಅವರು ಅಭಿನಯದ ಬಹುನಿರೀಕ್ಷಿತ ‘ಪೊಗರು’ ಚಿತ್ರ ಇದೇ 19ರಂದು ತೆರೆಗೆ ಬರಲಿದ್ದು, ಸರ್ಕಾರದ ಈ ಆದೇಶದಿಂದ ಪೊಗರು ಸಿನಿಮಾಕ್ಕೆ ದೊಡ್ಡ ಹೊಡೆತ ಬೀಳುವ ಸಾಧ್ಯತೆಯಿದೆ.
@drashwathcn @CMofKarnataka @mla_sudhakar #KFIrequestsfulloccupancy pic.twitter.com/S7rxIUlAPM
— Dhruva Sarja (@DhruvaSarja) February 3, 2021




