ದರ್ಶನ್ ಬೆನ್ನು ಮೂಳೆ ಸರಿದಿರೋದಾಗಿ ವೈದ್ಯರ ಮಾಹಿತಿ: ತುರ್ತು ಶಸ್ತ್ರಚಿಕಿತ್ಸೆಯೊಂದೇ ದಾರಿ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ಅವರಿಗೆ ಬೆನ್ನು ಮೂಳೆ ಸರಿದಿರುವುದಾಗಿ ಆಸ್ಪತ್ರೆಯ ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ. ಹೀಗಾಗಿ ಅವರಿಗೆ ತುರ್ತು ಶಸ್ತ್ರ ಚಿಕಿತ್ಸೆ ಅವಶ್ಯಕತೆ ಇರೋದಾಗಿ ಹೇಳಲಾಗುತ್ತಿದೆ. ನಟ ದರ್ಶನ್…

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ಅವರಿಗೆ ಬೆನ್ನು ಮೂಳೆ ಸರಿದಿರುವುದಾಗಿ ಆಸ್ಪತ್ರೆಯ ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ. ಹೀಗಾಗಿ ಅವರಿಗೆ ತುರ್ತು ಶಸ್ತ್ರ ಚಿಕಿತ್ಸೆ ಅವಶ್ಯಕತೆ ಇರೋದಾಗಿ ಹೇಳಲಾಗುತ್ತಿದೆ.

ನಟ ದರ್ಶನ್ ಅವರು ಅನಾರೋಗ್ಯ ಸಂಬಂಧ ಮೈಸೂರಲ್ಲಿ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಗಾಗಿದ್ದಾರೆ. ಅವರನ್ನು ಪರೀಕ್ಷಿಸಿದ ವೈದ್ಯರು, ಅವರ ಡಿಸ್ಕ್ ಅಲ್ಪ ಸರಿದಿರುವುದನ್ನು ಗುರುತಿಸಿದ್ದಾರೆ ಎಂದು ಹೇಳಿದ್ದಾರೆ ಎನ್ನಲಾಗುತ್ತಿದೆ.

ನಟ ದರ್ಶನ್ ಅವರಿಗೆ ಕಾಟೇರ ಚಲನಚಿತ್ರದ ಚಿತ್ರೀಕರಣದ ವೇಳೆಯಲ್ಲೇ ಈ ಸಮಸ್ಯೆ ಎದುರಾಗಿತ್ತಂತೆ. ಆ ನೋವಿನ ನಡುವೆಯೂ ಅವರು ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು ಎಂಬುದಾಗಿ ತಿಳಿದು ಬಂದಿದೆ.

Vijayaprabha Mobile App free

ತುರ್ತು ಶಸ್ತ್ರ ಚಿಕಿತ್ಸೆ ಅಗತ್ಯದ ನಡುವೆಯೂ ಫಿಜಿಯೋ ಥೆರಫಿ ಹಾಗೂ ಮಾತ್ರೆಗಳ ಮೂಲಕ ಸದ್ಯಕ್ಕೆ ಸಮಸ್ಯೆ ನಿವಾರಣೆಗೆ ಅವರು ಪ್ರಯತ್ನಿಸಿದ್ದಾರೆ ಎಂಬುದಾಗಿ ಹೇಳಲಾಗುತ್ತಿದೆ. ಆದರೆ ಇದು ತಾತ್ಕಾಲಿಕವಾಗಿದ್ದು, ಶಸ್ತ್ರ ಚಿಕಿತ್ಸೆಯ ಮೂಲಕವೇ ಸಮಸ್ಯೆ ನಿವಾರಿಸಲು ಸಾಧ್ಯ. ಶಸ್ತ್ರ ಚಿಕಿತ್ಸೆಗೆ ಒಳಗಾಗುವಂತೆ ವೈದ್ಯರು ಸೂಚಿಸಿರೋದಾಗಿ ಹೇಳಲಾಗುತ್ತಿದೆ.

 

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.