ಒಟಿಟಿ ಆವೃತ್ತಿಯ ಬಿಗ್‌ಬಾಸ್ ಫಿನಾಲೆ ಹಂತ ತಲುಪಿದ್ದು, ಮತ್ತೊಂದೆಡೆ ‘ಬಿಗ್‌ಬಾಸ್ ಸೀಸನ್- 9’ಕ್ಕೂ ಕೌಂಟ್‌ಡೌನ್ ಶುರುವಾಗಿದೆ. ಈಗಾಗಲೇ ವಾಹಿನಿಯ ಸೀಸನ್ 9ರ ಪ್ರೊಮೊಗಳನ್ನು ಹಾಕಲು ಶುರು ಮಾಡಿದ್ದು, ಈ ಅಸಲಿ ದೊಡ್ಮನೆಗೆ ಯಾರೆಲ್ಲ ಸ್ಪರ್ಧಿಗಳು ಹೋಗಲಿದ್ದಾರೆ ಎಂಬ ಕುತೂಹಲ ಬಹುತೇಕರಲ್ಲಿದೆ.
ಮೂಲಗಳ ಪ್ರಕಾರ ನಟ ಅನಿರುದ್ಧ ಅವರು ಬಿಗ್ ಬಾಸ್ ಮನೆಗೆ ಎಂಟ್ರಿ ನೀಡಲಿದ್ದಾರಂತೆ. ‘ಜೊತೆ ಜೊತೆಯಲಿ’ ಧಾರಾವಾಹಿಯಿಂದ ಇತ್ತೀಚೆಗಷ್ಟೇ ಹೊರಬಂದಿರುವ ನಟ ಅನಿರುದ್ಧ ಅವರಿಗೆ ಬಿಗ್‌ಬಾಸ್‌ನಿಂದ ಆಫರ್ ಬಂದಿದೆ ಎನ್ನಲಾಗಿದ್ದು, ಈ ಕುರಿತು ವಾಹಿನಿಯಾಗಲಿ, ಅನಿರುದ್ಧ ಆಗಲಿ ಖಚಿತಪಡಿಸಿಲ್ಲ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.