ಟೆಸ್ಟ್ ನಾಯಕರಾಗಿ ರೋಹಿತ್ ಶರ್ಮಾ? ರೋಹಿತ್ ನಾಯಕನಾಗಲು ಕಾರಣಗಳೇನು?

ಭಾರತೀಯ ಟೆಸ್ಟ್ ಕ್ರಿಕೆಟ್ ತಂಡದ ನಾಯಕರಾಗಿ ಡ್ಯಾಷಿಂಗ್ ಆಟಗಾರ ರೋಹಿತ್ ಶರ್ಮಾ ಹೆಸರನ್ನು BCCI ಶೀಘ್ರ ಪ್ರಕಟಿಸುವ ಸಾಧ್ಯತೆ ಇದೆ. ರೋಹಿತ್ ಸಂಪೂರ್ಣ ಫಿಟ್ ಆಗಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು insidesport ಎಂಬ ಕ್ರಿಕೆಟ್ ಸೈಟ್ ತಿಳಿಸಿದೆ.

ಇನ್ನು, ನಾಯಕನಾಗಿ ವಿರಾಟ್ ಕೊಹ್ಲಿ ನಿರ್ಗಮಿಸಿದ ತಕ್ಷಣ BCCI ರೋಹಿತ್ ಹೆಸರನ್ನು ಅಂತಿಮಗೊಳಿಸಿದ್ದು, ಅವರು ಫಿಟ್ ಆಗಿಲ್ಲ ಎಂಬ ಕಾರಣಕ್ಕೆ ಅವರ ಹೆಸರನ್ನು ಪ್ರಕಟಿಸಿರಲಿಲ್ಲ. ಆದರೆ ರೋಹಿತ್ ಶರ್ಮಾ ಅವರು ಈಗ ಫಿಟ್ ಆಗಿದ್ದು, ಶೀಘ್ರ ಹೆಸರು ಪ್ರಕಟಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

ರೋಹಿತ್ ನಾಯಕನಾಗಲು ಕಾರಣಗಳೇನು?

Advertisement

ಬಿಸಿಸಿಐ ರೋಹಿತ್ ಶರ್ಮಾ ಅವರನ್ನು ಟೆಸ್ಟ್ ನಾಯಕನಾಗಿ ಘೋಷಿಸಲು ಕಾರಣಗಳು:

1. ವಿರಾಟ್ ಕೊಹ್ಲಿ ನಂತರ ತಂಡದಲ್ಲಿ ಸಮರ್ಥ ನಾಯಕರಾಗಿದ್ದು, ಪ್ರಸ್ತುತ ಅತ್ಯುತ್ತಮ ಟೆಸ್ಟ್ ಬ್ಯಾಟ್ಸ್‌ಮನ್ ಕೂಡ ಆಗಿದ್ದಾರೆ.

2. ಅಜಿಂಕ್ಯ ರಹಾನೆ ಕಳಪೆ ಫಾರ್ಮ್ ನಿಂದ ಉಪನಾಯಕತ್ವ ಸ್ಥಾನ ಕಳೆದುಕೊಂಡಿದ್ದರಿಂದ ನಾಯಕನಾಗುವ ಅವಕಾಶ ಇಲ್ಲ.

3. ಕೆಎಲ್ ರಾಹುಲ್ ನಾಯಕತ್ವದ ದಾಖಲೆ ಉತ್ತಮವಾಗಿಲ್ಲ.

4. ರಿಷಬ್ ಪಂತ್ ಚಿಕ್ಕವರಾಗಿರುವ ಕಾರಣ ಜವಾಬ್ದಾರಿಗಳನ್ನು ಹಸ್ತಾಂತರಿಸಲು ಹಿಂಜರಿಕೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment

Leave a Reply

Your email address will not be published. Required fields are marked *

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement