ಬೆಂಗಳೂರು: ರಾಜ್ಯದಲ್ಲಿ ಇಂದು ಮತ್ತೆ ಪೆಟ್ರೋಲ್, ಡಿಸೇಲ್ ದರ ಇಳಿಕೆಯಾಗಿದ್ದು, ಬೆಂಗಳೂರಿನಲ್ಲಿ 1 ಲೀಟರ್ ಪೆಟ್ರೋಲ್ ದರ ₹93.59 (₹0.23 ಪೈಸೆ) ಇಳಿಕೆಯಾಗಿದ್ದು, 1 ಲೀಟರ್ ಡೀಸೆಲ್ ದರ ₹85.75 (₹0.24 ಪೈಸೆ ) ಇಳಿಕೆಯಾಗಿದೆ.
ವಿಜಯಪುರದಲ್ಲಿ 1 ಲೀಟರ್ ಪೆಟ್ರೋಲ್ ದರ ₹93.53 (₹0.67 ಪೈಸೆ ) ಇಳಿಕೆಯಾಗಿದ್ದು, 1 ಲೀಟರ್ ಡೀಸೆಲ್ ದರ ₹85.71 (₹0.66 ಪೈಸೆ ಇಳಿಕೆ) ದಾಖಲಾಗಿದ್ದು, ಚಿಕ್ಕಮಗಳೂರಿನಲ್ಲಿ 1 ಲೀಟರ್ ಪೆಟ್ರೋಲ್ ದರ ₹94.37 (₹1.45 ಇಳಿಕೆ) ಆಗಿದ್ದು, 1 ಲೀಟರ್ ಡೀಸೆಲ್ ದರ ₹86.14 (₹1.38 ಇಳಿಕೆ) ಆಗಿದೆ.
ಮಂಗಳವಾರದ ಚಿನ್ನ, ಬೆಳ್ಳಿ ದರ:
ಇನ್ನು ದೇಶದಲ್ಲಿ ಮಂಗಳವಾರ ಚಿನ್ನದ ಬೆಲೆ ಅಲ್ಪ ಇಳಿಕೆಯಾಗಿದ್ದು, 1 ಗ್ರಾಂ ಚಿನ್ನದ ಬೆಲೆ ₹4,298 ದಾಖಲಾಗಿದ್ದು, ಬೆಂಗಳೂರಿನಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ ₹41,700 ಇದ್ದು, 24 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ ₹45,490 ಆಗಿದ್ದು, ಒಂದು ಕೆಜಿ ಬೆಳ್ಳಿ ಬೆಲೆ ₹65,700 ಆಗಿದೆ.
ಮುಂಬೈನಲ್ಲಿ ಕೂಡ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ ₹42,980 ಆಗಿದ್ದು, 24 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ ₹43,980 ದಾಖಲಾಗಿದ್ದು, ಒಂದು ಕೆಜಿ ಬೆಳ್ಳಿ ದರ ₹65,700 ಆಗಿದೆ.