ಕೆಂಪು ವೈನ್ ಸೇವನೆ ಆರೋಗ್ಯಕ್ಕೆ ಉತ್ತಮ:
ಕೆಂಪು ವೈನ್ ಸೇವನೆಯು ಆರೋಗ್ಯಕ್ಕೆ ಉತ್ತಮವಾಗಿದ್ದು, ಕೆಂಪು ವೈನ್ ಆಲ್ಕೋಹಾಲ್ ರಹಿತವಾಗಿ ಕುಡಿದರೆ ದ್ರಾಕ್ಷಾರಸ ಸೇವಿಸಿದಷ್ಟೇ ಅನುಭವ ಸಿಗುವುದಲ್ಲದೆ, ಅಲ್ ಜೈಮೆರ್ ಕಾಯಿಲೆ ತೊಂದರೆ ಕಮ್ಮಿ ಮಾಡುತ್ತದೆ. ಜೊತೆಗೆ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ, ತ್ವಚೆ ಸಂರಕ್ಷಿಸಿ, ನಿಜ ವಯಸ್ಸನ್ನು ಮರೆ ಮಾಚುವಂತೆ ಮಾಡಲು ಉತ್ತಮ. ಅಷ್ಟೇ ಅಲ್ಲದೆ ಕೆಂಪು ವೈನ್ ಸೇವನೆಯಿಂದ ಹಲ್ಲಿನ ಆರೋಗ್ಯಕ್ಕೂ ಅನುಕೂಲವಾಗಿದೆ.
ಕೆಂಪು ದ್ರಾಕ್ಷಿಯಲ್ಲಿ ರೆಸ್ವರಾಟ್ರಾಲ್, ಎಪಿ ಕ್ಯಾಟೆಚಿನ್ ಹಾಗೂ ಪ್ರೋಆಂಥೋಸೈಯಾನಿನಿಡಿನ್ ಮೊದಲಾದ ಆಂಟಿ ಆಕ್ಸಿಡೆಂಟುಗಳಿದ್ದು, ಕೆಂಪು ವೈನ್ ಸೇವಿಸುವುದರಿಂದ ಫ್ರೀ ರ್‍ಯಾಡಿಕಲ್ ಎಂಬ ಹಾನಿಕಾರಕ ಕಣಗಳ ಧಾಳಿಯನ್ನು ಎದುರಿಸುವ ಮೂಲಕ ಹೃದಯದ ಕಾಯಿಲೆಗಳ ಸಾದ್ಯತೆ ಕಡಿಮೆಯಾಗಿಸುವುದಲ್ಲದೆ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಅತಿಯಾದ ವೈನ್ ಸೇವೆನೆ ಆರೋಗ್ಯಕ್ಕೆ ಹಾನಿಕರ
ಹೌದು ಅತಿಯಾದರೆ ಅಮೃತವು ವಿಷವೆಂಬಂತೆ, ಅತಿಯಾದ ವೈನ್ ಸೇವೆನೆ ಆರೋಗ್ಯಕ್ಕೆ ಹಾನಿಕರವಾಗಬಹುದು. ಅತಿಯಾದ ವೈನ್ ಸೇವನೆ ಮಾಡುವುದರಿಂದ ಅಧಿಕ ರಕ್ತದೊತ್ತಡ, ಕಿಡ್ನಿ ವೈಫಲ್ಯ, ನರ ದೌರ್ಬಲ್ಯ, ಕಾನ್ಸರ್, ಹೃದಯಘಾತಕ್ಕೂ ಕಾರಣವಾಗುತ್ತದೆ.
ಇದನ್ನು ಓದಿ: ಪ್ರತಿ ರಾತ್ರಿ ಬಿಯರ್ ಕುಡಿದರೆ ಏನಾಗುತ್ತದೆ? ಬಿಯರ್ ಕುಡಿಯುವುದರಿಂದ ಆಗುವ ಅನುಕೂಲ ಮತ್ತು ಅನಾನುಕೂಲಗಳೇನು?
ಇದನ್ನು ಓದಿ: ನಿತ್ಯ ಏಲಕ್ಕಿ ನೀರು ಕುಡಿಯಿರಿ ಆರೋಗ್ಯವಾಗಿರಿ; ಏಲಕ್ಕಿಯ ಅದ್ಭುತ ಪ್ರಯೋಜನಗಳು