ಅನೂಪ್ ಅವರೊಂದಿಗೆ ಸಿನಿಮಾ ಮಾಡ್ತಾರಾ ತೆಲುಗಿನ “ಅಕ್ಕಿನೇನಿ ನಾಗಾರ್ಜುನ? ವಿಡಿಯೋ ನೋಡಿ

ದೂರದ ದುಬೈನಲ್ಲಿ ತನ್ನ ಟೈಟಲ್ ಲಾಂಚ್ ಮಾಡಿಕೊಂಡು, ಸುದೀಪ್ ಅವರ 25 ವರ್ಷಗಳ ಸಿನಿಮಾ ಪ್ರಯಾಣ ಸಾಧನೆಯ ಮೆಲುಕು ಹಾಕಿದ ಕನ್ನಡದ “ವಿಕ್ರಾಂತ್ ರೋಣ” ಈಗ ಭಾರೀ ಸುದ್ದಿಯಲ್ಲಿದೆ. ಇಂತಿಪ್ಪ “ವಿಕ್ರಾಂತ್ ರೋಣ” ಚಿತ್ರ…

ದೂರದ ದುಬೈನಲ್ಲಿ ತನ್ನ ಟೈಟಲ್ ಲಾಂಚ್ ಮಾಡಿಕೊಂಡು, ಸುದೀಪ್ ಅವರ 25 ವರ್ಷಗಳ ಸಿನಿಮಾ ಪ್ರಯಾಣ ಸಾಧನೆಯ ಮೆಲುಕು ಹಾಕಿದ ಕನ್ನಡದ “ವಿಕ್ರಾಂತ್ ರೋಣ” ಈಗ ಭಾರೀ ಸುದ್ದಿಯಲ್ಲಿದೆ.

ಇಂತಿಪ್ಪ “ವಿಕ್ರಾಂತ್ ರೋಣ” ಚಿತ್ರ ದ ಶೂಟೀಂಗ್ ಸಂಧರ್ಭದಲ್ಲಿ ನಡೆದ ಪ್ರಮುಖ ಸ್ವಾರಸ್ಯಕರ ಮಾಹಿತಿಯೊಂದನ್ನು , ಈ ಚಿತ್ರದ ನಿರ್ದೇಶಕರ ತಂದೆಯೂ, ಸ್ವತಃ ಚಿತ್ರರಂಗದಲ್ಲಿ ನಿರ್ದೇಶಕರಾಗಿಯೂ, ಸಹ ನಿರ್ಮಾಪಕರಾಗಿಯೂ ಹೆಸರು ಮಾಡಿರುವ ಶ್ರೀಯುತ ಸುಧಾಕರ್ ಭಂಡಾರಿ ಅವರು “ಅನಂತಗೀತಾ KFI “ ಯುಟ್ಯೂಬ್ ಚಾನೆಲ್ಲಿಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಇದೇ ಮೊದಲ ಬಾರಿಗೆ ಕನ್ನಡ ಸಿನಿ ಪ್ರೇಮಿಗಳಿಗೆ ಹಂಚಿಕೊಂಡಿದ್ದಾರೆ.

ಹೈದರಾಬಾದಿನ ಅಕ್ಕಿನೇನಿ ಒಡೆಯನದ ಅನ್ನಪೂರ್ಣ ಸ್ಟುಡಿಯೋಸ್ ನಲ್ಲಿ, ಚಿತ್ರೀಕರಣ ಸಮಯದಲ್ಲಿ ಸ್ಥಳಕ್ಕೆ ಬಂದ ನಾಗಾರ್ಜುನಾ ರವರ ಮ್ಯಾನೆಜರ್, ವಿಕ್ರಾಂತ್ ರೋಣ ನಿರ್ದೇಶಕ ಅನೂಪ್ ಭಂಡಾರಿ ಅವರನ್ನು ಕಂಡು- ಸಮಯ ಪಡೆದು, ನಾಗಾರ್ಜುನರು ತಮ್ಮನ್ನು ಭೇಟಿ ಮಾಡುವ ಇಚ್ಛೆ ವ್ಯಕ್ತಪಡಿಸಿದ್ದನ್ನು ಅವರಿಗೆ ತಿಳಿಸಿದ್ದಾರೆ.

Vijayaprabha Mobile App free

ಅಂದಿನ ಶೂಟಿಂಗ್ ಮುಗಿದ ನಂತರ ಚಿತ್ರದ ನಿರ್ಮಾಪಕ ಜ್ಯಾಕ್ ಮಂಜು ಹಾಗೂ ಅನೂಪ್ ರವರು ನಾಗಾರ್ಜುನರವರ ಬಳಗೆ ತೆರಳಿದಾಗ ಮಾತನಾಡುತ್ತಾ, “ಕಾಡಿನ ಸೆಟ್ ಅನ್ನು ಇಷ್ಟು ನೈಜವಾಗಿ ರೂಪಿಸಿರುವ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿ, ಅನೂಪ್ ರ ಸಿನಿಮಾ ಕೌಶಕ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಗೂ ಮುಂದಿನ ದಿನಗಳಲ್ಲಿ ಜೊತೆಯಾಗಿ ಸಿನಿಮಾ ಮಾಡುವ ಆಶಯವನ್ನು ತಿಳಿಸಿದ್ದಾರೆ.

ಅಲ್ಲದೆ ಮಾ ಟಿವಿಯ ಕಾರ್ಯಕ್ರಮವೊಂದರಲ್ಲಿ, ನಾಗಾರ್ಜುನ  ಅವರು “ ವಿಕ್ರಾಂತ್ ರೋಣ” ಭಾರತೀಯ ಸಿನಿಮಾಗಳಲ್ಲಿಯೇ ಅತ್ಯಂತ ವಿಶಿಷ್ಠವಾದುದಾಗಿದ್ದು ಅದು ನಮ್ಮ ಮೇಕಿಂಗ್ ನ್ನು ಜಾಗತಿಕ ಮಟ್ಟಕ್ಕೆ ಪರಿಚಯಿಸಲಿದೆ ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಿದ್ದಾರೆ.

ತಮ್ಮ ಬದುಕಿನ ಹೆಜ್ಜೆಗಳನ್ನು ಮೆಲುಕು ಹಾಕುತ್ತಾ ತಮ್ಮಬಾಲ್ಯ, ಯಕ್ಷಗಾನ ದ ಮೇಲಿನ ಆಸಕ್ತಿ, ಸಿನಮಾ ಪ್ರೇಮ ಹಾಗೂ ತಾವು ಸಿನಿಮಾ ಹಾಗೂ ಕಿರಿತೆರೆಯಲ್ಲಿ ಇಂದಿನ ವರೆಗೂ ಸಾಗಿದ ಹಾದಿಯನ್ನು ಎಳೆಎಳೆಯಾಗಿ ಬಿಚ್ಚಿಡುತ್ತಾ ಈ ಘಟನೆಯನ್ನೂ ನೋಡುಗರಿಗೆ ಹೇಳಿದ್ದಾರೆ. ರಂಗೀತರಂಗ ಚಿತ್ರದ ಸಮಯದಲ್ಲಿ ಎದುರಿಸಿದ ಸಂಕಷ್ಟಗಳನ್ನು ನೆನೆಯುತ್ತಾ, ಅದರ ಗೆಲುವಿನ ಪ್ರಮುಖ ವಿಚಾರಗಳನ್ನು ಇದೇ ಮೊದಲ ಬಾರಿಗೆ ಹಂಚಿಕೊಂಡಿದ್ದಾರೆ.

ನಿರ್ಮಾಪಕರಾದವರಿಗೆ ಇರುವ ಜವಾಬ್ದಾರಿಗಳನ್ನೂ ಸಹ ನೆನಪಿಸುವ ಮೂಲಕ , ಮುಂದಿನ ದಿನಗಳಲ್ಲಿ ಸಿನಿಮಾ ನಿರ್ಮಾಣಕ್ಕೆ ತೊಡಗಬೇಕೆಂದಿರುವ ಉತ್ಸಾಹಿಗಳಿಗೆ ಮಾರ್ಗದರ್ಶಕರಾಗಿದ್ದಾರೆ. ಇವರ ಸಂಪೂರ್ಣ ಸಂದರ್ಶನ ಶೀಘ್ರದಲ್ಲೇ ಕನ್ನಡಿಗರಿಗೆ ಬಿಡುಗಡೆಯಾಗಲಿದೆ.

ನಾಡಿನ ವಿವಿಧ ಕ್ಷೇತ್ರಗಳ ಸಾಧಕರ ಬದುಕನ್ನು ಮೆಲುಕು ಹಾಕುವ ಮೂಲಕ, ಮುಂದಿನ ಪೀಳಿಗೆಗೆ ಸಾಧಕರಾಗುವ ಕನಸನ್ನು ಬಿತ್ತುವ ಈ ಸಂದರ್ಶನ ಮಾಲಿಕೆಗಳನ್ನು ನೋಡಲು “ಅನಂತಗೀತಾ KFI “ ಯುಟ್ಯೂಬ್ ಚಾನೆಲ್ ನ್ನು SUBSCRIBE ಆಗಬಹುದು.

 

ಸುದೀಪ್ ಜೀವನ ಸಾಧನೆ ಹಾಗೂ “ವಿಕ್ರಾಂತ್ ರೋಣ” ಬಗ್ಗೆ ಇರುವ ಈ ಮಾತುಕತೆಯನ್ನು ನೋಡಲು ಇಲ್ಲಿ ನೀಡಿರುವ ಲಿಂಕನ್ನು ಬಳಸಬಹುದಾಗಿದೆ.

https://youtu.be/3-RDnf7yBKI

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.