ರೀಲ್ಸ್​ ಮಾಡುವಾಗ ಎಡವಟ್ಟು: ಬರೋಬ್ಬರಿ 300 ಅಡಿ ಎತ್ತರದ ಫಾಲ್ಸ್​​ನಿಂದ ಬಿದ್ದು ಯುವತಿ ಮೃತ್ಯು!

ರಾಯಗಡ : ಇನ್‌ಸ್ಟಾಗ್ರಾಮ್​ಗಳಲ್ಲಿ ಸಖತ್​ ಫೇಮಸ್ ಆಗಿದ್ದ ಯುವತಿ ಸಾವನ್ನಪ್ಪಿರೋ ಘಟನೆ ರಾಯಗಡ ಬಳಿಯ ಕುಂಭೆ ಜಲಪಾತದಲ್ಲಿ ನಡೆದಿದೆ. ಅನ್ವಿ ಕಾಮ್ದಾರ್ (26) ಮೃತ ಯುವತಿ. ಅನ್ವಿ ಕಾಮ್ದಾರ್ ಮುಂಬೈ ನಿವಾಸಿ. ಯುವತಿಯೂ ರೀಲ್ಸ್​…

ರಾಯಗಡ : ಇನ್‌ಸ್ಟಾಗ್ರಾಮ್​ಗಳಲ್ಲಿ ಸಖತ್​ ಫೇಮಸ್ ಆಗಿದ್ದ ಯುವತಿ ಸಾವನ್ನಪ್ಪಿರೋ ಘಟನೆ ರಾಯಗಡ ಬಳಿಯ ಕುಂಭೆ ಜಲಪಾತದಲ್ಲಿ ನಡೆದಿದೆ.

ಅನ್ವಿ ಕಾಮ್ದಾರ್ (26) ಮೃತ ಯುವತಿ.

ಅನ್ವಿ ಕಾಮ್ದಾರ್ ಮುಂಬೈ ನಿವಾಸಿ. ಯುವತಿಯೂ ರೀಲ್ಸ್​ ಮಾಡುವಾಗ ಆಯಾ ತಪ್ಪಿ ಬರೋಬ್ಬರಿ 300 ಅಡಿ ಆಳಕ್ಕೆ ಬಿದ್ದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Vijayaprabha Mobile App free

ಜುಲೈ 16ರಂದು ಅನ್ವಿ ತನ್ನ 7 ಸ್ನೇಹಿತರೊಂದಿಗೆ ಜಲಪಾತಕ್ಕೆ ಪ್ರವಾಸವನ್ನು ಕೈಗೊಂಡಿದ್ದರು. ವೀಡಿಯೊ ಚಿತ್ರೀಕರಣ ಮಾಡುವಾಗ ಅನ್ವಿ ಆಳವಾದ ಕಂದಕಕ್ಕೆ ಜಾರಿ ಬಿದ್ದಿದ್ದಾರೆ.

ಈ ವಿಷಯ ತಿಳಿದ ಕೂಡಲೇ ಸ್ಥಳೀಯ ಅಧಿಕಾರಿಗಳು ಕೂಡಲೇ ರಕ್ಷಣಾ ತಂಡದೊಂದಿಗೆ ಸ್ಥಳಕ್ಕೆ ದೌಡಾಯಿಸಿದ್ದರು. ನಾವು ಸ್ಥಳಕ್ಕೆ ತಲುಪಿದ ತಕ್ಷಣ, ಹುಡುಗಿ ಸುಮಾರು 300-350 ಅಡಿಗಳಷ್ಟು ಬಿದ್ದಿದ್ದಾಳೆಂದು ನಮಗೆ ತಿಳಿಯಿತು. ಯುವತಿಯೂ ಕೆಳಗೆ ಬಿದ್ದ ಮೇಲೆ ಆಕೆ ಗಂಭೀರವಾಗಿ ಗಾಯಗೊಂಡಿದ್ದಳು. ಆಗ ಅದೇ ವೇಳೆ ಧಾರಾಕಾವಾಗಿ ಮಳೆಯಾಗುತ್ತಿದ್ದರಿಂದ ಅವಳನ್ನು ಮೇಲಕ್ಕೆತ್ತಲು ಕಷ್ಟವಾಯಿತು. ಬಳಿಕ ಆರು ಗಂಟೆಗಳ ರಕ್ಷಣಾ ಕಾರ್ಯಾಚರಣೆಯ ನಂತರ ಆಕೆಯನ್ನು ಮೇಲೆ ಕರೆದುಕೊಂಡು ಬರಲಾಯಿತು. ಆದರೆ ಮೇಲಿಂದ ಬಿದ್ದ ರಭಸಕ್ಕೆ ಯುವತಿ ಗಂಭೀರವಾಗಿ ಗಾಯಗೊಂಡಿದ್ದಳು. ಬಳಿಕ ಆಕೆಯನ್ನು ಮನಗಾಂವ ಉಪ ಜಿಲ್ಲಾಸ್ಪತ್ರೆಗೆ ಕರೆತರುವಷ್ಟರಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ಥಳೀಯ ಅಧಿಕಾರಿಗಳು ಪ್ರವಾಸಿಗರು ಹಾಗೂ ನಾಗರೀಕರಿಗೆ ಮನವಿ ಸಲ್ಲಿಸಿದರು. ಕುಂಭೆ ಜಲಪಾತದ ಸೌಂದರ್ಯವನ್ನು ಸೆರೆಹಿಡಿಯುವ ಪ್ರಯತ್ನದಲ್ಲಿದ್ದ ಪ್ರವಾಸೋದ್ಯಮದ ಉತ್ಸಾಹಕ್ಕೆ ಹೆಸರುವಾಸಿಯಾದ ಅನ್ವಿ ಮೃತಪಟ್ಟಿದ್ದಾರೆ. ಪ್ರತಿಯೊಬ್ಬರೂ ಜವಾಬ್ದಾರಿಯುತವಾಗಿ ಪ್ರವಾಸೋದ್ಯಮವನ್ನು ಆನಂದಿಸಬೇಕು ಮತ್ತು ಸಹ್ಯಾದ್ರಿ ಶ್ರೇಣಿಗಳ ರಮಣೀಯ ಸೌಂದರ್ಯವನ್ನು ಅನ್ವೇಷಿಸುವಾಗ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ಅವರು ಒತ್ತಾಯಿಸಿದರು.

ಜೀವಕ್ಕೆ ಅಪಾಯವನ್ನುಂಟು ಮಾಡುವ ಅಪಾಯಕಾರಿ ನಡುವಳಿಕೆಗಳನ್ನು ತಪ್ಪಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.