ಮಗುವಿನಿಂದ ದೂರವಿರುವುದು ಭಯಾನಕ; ಕರೋನಾವನ್ನು ತಮಾಷೆಯಾಗಿ ತೆಗೆದುಕೊಳ್ಳಬೇಡಿ: ಮಗುವನ್ನು ನೆನೆದು ಭಾವುಕರಾದ ಸಾನಿಯಾ ಮಿರ್ಜಾ

ಹೈದರಾಬಾದ್ : ಕರೋನಾ ಮಹಾಮಾರಿ ಜಗತ್ತಿನಾದ್ಯಂತ ಪ್ರತಿಯೊಬ್ಬರನ್ನು ಭಯಭೀತರನ್ನಾಗಿಸಿದೆ. ಎಷ್ಟೇ ಕಾಳಜಿ ವಹಿಸಿದರೂ ಯಾವಾಗ, ಎಲ್ಲಿಂದ, ಹೇಗೆ ಆವರಿಸುತ್ತದೆ ಎಂಬ ಭಯ ಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಕಾಡುತ್ತಿದೆ. ಇತ್ತೀಚೆಗೆ ಟೆನಿಸ್ ತಾರೆ ಸಾನಿಯಾ ಮಿರ್ಜಾ…

sania mirza vijayaprabha

ಹೈದರಾಬಾದ್ : ಕರೋನಾ ಮಹಾಮಾರಿ ಜಗತ್ತಿನಾದ್ಯಂತ ಪ್ರತಿಯೊಬ್ಬರನ್ನು ಭಯಭೀತರನ್ನಾಗಿಸಿದೆ. ಎಷ್ಟೇ ಕಾಳಜಿ ವಹಿಸಿದರೂ ಯಾವಾಗ, ಎಲ್ಲಿಂದ, ಹೇಗೆ ಆವರಿಸುತ್ತದೆ ಎಂಬ ಭಯ ಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಕಾಡುತ್ತಿದೆ. ಇತ್ತೀಚೆಗೆ ಟೆನಿಸ್ ತಾರೆ ಸಾನಿಯಾ ಮಿರ್ಜಾ ಸಾಮಾಜಿಕ ಮಾಧ್ಯಮದಲ್ಲಿ ಕರೋನ ಸೋಂಕಿನ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಕರೋನಾ ತಗುಲಿ ಒಂಟಿಯಾಗಿರುವುದು, ಕುಟುಂಬ ಮತ್ತು ಮಗುವಿನಿಂದ ದೂರವಿರುವುದು ತುಂಬಾ ಭಯಾನಕವಾಗಿರುತ್ತದೆ ಎಂದು ಭಾವುಕರಾದರು. ತಾನು ಎಷ್ಟೇ ಜಾಗರೂಕರಾಗಿದ್ದರೂ ಕೂಡ ಕರೋನಾ ವೈರಸ್ ಸೋಂಕಿಗೆ ಒಳಗಾಗಿದ್ದೆ, ಆದರೆ ದೇವರ ಅನುಗ್ರಹದಿಂದ ತಾನು ಈಗ ಆರೋಗ್ಯವಾಗಿದ್ದೇನೆ ಎಂದು ಅವರು ಇನ್ಸ್ಟಾಗ್ರಾಮ್ ಮತ್ತು ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ.

ತನಗೆ ಕರೋನಾ ಸೋಂಕು ತಗುಲಿತ್ತು, ಅದೃಷ್ಟವಶಾತ್ ತನಗೆ ಯಾವುದೇ ಲಕ್ಷಣಗಳು ತೋರಿಸಿಲ್ಲ ಎಂದು ಸಾನಿಯಾ ಮಿರ್ಜಾ ಇನ್ಸ್ಟಾಗ್ರಾಮ್ನಲ್ಲಿ ಬಹಿರಂಗಪಡಿಸಿದ್ದಾರೆ. ಆದರೆ, ಮುನ್ನೆಚ್ಚರಿಕೆ ಕ್ರಮವಾಗಿ ಪ್ರತ್ಯೇಕವಾಗಿದ್ದೇನೆ ಎಂದು ಹೇಳಿದ್ದಾರೆ. ಆದರೆ, ಈ ಸಮಯದಲ್ಲಿ, ಕುಟುಂಬದಿಂದ ಮುಖ್ಯವಾಗಿ ತನ್ನ ಎರಡು ವರ್ಷದ ಮಗುವಿನಿಂದ ದೂರವಿರುವುದು ಭಯಾನಕ ಅನಿಸಿತ್ತು ಎಂದು ಹೇಳಿದ್ದಾರೆ. ಆದರೆ ಕರೋನಾದಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರೆ, ಆಸ್ಪತ್ರೆಯಲ್ಲಿ ಏಕಾಂಗಿಯಾಗಿ, ಕುಟುಂಬ ಮತ್ತು ಪ್ರೀತಿಪಾತ್ರರಿಂದ ದೂರ ಇರುವವರ ಪರಿಸ್ಥಿತಿ ಊಹಿಸಿಕೊಳ್ಳುವುದು ಕಷ್ಟ.

sania and son vijayaprabha

Vijayaprabha Mobile App free

ಅದು ಯಾವಾಗ ಸಂಭವಿಸುತ್ತದೆ ಎಂದು ನನಗೆ ತಿಳಿದಿಲ್ಲ. ದಿನಕ್ಕೆ ಹೊಸ ರೋಗಲಕ್ಷಣ, ದಿನಕ್ಕೊಂದು ಹೊಸ ಕಥೆ ಇಂತಹ ಅನಿಶ್ಚಿತ ಪರಿಸ್ಥಿತಿಯನ್ನು ನಿಭಾಯಿಸುವುದು ದೈಹಿಕವಾಗಿ ಮತ್ತು ಮಾನಸಿಕವಾಗಿ ತುಂಬಾ ಕಷ್ಟ. ಆದ್ದರಿಂದ ಕರೋನಾ ಸಾಂಕ್ರಾಮಿಕವನ್ನು ನಿಜವಾಗಿ ತಮಾಷೆಯಾಗಿ ತೆಗೆದುಕೊಳ್ಳಬೇಡಿ. ಈ ಬಗ್ಗೆ ಜಾಗರೂಕರಾಗಿರಬೇಕು. ಮಾಸ್ಕ್ ಗಳನ್ನು ಧರಿಸಿ ಮತ್ತು ಕೈಗಳನ್ನು ಚೆನ್ನಾಗಿ ತೊಳೆಯುವ ಮೂಲಕ ನಿಮ್ಮನ್ನು ರಕ್ಷಿಸಿಕೊಳ್ಳಿ. ನಮ್ಮ ಕುಟುಂಬವನ್ನು ರಕ್ಷಿಸಲು ನಾವು ಎಲ್ಲವನ್ನು ಮಾಡಬೇಕು. ಒಟ್ಟಾಗಿ ಈ ಯುದ್ಧವನ್ನು ಮಾಡುತ್ತಿದ್ದೇವೆ ಎಂದು ಸಾನಿಯಾ ಹೇಳಿದ್ದಾರೆ.

 

View this post on Instagram

 

A post shared by Sania Mirza (@mirzasaniar)

ಇದನ್ನು ಓದಿ: ತನ್ನ ಮರ್ಮಾಂಗವನ್ನು ಹೊರತೆಗೆದು ಅದನ್ನು ಅನುಭವಿಸುವಂತೆ ಹೇಳಿದ್ದ; ಬಾಲಿವುಡ್ ನಿರ್ದೇಶಕನ ವಿರುದ್ಧ ಖ್ಯಾತ ನಟಿ ಲೈಂಗಿಕ ಆರೋಪ

ಇದನ್ನು ಓದಿ: ಇನ್ಮುಂದೆ ಟ್ರಾಫಿಕ್ ನಿಯಮ ಉಲ್ಲಂಘಿಸುವ ಮುನ್ನ ಇರಲಿ ಎಚ್ಚರ; ನ್ಯೂ ಟ್ರಾಫಿಕ್ ರೂಲ್ಸ್ ಜಾರಿಗೆ!

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.