ಬೆಂಗಳೂರು: ‘ತತ್ಕಾಲ್’ LPG ಸೇವೆ ಪ್ರಾರಂಭಿಸಲು ಇಂಡಿಯನ್ ಆಯಿಲ್ ಕಾರ್ಪೋರೇಶನ್ ಯೋಜನೆ ರೂಪಿಸಿದ್ದು, ಈ ಮೂಲಕ ಇನ್ನು ಮುಂದೆ LPG ಸಿಲಿಂಡರ್ಗಳು ಬುಕ್ಕಿಂಗ್ ಮಾಡಿದ ದಿನವೇ ಸಿಗಲಿದೆ ಎನ್ನಲಾಗಿದೆ.
ಇನ್ನು ಮುಂದೆ ಪ್ರತಿ ಜಿಲ್ಲೆಯ ಒಂದು ನಗರದಲ್ಲಿ ಈ ರೀತಿ ಬುಕ್ಕಿಂಗ್ ಮಾಡಬಹುದಾಗಿದ್ದು, ಬುಕ್ಕಿಂಗ್ ಮಾಡಿದ 30ರಿಂದ 45 ನಿಮಿಷಗಳಲ್ಲಿ ಗ್ರಾಹಕರಿಗೆ ಸಿಲಿಂಡರ್ ಡೆಲಿವರಿ ನೀಡಲಾಗುತ್ತದೆ. ಈ ಸೇವೆ ಒಂದು ಸಿಲಿಂಡರ್ ಹೊಂದಿರುವ ಗ್ರಾಹಕರಿಗಾಗಿ ಜಾರಿಗೊಳಿಸಲಾಗುತ್ತಿದೆ. ಈ ಸೇವೆ ಬಹುತೇಕ ಫೆ.1ರಿಂದ ಆರಂಭವಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಜ.25 ಕೊನೆ: ರಿಯಾಯಿತಿಯಲ್ಲಿ LPG ಗ್ಯಾಸ್ ಪಡೆಯಲು ಹೀಗೆ ಮಾಡಿ
ನೀವು LPG ಗ್ಯಾಸ್ ಬುಕಿಂಗ್ನಲ್ಲಿ ರಿಯಾಯಿತಿ ಅಥವಾ ಕ್ಯಾಶ್ಬ್ಯಾಕ್ ಪಡೆಯಲು ಬಯಸಿದರೆ ಈ ಕೆಲಸ ಮಾಡಿ. ಹೌದು, ಐಸಿಐಸಿಐ ಬ್ಯಾಂಕ್ ನಿರ್ವಹಿಸುವ ಪಾಕೆಟ್ಸ್ ವಾಲೆಟ್ ಆ್ಯಪ್ ಮೂಲಕ LPG ಗ್ಯಾಸ್ ಬುಕಿಂಗ್ ಮಾಡಿದರೆ, ರಿಯಾಯಿತಿ ಅಥವಾ ಕ್ಯಾಶ್ಬ್ಯಾಕ್ ಕೊಡುಗೆಗಳನ್ನು ಪಡೆಯಬಹುದು.
ಜ.25 ರೊಳಗಾಗಿ LPG ಗ್ಯಾಸ್ ಬುಕಿಂಗ್ ಮಾಡಿದರೆ ಮಾತ್ರ ಈ ಕೊಡುಗೆ ಪಡೆಯಬಹುದಾಗಿದೆ. ಪಾಕೆಟ್ಸ್ ವಾಲೆಟ್ ಆ್ಯಪ್ ಮೂಲಕ ಗ್ಯಾಸ್ ಬುಕಿಂಗ್ ಮಾಡಿದರೆ ಪ್ರತಿಶತ 10ರಷ್ಟು ಕ್ಯಾಶ್ಬ್ಯಾಕ್ ಪಡೆಯಬಹುದು.




