ಮುಂಬೈ: ಚಿತ್ರರಂಗದಲ್ಲಿ ಮಹಿಳೆಯರ ಕಿರುಕುಳದ ಬಗ್ಗೆ ಅನೇಕ ನಟಿಯರು ಈಗಾಗಲೇ ಬಾಯಿ ತೆರೆದಿರುವುದು ಎಲ್ಲರಿಗೂ ತಿಳಿದಿರುವ ಸತ್ಯ. ಇತ್ತೀಚೆಗೆ, ಇರಾನಿನ ನಟಿ ಮಂದನಾ ಕರಿಮಿ ಅವರು ಒಬ್ಬ ನಿರ್ಮಾಪಕನ ಬಂಡವಾಳ ಬಯಲು ಮಾಡಿದ್ದೂ, ಅವರ ವಿರುದ್ಧ ಸಂಚಲನ ಹೇಳಿಕೆ ನೀಡಿದ್ದಾಳೆ. ಶೂಟಿಂಗ್ ಸಮಯದಲ್ಲಿ ತಾನು ಅನುಭವಿಸಿದ ಕಹಿ ಅನುಭವಗಳ ಬಗ್ಗೆ ವಿವರಿಸಿದ್ದಾಳೆ. ತನ್ನ ಮೇಲೆ ನಡೆದುಕೊಂಡ ರೀತಿ ನೋವುಂಟು ಮಾಡಿದ್ದೂ, ಆ ನಿರ್ಮಾಪಕ ಮಾನಸಿಕವಾಗಿ ಕಿರಿಕುಳ ನೀಡಿದ್ದ ಎಂದು ಆವೇದನೆ ವ್ಯಕ್ತಪಡಿಸಿದ್ದಾಳೆ.
ನಟಿ ಮಂದನಾ ಕರಿಮಿ ಅವರು ಪ್ರಸ್ತುತ ನೀಲಿ ತಾರೆ ಸನ್ನಿ ಲಿಯೋನ್ ಅಭಿನಯದ ‘ಕೋಕಾ ಕೋಲಾ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಆದರೆ, ಅದೇ ಸಿನಿಮಾದ ನಿರ್ಮಾಪಕ ಮಹೇಂದ್ರ ಧಾರಿವಾಲ್ ತನ್ನನ್ನು ಮಾನಸಿಕವಾಗಿ ನಿಂದಿಸಿದ್ದಾನೆ ಎಂಬ ಹೇಳಿಕೆ ನೀಡಿ ಬೀ ಟೌನ್ ನಲ್ಲಿ ಎಲ್ಲರು ಆಶ್ಚರ್ಯ ಪಡುವಂತೆ ಮಾಡಿದ್ದಾರೆ. ಕಳೆದ ವರ್ಷದಿಂದ ‘ಕೋಕಾ ಕೋಲಾ’ ಚಿತ್ರದ ಶೂಟಿಂಗ್ ನಡೆಯುತ್ತಿದ್ದು, ಚಿತ್ರದ ನಿರ್ಮಾಪಕ ಸೇರಿದಂತೆ ಇಡೀ ಸಿನಿಮಾ ಯುನಿಟ್ ನಲ್ಲಿ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದೇನೆ ಎಂದು ಮಂದನಾ ಕರಿಮಿ ಹೇಳಿದ್ದಾರೆ.
ಕಾಲ್ ಶೀಟ್‌ಗಳ ಪ್ರಕಾರ, ದೀಪಾವಳಿಯ ಹಿಂದಿನ ರಾತ್ರಿ ಚಿತ್ರದ ಚಿತ್ರೀಕರಣದ ಕೊನೆಯ ದಿನ ಎಂದು ಮಂದನಾ ಕರಿಮಿ ಹೇಳಿದ್ದು, ಆದರೆ ಅದೇ ದಿನ ನಿರ್ಮಾಪಕರ ವರ್ತನೆಯಿಂದ ಬಹಳ ನೋವುಂಟು ಮಾಡಿತ್ತು ಎಂದು ಹೇಳಿದ್ದಾರೆ. “ಚಿತ್ರದ ಕೆಲವು ದೃಶ್ಯಗಳು ಬಾಕಿ ಉಳಿದಿವೆ ಆದ್ದರಿಂದ ಇನ್ನೊಂದು ಗಂಟೆ ಸೆಟ್‌ನಲ್ಲಿ ಇರಬೇಕಾಗಿದೆ” ಎಂದು ನಿರ್ಮಾಪಕರು ಹೇಳಿದರು.
ಆದರೆ ಅದೇ ಸಮಯದಲ್ಲಿ ನನಗೆ ಬೇರೆ ಮೀಟಿಂಗ್ಸ್ ಇರುವುದರಿಂದ ಸಾಧ್ಯವಿಲ್ಲ ಎಂದು ಹೇಳಿ ಕಾರವಾನ್ಗೆ ಬಂದು ನನ್ನ ಬಟ್ಟೆ ಬದಲಾಯಿಸುತ್ತಿದ್ದೆ. ಇದರೊಂದಿಗೆ, ನಿರ್ಮಾಪಕ ನೇರವಾಗಿ ಕಾರವಾನ್‌ಗೆ ಬಂದಿರುವುದು ಮಾತ್ರವಲ್ಲದೆ ಮಾತನಾಡದ ಮಾತುಗಳನ್ನೂ ಆಡಿದ್ದರು. ಬಟ್ಟೆ ಬದಲಾಯಿಸಿ ಹೊರಗೆ ಬಂದು ಮಾತನಾಡುತ್ತೇನೆ ಎಂದು ಹೇಳಿದರೂ, ಕಡೆಗಣಿಸಿ ತನ್ನ ಮೇಲೆ ಆರೋಪ ಮಾಡಿದರು ಎಂದು ನಟಿ ಮಂದನಾ ಕರಿಮಿ ಹೇಳಿದರು.
ಇದನ್ನು ಓದಿ: ಹಾಟ್ ಫೋಟೋದಿಂದ ಪಡ್ಡೆಹುಡುಗರ ಹಾರ್ಟ್ ಬೀಟ್ ಹೆಚ್ಚಿಸಿದ ಖ್ಯಾತ ಸೀರಿಯಲ್ ನಟಿ!