Railway Recruitment | ನಿರುದ್ಯೋಗಿಗಳಿಗೆ ಸುವರ್ಣ ಅವಕಾಶ.. ರೈಲ್ವೆಯಲ್ಲಿ 6,180 ಹುದ್ದೆಗಳಿಗೆ ನೇಮಕಾತಿ

Railway Recruitment | ಕೇಂದ್ರ ಸರ್ಕಾರಿ ಉದ್ಯೋಗ ಮಾಡಲು ಬಯಸುವವರಿಗೆ ಭಾರತೀಯ ರೈಲ್ವೆ ಇಲಾಖೆ ಭರ್ಜರಿ ಸುದ್ದಿ ನೀಡಿದೆ. ದೇಶಾದ್ಯಂತ 18 ರೈಲ್ವೆ ವಲಯಗಳಲ್ಲಿ 6180 ತಂತ್ರಜ್ಞ ಹುದ್ದೆಗಳಿಗೆ ಭಾರತೀಯ ರೈಲ್ವೆ ಅಧಿಸೂಚನೆಯನ್ನು ಬಿಡುಗಡೆ…

Railway Recruitment

Railway Recruitment | ಕೇಂದ್ರ ಸರ್ಕಾರಿ ಉದ್ಯೋಗ ಮಾಡಲು ಬಯಸುವವರಿಗೆ ಭಾರತೀಯ ರೈಲ್ವೆ ಇಲಾಖೆ ಭರ್ಜರಿ ಸುದ್ದಿ ನೀಡಿದೆ. ದೇಶಾದ್ಯಂತ 18 ರೈಲ್ವೆ ವಲಯಗಳಲ್ಲಿ 6180 ತಂತ್ರಜ್ಞ ಹುದ್ದೆಗಳಿಗೆ ಭಾರತೀಯ ರೈಲ್ವೆ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. 51 ಇಲಾಖೆಗಳಲ್ಲಿ ಗ್ರೇಡ್ 1 & ಗ್ರೇಡ್ 3 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಈ ಅಧಿಸೂಚನೆಯ ಬಗ್ಗೆ ಈಗ ಇನ್ನಷ್ಟು ತಿಳಿದುಕೊಳ್ಳೋಣ.

ಜುಲೈ 28, 2025 ರವರೆಗೆ ಅವಕಾಶ

ಈ ನೇಮಕಾತಿ ಪ್ರಕ್ರಿಯೆಯಡಿ, ಆರ್‌ಆರ್‌ಬಿ 6,180 ತಂತ್ರಜ್ಞ ಹುದ್ದೆಗಳನ್ನು ಭರ್ತಿ ಮಾಡುತ್ತದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ 28-06-2025. ಅಭ್ಯರ್ಥಿಗಳು ಜುಲೈ 28, 2025 ರವರೆಗೆ ಅರ್ಜಿ ಸಲ್ಲಿಸಬೇಕಾಗುತ್ತದೆ.

ವಲಯವಾರು ವಿವರಗಳು

  • ಪೂರ್ವ ರೈಲ್ವೆ(ER): 1,119
  • ಪಶ್ಚಿಮ ರೈಲ್ವೆ(WR): 849
  • ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ICF): 404
  • ಉತ್ತರ ರೈಲ್ವೆ (NR): 478
  • ಉತ್ತರ ಮಧ್ಯ ರೈಲ್ವೆ (NCR): 241
  • ಮಧ್ಯ ರೈಲ್ವೆ (CR): 305

ವಯಸ್ಸು

ಗ್ರೇಡ್ I: ಕನಿಷ್ಠ 18 – ಗರಿಷ್ಠ 36 ವರ್ಷ. ಗ್ರೇಡ್ III: ಕನಿಷ್ಠ 18- ಗರಿಷ್ಠ 33 ವರ್ಷ. SC/ST ಅವರಿಗೆ 5 ವರ್ಷ. OBC ಗಳಿಗೆ 3 ವರ್ಷ. PWD ಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆಯಿದೆ.

Vijayaprabha Mobile App free

ಆಯ್ಕೆ ಪ್ರಕ್ರಿಯೆ

ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT), ದಾಖಲೆ ಪರಿಶೀಲನೆ & ವೈದ್ಯಕೀಯ ಪರೀಕ್ಷೆಯ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. CBT ಪರೀಕ್ಷೆಯಲ್ಲಿ ಋಣಾತ್ಮಕ ಅಂಕಗಳಿವೆ (ಪ್ರತಿ ತಪ್ಪು ಉತ್ತರಕ್ಕೆ -0.33). ಆಯ್ಕೆಯಾದ ಅಭ್ಯರ್ಥಿಗಳ ವೇತನವು ಗ್ರೇಡ್ I ಉದ್ಯೋಗಿಗಳಿಗೆ 29,200 ರಿಂದ 92,300 ರೂ. ಮತ್ತು ಗ್ರೇಡ್ III ಉದ್ಯೋಗಿಗಳಿಗೆ 19,900 ರಿಂದ 63,200 ರೂ ಆಗಿದೆ…

ಅರ್ಜಿ ಸಲ್ಲಿಸುವ ವಿಧಾನ

  • ಆಸಕ್ತ ಅಭ್ಯರ್ಥಿಗಳು ಮೊದಲು ಅಧಿಕೃತ ವೆಬ್ ಸೈಟ್ ಗೆ https://indianrailways.gov.in ಭೇಟಿ ನೀಡಬೇಕು.
  • ವೈಯಕ್ತಿಕ ಮತ್ತು ಶೈಕ್ಷಣಿಕ ಅರ್ಹತೆಗಳ ವಿವರಗಳನ್ನು ನಮೂದಿಸಬೇಕು.
  • ಅರ್ಹತೆಗಳಿಗೆ ಸಂಬ೦ಧಿಸಿದ ಎಲ್ಲಾ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕು.
  • ಸಾಮಾನ್ಯ, OBC, EWS ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ₹500. – SC, ST, ಮಹಿಳೆಯರು & ದಿವ್ಯಾಂಗ ಅಭ್ಯರ್ಥಿಗಳಿಗೆ ₹250.
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.