Kidney Stone | ಕಿಡ್ನಿ ಸ್ಟೋನ್ ಉಂಟಾಗುವುದು ಹೇಗೆ..? ಕಿಡ್ನಿ ಸ್ಟೋನ್ ಸಮಸ್ಯೆಗೆ ಈ ನೀರು ಹೇಳಿ ಮಾಡಿಸಿದ ಮನೆಮದ್ದು..!

Kidney stone : ಇತ್ತೀಚಿಗೆ ಕಿಡ್ನಿ ಸ್ಟೋನ್ ಸಮಸ್ಯೆ (Kidney stone disease) ಸರ್ವೇಸಾಮಾನ್ಯವಾಗಿದ್ದು, ಮೂತ್ರದಲ್ಲಿ ಹೆಚ್ಚು ಲವಣಾಂಶಗಳು ಶೇಖರಣೆಯಾಗಿ ಘನರೂಪಕ್ಕೆ ಮಾರ್ಪಟ್ಟು ಮೂತ್ರಕೋಶದಲ್ಲಿ ಕಲ್ಲುಗಳು (Stones in the Bladder) ಉಂಟಾಗುತ್ತವೆ. ಈ…

Solution for Kidney Stone Problem

Kidney stone : ಇತ್ತೀಚಿಗೆ ಕಿಡ್ನಿ ಸ್ಟೋನ್ ಸಮಸ್ಯೆ (Kidney stone disease) ಸರ್ವೇಸಾಮಾನ್ಯವಾಗಿದ್ದು, ಮೂತ್ರದಲ್ಲಿ ಹೆಚ್ಚು ಲವಣಾಂಶಗಳು ಶೇಖರಣೆಯಾಗಿ ಘನರೂಪಕ್ಕೆ ಮಾರ್ಪಟ್ಟು ಮೂತ್ರಕೋಶದಲ್ಲಿ ಕಲ್ಲುಗಳು (Stones in the Bladder) ಉಂಟಾಗುತ್ತವೆ.

ಈ ಕಲ್ಲುಗಳು ಮೂತ್ರನಾಳದಲ್ಲಿ ಸೇರಿಕೊಂಡು ಮೂತ್ರ ಹರಿವನ್ನು ತಡೆಯುವಾಗ ಹೆಚ್ಚು ನೋವು ಕಾಣಿಸಿಕೊಳ್ಳುತ್ತದೆ. ಇದರಿಂದ ಬೆನ್ನು, ಕಿಬ್ಬೊಟ್ಟೆ ಮತ್ತು ಹೊಟ್ಟೆಯ ಇತರ ಭಾಗದಲ್ಲಿ ನೋವು ಕಂಡುಬರುವುದು. ಕಲ್ಲು ದೊಡ್ಡದಾಗುತ್ತಿದ್ದಂತೆ ಆ ಭಾಗವೂ ಕೂಡ ಊದಿಕೊಳ್ಳುತ್ತದೆ.

Kidney Stone Problem

Vijayaprabha Mobile App free

Kidney Stone Problem : ನೀರು ಕುಡಿಯುವುದರಿಂದ ಕಿಡ್ನಿ ಸ್ಟೋನ್ ತಡೆಯಬಹುದೇ..?

ಪ್ರತಿದಿನ ಹೆಚ್ಚೆಚ್ಚು ನೀರು ಕುಡಿಯುವುದರಿಂದ ದೇಹದ ಅನೇಕ ರೋಗಲಕ್ಷಣಗಳಿಂದ ದೂರ ಉಳಿಯಬಹುದು. ಕಿಡ್ನಿ ಸ್ಟೋನ್ ಸಮಸ್ಯೆಗಳಿಂದ ಬಳಲುತ್ತಿರುವವರು ದಿನನಿತ್ಯ ಕನಿಷ್ಠ ಮೂರು ಲೀಟರ್ ನೀರನ್ನು ಸೇವಿಸಬೇಕು. ಹೀಗೆ ಮಾಡುವುದರಿಂದ ದೇಹದಲ್ಲಿನ ಲವಣಾಂಶಗಳು ಮೂತ್ರದ ರೂಪದಲ್ಲಿ ದೇಹದಿಂದ ಹೊರಹೋಗಿ ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಸುಲಭವಾಗಿ ಪಾರಾಗಬಹುದಾಗಿದ್ದು, ಕಲ್ಲಂಗಡಿ, ಪಪ್ಪಾಯ, ದ್ರಾಕ್ಷಿ, ಅನಾನಸು ಮತ್ತು ಬೂದುಗುಂಬಳಕಾಯಿಯನ್ನು ಹೆಚ್ಚಾಗಿ ಬಳಸಬೇಕು.

ಇದನ್ನೂ ಓದಿ: Alcohol | ಮದ್ಯಪಾನಿಗಳೇ ಎಚ್ಚರ…ಮದ್ಯಪಾನ ಸೇವನೆಯಿಂದ ದೇಹದ ಈ ಭಾಗಗಳಿಗೆ ಹಾನಿ!

ಕಿಡ್ನಿ ಸ್ಟೋನ್ ತಡೆಯಲು ಆಹಾರ ಕ್ರಮ ಪರಿಣಾಮಕಾರಿ

ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಬಳಲುತ್ತಿರುವವರು ತಮ್ಮ ಆಹಾರ ಕ್ರಮವನ್ನು ಬದಲಿಸಿಕೊಳ್ಳಬೇಕು. ಹೌದು, ಅತಿ ಹೆಚ್ಚಾಗಿ ಉಪ್ಪು ಬಳಕೆ ಮಾಡುವುದರಿಂದ ಕಿಡ್ನಿ ಸ್ಟೋನಿಗೆ ಕಾರಣವಾಗಬಹುದು. ಆದ್ದರಿಂದ ಉಪ್ಪನ್ನು ಬಳಸುವುದು ಕಡಿಮೆ ಮಾಡಬೇಕು. ಬಾಳೆದಿಂಡು ಮತ್ತು ಅದರ ರಸದ ಸೇವನೆ ಉಪಯುಕ್ತ. ಬಾರ್ಲಿ ನೀರು ಮತ್ತು ಹುರುಳಿ ಕಾಳು ಹೆಸರು ಕಾಳು ಬೇಯಿಸಿದ ನೀರನ್ನು ಸೇವಿಸುವುದು ತುಂಬಾ ಒಳ್ಳೆಯದು. ಟೊಮ್ಯಾಟೋ, ಕಾಫಿ, ಚಹಾ, ಹಸಿರು ಚಹಾ, ಚಾಕಲೇಟ್, ಕೂಲ್ ಡ್ರಿಂಕ್ಸ್, ಸೋಡಾ ಮಾಂಸ ಸೇವನೆಯನ್ನು ನಿಲ್ಲಿಸಬೇಕು.

ಇದನ್ನೂ ಓದಿ: Iodine deficiency | ಅಯೋಡಿನ್ ಕೊರೆತೆಯನ್ನು ನೀಗಿಸಲು ಸೇವಿಸಬೇಕಾದ ಆಹಾರಗಳು

Kidney Stone Problem : ಕಿಡ್ನಿ ಸ್ಟೋನ್ ಸಮಸ್ಯೆಗೆ ಬಾರ್ಲಿ ನೀರು ಹೇಳಿ ಮಾಡಿಸಿದ ಮನೆಮದ್ದು..!

ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವವರು ಬಾರ್ಲಿ ನೀರನ್ನು ತಪ್ಪದೇ ಸೇವನೆ ಮಾಡಬೇಕು. ಹೌದು, ಬಾರ್ಲಿ ನೀರು ಕಿಡ್ನಿ ಕಲ್ಲು ನಿರ್ಮಾಣವಾಗದಂತೆ ತಡೆಯುವುದು ಮಾತ್ರವಲ್ಲದೆ, ಅದನ್ನು ಹೊರಗೆ ಹಾಕುವುದು. ನಿಯಮಿತವಾಗಿ ಬಾರ್ಲಿ ನೀರು ಕುಡಿದರೆ, ಆಗ ಕಿಡ್ನಿ ಕಲ್ಲನ್ನು ಪರಿಣಾಮಕಾರಿಯಾಗಿ ಹೊರಗೆ ಹಾಕಬಹುದು ಮತ್ತು ಅದು ನಿರ್ಮಾಣವಾಗದಂತೆ ತಡೆಯಬಹುದು. ಬಾರ್ಲಿಯಲ್ಲಿ ಉತ್ತಮ ಪ್ರಮಾಣದ ಮೆಗ್ನಿಶಿಯಂ ಅಂಶವಿದ್ದು, ಇದು ಕ್ಯಾಲ್ಸಿಯಂ ಆಕ್ಸಲೇಟ್ ಕಲ್ಲನ್ನು ಕರಗಿಸುತ್ತದೆ. ಬಾರ್ಲಿಯು ತುಂಬಾ ಸುಲಭ ಹಾಗೂ ಅಗ್ಗವಾಗಿ ಸಿಗುವಂತಹ ಧಾನ್ಯವಾಗಿದೆ.

ಇದನ್ನೂ ಓದಿ: Sugar consumption | ಸಕ್ಕರೆ ಸೇವನೆಯಿಂದ ದೇಹದ ಮೇಲೆ ಆಗುವ ಪರಿಣಾಮಗಳ ಬಗ್ಗೆ ಗೊತ್ತಾ? ಇಲ್ಲಿದೆ ನೋಡಿ

ಇದನ್ನು ಕುಡಿದರೆ ಯಾವತ್ತೂ ಕೂಡ ಕಿಡ್ನಿ ಸ್ಟೋನ್ ಆಗುವುದಿಲ್ಲ..!

ಪದೇಪದೆ ಕಿಡ್ನಿ ಸ್ಟೋನ್ ಅಥವಾ ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದವರು ಇದನ್ನು ತಪ್ಪದೆ ಟ್ರೈ ಮಾಡಿ. ಬಾಳೆದಿಂಡು ಮೂತ್ರವರ್ಧಕ ಗುಣಲಕ್ಷಣಗಳನ್ನು ಹೊಂದಿರುವ ಒಂದು ಆಹಾರ ಪದಾರ್ಥವಾಗಿದೆ. ಕಿಡ್ನಿಗಳಲ್ಲಿ ಕ್ಯಾಲ್ಸಿಯಂ ಶೇಖರಣೆಯಾಗುವುದು ತಪ್ಪುತ್ತದೆ ಮತ್ತು ಈಗಾಗಲೇ ಶೇಖರಣೆಯಾಗಿರುವ ಗಟ್ಟಿ ಆಕಾರದ ಕ್ಯಾಲ್ಸಿಯಂ ಹೊರ ಹೋಗಲಿದ್ದು, ಇದರಿಂದ ಮುಂಬರುವ ದಿನಗಳಲ್ಲಿ ಕಿಡ್ನಿ ಕಲ್ಲುಗಳು ಆಗುವ ಸಾಧ್ಯತೆ ತಪ್ಪಿಸುತ್ತದೆ.

ವಿಡಿಯೋ ಕೃಪೆ – Vistara Health

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.

Leave a Reply