ಚಳಿಗಾಲದಲ್ಲಿ ಕಟ್ಟಿದ ಮೂಗಿನಿಂದ ಮುಕ್ತಿ ಪಡೆಯುವುದು ಹೇಗೆ?

ಚಳಿಗಾಲದಲ್ಲಿ ಕಟ್ಟಿದ ಮೂಗಿನಿಂದ ಮುಕ್ತಿ ಪಡೆಯುವುದು ಹೇಗೆ? ಭಾರತದಲ್ಲಿ ಡಿಸೆಂಬರ್ ತಿಂಗಳಿನಲ್ಲಿ ಚಳಿಗಾಲ ಬರುತ್ತದೆ. ಈ ಸಮಯದಲ್ಲಿ ಬಹುತೇಕ ಜನರು ಕಟ್ಟಿದ ಮೂಗಿನ ಸಮಸ್ಯೆಗಳನ್ನು ಎದುರಿಸುತ್ತಾರೆ. ಈ ಸಮಸ್ಯೆಯು ದಿನನಿತ್ಯದ ಜೀವನದ ಮೇಲೆ ಪರಿಣಾಮ…

ಚಳಿಗಾಲದಲ್ಲಿ ಕಟ್ಟಿದ ಮೂಗಿನಿಂದ ಮುಕ್ತಿ ಪಡೆಯುವುದು ಹೇಗೆ?

ಭಾರತದಲ್ಲಿ ಡಿಸೆಂಬರ್ ತಿಂಗಳಿನಲ್ಲಿ ಚಳಿಗಾಲ ಬರುತ್ತದೆ. ಈ ಸಮಯದಲ್ಲಿ ಬಹುತೇಕ ಜನರು ಕಟ್ಟಿದ ಮೂಗಿನ ಸಮಸ್ಯೆಗಳನ್ನು ಎದುರಿಸುತ್ತಾರೆ. ಈ ಸಮಸ್ಯೆಯು ದಿನನಿತ್ಯದ ಜೀವನದ ಮೇಲೆ ಪರಿಣಾಮ ಬೀರುತ್ತದೆ.

ಕಟ್ಟಿದ ಮೂಗಿನ ಸಮಸ್ಯೆಯು ಸಾಮಾನ್ಯವಾಗಿ ಸೈನಸ್‌ಗಳಲ್ಲಿ ರಕ್ತನಾಳಗಳ ಊತದ ಪರಿಣಾಮದಿಂದ ಎದುರಾಗುತ್ತದೆ. ಶೀತ, ಜ್ವರ, ಅಲರ್ಜಿ ಅಥವಾ ಸೈನಸ್ ಸೋಂಕು ರಕ್ತನಾಳಗಳ ಊತಕ್ಕೆ ಕಾರಣವಾಗುತ್ತದೆ.

Vijayaprabha Mobile App free

ಕ್ಯೂಮಿಡಿಫೈಯರ್ ಬಳಸುವುದು:- ಸೈನಸ್ ನೋವನ್ನು ಕಡಿಮೆ ಮಾಡಲು ಮತ್ತು ಕಟ್ಟಿದ ಮೂಗಿನ ಸಮಸ್ಯೆಯನ್ನು ನಿವಾರಿಸಲು ಇದು ತ್ವರಿತ ಹಾಗೂ ಸುಲಭವಾದ ಮಾರ್ಗವಾಗಿದೆ. ಯಂತ್ರವು ನೀರನ್ನು ತೇವಾಂಶವಾಗಿ ಪರಿವರ್ತಿಸುವ ಮೂಲಕ ಕೋಣೆಯಲ್ಲಿ ಆದ್ರ್ರತೆಯನ್ನು ಹೆಚ್ಚಿಸುತ್ತದೆ.

ಈ ತೇವಾಂಶವುಳ್ಳ ಗಾಳಿಯಲ್ಲಿ ಉಸಿರಾಡುವುದರಿಂದ ನಿಮ್ಮ ಮಗು ಮತ್ತು ಸೈನಸ್‌ಗಳಲ್ಲಿ ಊದಿಕೊಂಡ ರಕ್ತನಾಳಗಳನ್ನು ಶಮನಗೊಳಿಸುತ್ತದೆ.

ಬಿಸಿ ನೀರಿನಿಂದ ಸ್ನಾನ ಮಾಡುವುದು:- ನೀವು ಎಂದಾದರೂ ಕಟ್ಟಿದ ಮೂಗಿನ ಸಮಸ್ಯೆ ಎದುರಿಸುತ್ತಿರುವಾಗ ಬಿಸಿ ನೀರಿನಿಂದ ಸ್ನಾನ ಮಾಡಿದ ನಂತರ ನಿಮಗೆ ಚೆನ್ನಾಗಿ ಉಸಿರಾಡಲು ಸಾಧ್ಯವಾದ ಅನುಭವವಾಗಿದೆಯೇ? ಅದಕ್ಕೆ ಕೆಲವು ಕಾರಣಗಳಿವೆ.

ಬಿಸಿ ನೀರಿನ ಸಣಣದ ವೇಳೆ ಉಗಿಯು ನಿಮ್ಮ ಮೂಗಿನಲ್ಲಿರುವ ಲೋಳೆಯನ್ನು ತೆಳುಗೊಳಿಸಲು ಮತ್ತು ಊತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಬಿಸಿ ನೀರಿನಿಂದ ಸ್ನಾನ ಮಾಡುವುದು ನಿಮ್ಮ ಉಸಿರಾಟವನ್ನು ಸಾಮಾನ್ಯ ಸ್ಥಿತಿಗೆ ತರಲು ಸಹಾಯ ಮಾಡುತ್ತದೆ.

ಹೈಡ್ರೆಟೆಡ್ ಆಗಿರಿ:- ನಿಮಗೆ ಶೀತ ಅಥವಾ ಜ್ವರದ ರೋಗಲಕ್ಷಣಗಳು ಕಂಡುಬಂದರೆ ಸಾಕಷ್ಟು ದ್ರವ ಪದಾರ್ಥಗಳನ್ನು ಕುಡಿಯುವುದು ಮುಖ್ಯ.

ದೇಹದಲ್ಲಿ ಹೈಡೇಷನ್ ಕಾಪಾಡಿಕೊಳ್ಳುವುದು ನಿಮ್ಮ ಮಗಿನ ಮಾರ್ಗಗಳಲ್ಲಿನ ಲೋಳೆಯನ್ನು ತೆಳುಗೊಳಿಸಲು ಸಹಾಯ ಮಾಡುತ್ತದೆ. ಮೂಗಿನಿಂದ ದ್ರವ ಹೊರಹಾಕುತ್ತದೆ ಹಾಗೂ ಸೈನಸ್ ಗಳಲ್ಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ಇದರಿಂದಾಗಿ ಊತ ಮತ್ತು ಕಿರಿಕಿರಿ ಸಮಸ್ಯೆ ಇರುವುದಿಲ್ಲ.

ಸಲೈನ್ ಸ್ಪೇ ಬಳಸಿ:- ಸಲೈನ್ ಸ್ಪೇ ಬಳಕೆಯು ನಿಮ್ಮ ಮೂಗಿನ ಹೊಳ್ಳೆಗಳಲ್ಲಿ ತೇವಾಂಶವನ್ನು ಹೆಚ್ಚಿಸುವ ಸರಳ ಉಪ್ಪುನೀರಿನ ಪರಿಹಾರವಾಗಿದೆ. ಇದು ಮೂಗಿನ ಶುಷ್ಕತೆ (ಮೂಗಿನ ರಕ್ತಸ್ರಾವವನ್ನು ತಡೆಯಲು ಸಹಾಯ ಮಾಡುತ್ತದೆ), ನೆಗಡಿ ಅಥವಾ ಅಲರ್ಜಿಗಳಿಗೆ ಸಂಬಂಧಿಸಿದ ಸಮಸ್ಯೆ ಅಥವಾ ಗೊರಕೆಯಿಂದ ಪರಿಹಾರ ನೀಡುವಲ್ಲಿ ಸಹಾಯ ಮಾಡುತ್ತದೆ.

ಸೈನಸ್ ಗಳನ್ನು ಸ್ವಚ್ಛಗೊಳಿಸಿ:- ನಿಮ್ಮ ಕಟ್ಟಿರುವ ಮೂಗಿನ ಹೊಳ್ಳೆಗಳಲ್ಲಿ ನೀರು ಹರಿಸುವ(ನಟಿ ಪಾಟ್ ಸಹಾಯದಿಂದ) ಮೂಲಕ ಸ್ವಚ್ಛಗೊಳಿಸಬಹುದು. ನೆಟಿ ಪಾಟ್ ಎನ್ನುವುದು ನಿಮ್ಮ ಮೂಗಿನ ಮಾರ್ಗಗಳಿಂದ ಲೋಳೆಯ ಮತ್ತು ದ್ರವಗಳನ್ನು ಹೊರಹಾಕಲು ವಿನ್ಯಾಸಗೊಳಿಸಲಾದ ಪರಿಕರವಾಗಿದೆ.

ಇದೊಂದು ರೀತಿಯ ಲವಣಯುಕ್ತ ಮಗಿನ ನೀರಾವರಿ (ಎಸ್‌ಎನ್‌ಐ) ಚಿಕಿತ್ಸೆಯಾಗಿದೆ. ನಟಿ ಪಾಟ್ ನಲ್ಲಿ ಉಪ್ಪು ನೀರಿನ ದ್ರಾವಣ ತುಂಬಿ, ತಲೆಯನ್ನು ಸ್ವಲ್ಪ ಬಾಗಿಸಿ ದ್ರಾವಣವನ್ನು ಒಂದು ಮೂಗಿನ ಹೊಳ್ಳೆಗೆ ಸುರಿಯಬೇಕು.

ಬೆಚ್ಚಗಿನ ಶಾಖ ಕೊಡುವುದು:- ಮೊದಲು ಬೆಚ್ಚಗಿನ ನೀರಿನಲ್ಲಿ ಟವೆಲ್ ನೆನಸಿ, ನೀರಿನಿಂದ ಹೊರತೆಗೆದು ಟವಲ್ ಹಿಂಡಿ, ನಂತರ ಅದನ್ನು ಮಡಚಿ ಮತ್ತು ನಿಮ್ಮ ಮೂಗು ಮತ್ತು ಹಣೆಯ ಮೇಲೆ ಇರಿಸಿ.

ಬೆಚ್ಚಗಿನ ಶಾಖ ನೋವಿನಿಂದ ಆರಾಮ ನೀಡುತ್ತದೆ ಮತ್ತು ಮೂಗಿನ ಹೊಳ್ಳೆಗಳಲ್ಲಿನ ಊತವನ್ನು ನಿವಾರಿಸಲು ಸಹಾಯ ಮಾಡುತ್ತದೆ.

ಡಿಕೊಂಜೆಸ್ಟೆಂಟ್ ಔಷಧಿ:- “ಡಿಕೊಂಜೆಸ್ಟೆಂಟ್ ಔಷಧಿಯು ಊತವನ್ನು ಕಡಿಮೆ ಮಾಡಲು ಮತ್ತು ಕಿರಿಕಿರಿಯನ್ನುಂಟು ಮಾಡುವ ಮೂಗಿನ ಹೊಳ್ಳೆಗಳ ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಈ ಔಷಧಿಯು ಎರಡು ರೂಪಗಳಲ್ಲಿ ಲಭ್ಯವಿರುತ್ತದೆ. ವೈದ್ಯರ ಸೂಚನೆ ಇಲ್ಲದೆಯೇ 3 ದಿನಗಳಿಗಿಂತ ಹೆಚ್ಚು ಕಾಲ ಈ ಔಷಧಿಯನ್ನು ತೆಗೆದುಕೊಳ್ಳಬಾರದು ಎಂಬುದನ್ನು ನೆನಪಿಡಿ.”

ಕಟ್ಟಿದ ಮೂಗಿನ ಸಮಸ್ಯೆ ದೂರಗೊಳಿಸಲು ಸಹಾಯ ಮಾಡುವ ಆಹಾರಗಳು:

ಚಿಕನ್ ಸೂಪ್

ತಾಜಾ

ಅನಾನಸ್ ಹಣ್ಣು

ನಿಂಬೆಹಣ್ಣು

ಶುಂಠಿ

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.