ತಿಂಗಳಿಗೆ 1.2 ಲಕ್ಷ ಸಂಬಳವಿದ್ದರೂ ಈ ಕಾರಣಕ್ಕೆ ಮದುವೆ ಬೇಡ ಎಂದ ವಧು!

ಉತ್ತರಪ್ರದೇಶ: ವಿವಾಹ ಎನ್ನುವುದು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತವೆ ಎನ್ನಲಾಗುತ್ತದೆ. ಹಣೆಬರಹದಲ್ಲಿ ಇಲ್ಲದ ಮದುವೆಯನ್ನು ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಇದಕ್ಕೆ ಉದಾಹರಣೆ ಎನ್ನುವಂತೆ ಹಸೆಮಣೆ ಏರಿ, ತಾಳಿ ಕಟ್ಟುವ ವೇಳೆಗೆ, ತಿಂಗಳಿಗೆ 1.2 ಲಕ್ಷ ವೇತನ ಪಡೆಯುತ್ತಿದ್ದರೂ…

ಉತ್ತರಪ್ರದೇಶ: ವಿವಾಹ ಎನ್ನುವುದು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತವೆ ಎನ್ನಲಾಗುತ್ತದೆ. ಹಣೆಬರಹದಲ್ಲಿ ಇಲ್ಲದ ಮದುವೆಯನ್ನು ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಇದಕ್ಕೆ ಉದಾಹರಣೆ ಎನ್ನುವಂತೆ ಹಸೆಮಣೆ ಏರಿ, ತಾಳಿ ಕಟ್ಟುವ ವೇಳೆಗೆ, ತಿಂಗಳಿಗೆ 1.2 ಲಕ್ಷ ವೇತನ ಪಡೆಯುತ್ತಿದ್ದರೂ ಸಹ ವರ ಬೇಡ ಎಂದು ವಧುವೊಬ್ಬಳು ಮದುವೆಗೆ ನಿರಾಕರಿಸಿದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

ಬರುಚಾಬಾದ್ ಜಿಲ್ಲೆಯ ಯುವತಿಯೊಂದಿಗೆ ಛತ್ತೀಸ್‌ಗಢದ ಬಲರಾಮ್‌ಪುರದ ಯುವಕನ ನಿಶ್ಚಿತಾರ್ಥ ನೆರವೇರಿತ್ತು. ಎಂಜಿನಿಯರ್ ಆಗಿದ್ದ ಯುವಕ ತಿಂಗಳಿಗೆ 1.2 ಲಕ್ಷ ವೇತನ ಪಡೆಯುತ್ತಿರುವುದಾಗಿ ತಿಳಿಸಿದ್ದು, ಕುಟುಂಬದ ಬಳಿ ಎಕರೆಗಟ್ಟಲೇ ಜಮೀನು ಸಹ ಇತ್ತು. ವಧುವಿನ ಒಪ್ಪಿಗೆ ಪಡೆದು ಮನೆಯವರು ಮದುವೆ ಸಿದ್ಧತೆ ಮಾಡಿಕೊಂಡಿದ್ದರು. 

ಮದುವೆಯ ದಿನ ಇನ್ನೇನು ಹಾರ ಬದಲಿಸುವ ಸಂದರ್ಭದಲ್ಲಿ ವರ ಸರ್ಕಾರಿ ಉದ್ಯೋಗಿಯಲ್ಲ, ಖಾಸಗಿ ಉದ್ಯೋಗಿ‌ ಎಂದು ವಧುವಿಗೆ ಗೊತ್ತಾಗಿದೆ. ಇದೇ ವಿಚಾರಕ್ಕೆ ಹಾರ ಬದಲಾಯಿಸುವುದನ್ನು ನಿಲ್ಲಿಸಿ ವಧು ಮದುವೆಯೇ ಬೇಡ ಎಂದಿದ್ದಾಳೆ. ತಿಂಗಳಿಗೆ 1.2 ಲಕ್ಷ ಸಂಬಳದ ಉದ್ಯೋಗದಲ್ಲಿದ್ದರೂ ಸರ್ಕಾರಿ ಕೆಲಸ ಅಲ್ಲ ಎನ್ನುವ ಒಂದೇ ಕಾರಣಕ್ಕೆ ವಧು ಮದುವೆಗೆ ನಿರಾಕರಿಸಿದ್ದು, ಮನೆಯವರು ಮನವೊಲಿಸಲು ಎಷ್ಟೇ ಪ್ರಯತ್ನಪಟ್ಟರೂ ಮಧುವಿನ ನಿರ್ಧಾರ ಬದಲಾಗಿಲ್ಲ.

Vijayaprabha Mobile App free

ಕೊನೆಗೆ ಬೇಸತ್ತ ಎರಡೂ ಕುಟುಂಬದವರು ಮದುವೆ ಖರ್ಚನ್ನು ನೀಡುವ ಒಪ್ಪಂದದ ಮೇರೆಗೆ ಮದುವೆ ನಿಲ್ಲಿಸಲು ಒಪ್ಪಿಕೊಂಡು ವಾಪಾಸ್ ತೆರಳಿದ್ದಾರೆ. ವಧುವಿನ ನಿರ್ಧಾರದಿಂದ ಹುಡುಗಿ ಮನೆಯವರು ಪರದಾಡುವಂತಾಯಿತು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.