Actor Dhanush Aishwarya divorce : ತಮಿಳು ಚಿತ್ರರಂಗದ ತಾರಾ ಜೋಡಿ ಎಂದೇ ಕರೆಸಿಕೊಳ್ಳುವ ನಟ ಧನುಷ್-ಐಶ್ವರ್ಯ ಅವರ 20 ವರ್ಷದ ದಾಂಪತ್ಯ ಜೀವನ ಅಂತ್ಯವಾಗಿದೆ.
ಹೌದು, ನಟ ಧನುಷ್ ಮತ್ತು ಐಶ್ವರ್ಯ ರಜನಿಕಾಂತ್ (Actor Dhanush Aishwarya divorce) ಅವರಿಗೆ ವಿಚ್ಛೇದನ ನೀಡಿ ಚೆನ್ನೈನ ಕೌಟುಂಬಿಕ ನ್ಯಾಯಾಲಯ ತೀರ್ಪು ನೀಡಿದೆ. ಉಭಯ ವರ್ಗಗಳ ಒಮ್ಮತದ ಆಧಾರದ ಮೇಲೆ ಈ ಪ್ರಕರಣದ ತೀರ್ಪು ನೀಡಲಾಗಿದೆಯಂತೆ. ಇದರೊಂದಿಗೆ ತಮಿಳು ಚಿತ್ರರಂಗದ ತಾರಾ ಜೋಡಿ ಎಂದೇ ಕರೆಸಿಕೊಳ್ಳುವ ಧನುಷ್-ಐಶ್ವರ್ಯ ದಾಂಪತ್ಯ ಜೀವನ ಅಂತ್ಯಗೊಂಡಿದೆ.
ಇದನ್ನೂ ಓದಿ: ಶೀಘ್ರವೇ ಒಟಿಟಿಗೆ Bhairathi Ranagal; ಯಾವಾಗ ಗೊತ್ತಾ?
Actor Dhanush Aishwarya divorce : ಪ್ರೀತಿಸಿ ಮದುವೆಯಾಗಿದ್ದ ಧನುಷ್ ಮತ್ತು ಐಶ್ವರ್ಯ
ತಮಿಳು ಚಿತ್ರರಂಗದಲ್ಲಿ ಖ್ಯಾತ ನಟ ಧನುಷ್ ಸೂಪರ್ ಸ್ಟಾರ್ ರಜನಿಕಾಂತ್ ಅವರ ಹಿರಿಯ ಮಗಳು ಐಶ್ವರ್ಯಾ ಅವರನ್ನು ಪ್ರೀತಿಸಿ 2004 ರಲ್ಲಿ ವಿವಾಹವಾದರು. ಐಶ್ವರ್ಯಾ ಧನುಷ್ ಗಿಂತ ದೊಡ್ಡವಳಾದರೂ ಎರಡೂ ಮನೆಯವರ ಸಂಪೂರ್ಣ ಒಪ್ಪಿಗೆ ಮೇರೆಗೆ ಮದುವೆ ನಿಶ್ಚಯವಾಗಿತ್ತು.ಧನುಷ್ ಮತ್ತು ಐಶ್ವರ್ಯ ಅವರಿಗೆ ಯಾತ್ರಾ ಮತ್ತು ಲಿಂಗ ಎಂಬ ಇಬ್ಬರು ಮಕ್ಕಳಿದ್ದಾರೆ.
ಈ ಜೋಡಿ ತಮಿಳು ಚಿತ್ರರಂಗದಲ್ಲಿ ಲವ್ಲಿ ಕಪಲ್ ಎಂದೇ ಖ್ಯಾತಿ ಪಡೆದಿತ್ತು. ಧನುಷ್ ಜೊತೆ “3” ಚಿತ್ರವನ್ನು ನಿರ್ದೇಶಿಸುವ ಮೂಲಕ ಐಶ್ವರ್ಯಾ ನಿರ್ದೇಶಕರಾಗಿದ್ದರು. ಐಶ್ವರ್ಯಾ ಅವರು ವೈ ರಾಜಾ ವೈ ಮತ್ತು ಲಾಲ್ ಸಲಾಮ್ ಚಿತ್ರಗಳನ್ನು ಸಹ ನಿರ್ದೇಶಿಸಿದ್ದಾರೆ. ಜನವರಿ 2022 ರಲ್ಲಿ, ಧನುಷ್ ಮತ್ತು ಐಶ್ವರ್ಯ ಇಬ್ಬರೂ X (ಟ್ವಿಟ್ಟರ್) ಮೂಲಕ ಸುಮಾರು 18 ವರ್ಷಗಳ ತಮ್ಮ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡುವುದಾಗಿ ಘೋಷಿಸಿದ್ದರು.
ಇದನ್ನೂ ಓದಿ: Actress Nayanthara | ನಟ ಧನುಷ್ ವಿರುದ್ಧ ನಯನತಾರಾ ಗಂಭೀರ ಆರೋಪ