ನಿರುದ್ಯೋಗಿಗಳಿಗೆ Yuva Nidhi Yojana ಸೌಲಭ್ಯದಿಂದ ಸಿಗುವ ಪ್ರಯೋಜನಗಳು; ಅರ್ಜಿ ಸಲ್ಲಿಸಲು ಏನೆಲ್ಲ ದಾಖಲೆಗಳು ಬೇಕು?

Yuva Nidhi Yojana : ಕರ್ನಾಟಕ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದಾದ ಯುವನಿಧಿ ಯೋಜನೆಯನ್ನು(Yuva Nidhi Yojana) 2024 ಜನವರಿ 1ರಂದು ಜಾರಿಗೆ ತರಲಾಗಿದೆ. ಈ ಯೋಜನೆಯು ಯುವಕರಿಗೆ ತಮ್ಮದೇ ಆದ ವ್ಯವಹಾರಗಳನ್ನು ಪ್ರಾರಂಭಿಸಲು…

Yuva Nidhi Yojana

Yuva Nidhi Yojana : ಕರ್ನಾಟಕ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದಾದ ಯುವನಿಧಿ ಯೋಜನೆಯನ್ನು(Yuva Nidhi Yojana) 2024 ಜನವರಿ 1ರಂದು ಜಾರಿಗೆ ತರಲಾಗಿದೆ.

ಈ ಯೋಜನೆಯು ಯುವಕರಿಗೆ ತಮ್ಮದೇ ಆದ ವ್ಯವಹಾರಗಳನ್ನು ಪ್ರಾರಂಭಿಸಲು ಅಥವಾ ಉನ್ನತ ಶಿಕ್ಷಣವನ್ನು ಮುಂದುವರಿಸಲು ಆರ್ಥಿಕ ಬೆಂಬಲ ಮತ್ತು ಸಂಪನ್ಮೂಲಗಳನ್ನು ಒದಗಿಸುವ ಮೂಲಕ ಅವರನ್ನು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿರುವ ಉಪಕ್ರಮವಾಗಿದೆ. ಯುವ ವ್ಯಕ್ತಿಗಳು ಸ್ವಾವಲಂಬಿಗಳಾಗಲು ನಿರುದ್ಯೋಗಿ ಪದವೀಧರರಿಗೆ ಸರ್ಕಾರ ಈ ಯೋಜನೆಯಡಿ ಮಾಸಿಕ 3000 ರೂಪಾಯಿ ನೆರವನ್ನು ಎರಡು ವರ್ಷದ ಅವಧಿಗೆ ನೀಡಲಿದೆ.

ಇದನ್ನೂ ಓದಿ: Yuva Nidhi Yojana : ಯುವನಿಧಿ ಹಣಕ್ಕಾಗಿ ಇಂದೇ ತಪ್ಪದೇ ಈ ಕೆಲಸ ಮಾಡಿ!

Vijayaprabha Mobile App free

Yuva Nidhi Yojana ಫಲಾನುಭವಿಗಳಿಗೆ ಎಷ್ಟು ಆರ್ಥಿಕ ನೆರವು ಸಿಗಲಿದೆ?

yuvanidhi yojana

ಯುವನಿಧಿ ಯೋಜನೆಯ ಅಡಿಯಲ್ಲಿ, ಉತ್ತಮ ಶಿಕ್ಷಣವಿದ್ದರೂ ಉದ್ಯೋಗವಿಲ್ಲದ ನಿರುದ್ಯೋಗಿಗಳಿಗೆ ಸಹಾಯಧನ ನೀಡಲಾಗುತ್ತದೆ. ಅರ್ಹ ಫಲಾನುಭವಿಗಳ ಖಾತೆಗೆ ನೇರವಾಗಿ ಹಣವನ್ನು ಜಮೆ ಮಾಡಲಾಗುತ್ತಿದ್ದು, ನಿರುದ್ಯೋಗಿಗಳು ಮಾಸಿಕವಾಗಿ 1500 ರೂಪಾಯಿಯಿಂದ 3000 ರೂಪಾಯಿವರೆಗೆ ಪಡೆಯಬಹುದಾಗಿದೆ.

ನಿರುದ್ಯೋಗಿ ಪದವೀಧರರಿಗೆ ತಿಂಗಳಿಗೆ 3000 ರೂಪಾಯಿ ಮತ್ತು ಡಿಪ್ಲೋಮಾ ಪಾಸ್ ಆದವರಿಗೆ 1500 ರೂಪಾಯಿ ಮಾಸಿಕ ಭತ್ಯೆಯನ್ನು ನೀಡಲಾಗುತ್ತದೆ. ಈ ಮೂಲಕ ದೇಶದ ಆರ್ಥಿಕ ಬೆಳವಣಿಗೆಗೆ ಕೊಡುಗೆ ನೀಡಲು ಅವರನ್ನು ಪ್ರೋತ್ಸಾಹಿಸಲಾಗುತ್ತದೆ.

ಇದನ್ನೂ ಓದಿ: BPL card | ಇಂದಿನಿಂದ BPL ಕಾರ್ಡ್‌ಗಳ ಪರಿಷ್ಕರಣೆ ಆರಂಭ; BPL ಕಾರ್ಡ್‌ ಮರಳಿ ಪಡೆಯುವುದು ಹೇಗೆ?

ನಿರುದ್ಯೋಗಿಗಳಿಗೆ ಯುವನಿಧಿ ಯೋಜನೆಯ ಸೌಲಭ್ಯದಿಂದ ಸಿಗುವ ಪ್ರಯೋಜನಗಳು

ನಿರುದ್ಯೋಗಿ ಯುವಕರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಯುವನಿಧಿ ಯೋಜನೆಯನ್ನು ಆರಂಭ ಮಾಡಲಾಗಿದೆ. ಈ ಯೋಜನೆ ಮುಖ್ಯವಾಗಿ ಯುವಕರಲ್ಲಿ ತಾಂತ್ರಿಕ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು, ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಮತ್ತು ಆರ್ಥಿಕ ಸ್ವಾವಲಂಬನೆ ಸಾಧಿಸಲು ಸಹಾಯ ಮಾಡುತ್ತದೆ.

ಡಿಪ್ಲೋಮಾ ಮತ್ತು ಡಿಗ್ರಿ ಮಾಡಿದ ವಿದ್ಯಾರ್ಥಿಗಳಿಗೆ ಈ ಯೋಜನೆ ಸಹಾಯವಾಗಲಿದೆ. ಪ್ರತಿ ತಿಂಗಳು ಭತ್ಯೆ ಪಡೆಯಬಹುದು. ಯುವಕರಿಗೆ ಉದ್ಯೋಗ ಲಭ್ಯವಾಗುವವರೆಗೆ ಮಾಸಿಕ ಭತ್ಯೆ ಸಿಗುತ್ತದೆ. ಹಣಕಾಸು ಸಹಾಯವು ನೇರವಾಗಿಯೇ ಖಾತೆಗೆ ಜಮೆಯಾಗಲಿದೆ.

ಇದನ್ನೂ ಓದಿ: BPL card | BPL ಕಾರ್ಡ್ ಫಲಾನುಭವಿಗಳಿಗೆ ರಿಲೀಫ್ : ಸರ್ಕಾರದಿಂದ ಮಹತ್ವದ ಆದೇಶ

ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಏನೆಲ್ಲ ದಾಖಲೆಗಳು ಬೇಕು?

ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸುವ ನಿರುದ್ಯೋಗಿ ಪದವಿಧರರು ಕರ್ನಾಟಕದ ನಿವಾಸಿ ಆಗಿರುವ ಬಗ್ಗೆ ಸೂಕ್ತ ದಾಖಲೆ ಬೇಕು. ದ್ವಿತೀಯ ಪಿಯುಸಿ ಮತ್ತು ಪದವಿ ಉತ್ತೀರ್ಣದ ಅಂಕಪಟ್ಟಿ, ಆಧಾರ್ ಕಾರ್ಡ್ ಜೊತೆಗೆ ಅಗತ್ಯವಿದ್ದರೆ ಜಾತಿ ಪ್ರಮಾಣ ಪತ್ರ, ಬ್ಯಾಂಕ್ ಖಾತೆ ವಿವರ, ಆದಾಯ ಪ್ರಮಾಣ ಪತ್ರ, ಪಾಸ್‌ಪೋರ್ಟ್ ಗಾತ್ರದ ಫೋಟೋ, ಮೊಬೈಲ್ ಸಂಖ್ಯೆ ಬೇಕಾಗಿದ್ದು, ಶಿಶಿಕ್ಷ ವೇತನ ಪಡೆಯುವವರಿಗೆ ಈ ಆರ್ಥಿಕ ನೆರವು ಸಿಗುವುದಿಲ್ಲ. ಸರ್ಕಾರಿ ಯೋಜನೆಯಡಿ ಸಾಲ ಪಡೆದು ಸ್ವಂತ ಉದ್ಯಮ ನಡೆಸುವವರು ಈ ಯೋಜನೆಗೆ ಅರ್ಹರಲ್ಲ.

ಯುವನಿಧಿ ಕಂತಿನ ಜೊತೆಗೆ ಉದ್ಯೋಗದ ಭರವಸೆ ನೀಡಲಿದೆಯಾ ಸರ್ಕಾರ?

ರಾಜ್ಯ ಸರಕಾರ ಯುವನಿಧಿ ಯೋಜನೆ ಜೊತೆಗೆ ಯುವನಿಧಿ ಪ್ಲಸ್ ಉಪಕ್ರಮವನ್ನು ಬಜೆಟ್‌ನಲ್ಲಿ ಘೋಷಿಸಿದೆ. ಯುವನಿಧಿ ಪ್ಲಸ್ ವಿವಿಧ ಚಾಲ್ತಿಯಲ್ಲಿರುವ ಕೌಶಲ್ಯ ಕೋರ್ಸ್‌ಗಳ ಅಡಿಯಲ್ಲಿ ಉದ್ಯೋಗ ಮಾರುಕಟ್ಟೆಗೆ 25,000 ಯುವಕರನ್ನು ಸಿದ್ಧಪಡಿಸುವ ಒಂದು ಉಪಕ್ರಮವಾಗಿದದ್ದು, ಈ ಯೋಜನೆಯು ನಿರುದ್ಯೋಗಿ ಯುವಕರಿಗೆ ಮಾಸಿಕ ನಿರುದ್ಯೋಗ ಭತ್ಯೆ ಜೊತೆಗೆ ಉದ್ಯೋಗವನ್ನು ನೀಡುವ ಗುರಿ ಹೊಂದಿದೆ.
ಕೃಪೆ: Tv9 Kannada

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.